LIC Pension Plan:ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ!
*2021ರ ಜುಲೈ 1ರಂದು ಸರಳ ಪಿಂಚಣಿ ಯೋಜನೆ ಪರಿಚಯಿಸಿದ ಎಲ್ ಐಸಿ
*ನಿವೃತ್ತಿ ನಂತರದ ಬದುಕಿಗೆ ಹೂಡಿಕೆ ಮಾಡೋರಿಗೆ ಉತ್ತಮ ಯೋಜನೆ
*ಪಾಲಿಸಿ ಪ್ರಾರಂಭವಾದ ಆರು ತಿಂಗಳ ಬಳಿಕ ಹೂಡಿಕೆ ಮೇಲೆ ಯಾವಾಗ ಬೇಕಾದ್ರೂ ಸಾಲ ಪಡೆಯೋ ಸೌಲಭ್ಯ
Business Desk: ಭಾರತೀಯ ಜೀವ ವಿಮಾ ನಿಗಮ (LIC) ಹೂಡಿಕೆದಾರರಿಗೆ (Investors)ಅನೇಕ ಸುರಕ್ಷಿತ ಪಾಲಿಸಿಗಳನ್ನು (Policies) ಆಗಾಗ ಪರಿಚಯಿಸುತ್ತಲೇ ಇರುತ್ತದೆ. 2021ರ ಜುಲೈ 1ರಂದು ಎಲ್ಐಸಿ 'ಸರಳ ಪಿಂಚಣಿ' ( Saral Pension Yojana) ಎಂಬ ಯೋಜನೆಯನ್ನು ಪರಿಚಯಿಸಿದ್ದು, ಇದರಲ್ಲಿ ಪಾಲಿಸಿದಾರ (Policyholder) ಕೇವಲ ಒಂದು ಪ್ರೀಮಿಯಂ(Premium) ಪಾವತಿಸಿ ಮಾಸಿಕ 12 ಸಾವಿರ ರೂ. ಪಿಂಚಣಿ (Pension) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಿವೃತ್ತಿ (Retirement) ನಂತರ ಜೀವನಕ್ಕಾಗಿ ಹೂಡಿಕೆ (Invest) ಮಾಡಲು ಯೋಚಿಸುತ್ತಿರೋರಿಗೆ ಇದು ಉತ್ತಮ ಯೋಜನೆಯಾಗಿದೆ.
ಎಲ್ ಐಸಿಯ (LIC) ಪಾಲಿಸಿಗಳಲ್ಲಿ ಹೂಡಿಕೆ (Invest) ಮಾಡೋದು ಸುರಕ್ಷಿತ ಮಾತ್ರವಲ್ಲ, ಉತ್ತಮ ರಿಟರ್ನ್ಸ್ (Returns)ಕೂಡ ನೀಡುತ್ತದೆ. ಅಲ್ಲದೆ, ಅನಿರೀಕ್ಷಿತ ಘಟನೆಗಳು ಘಟಿಸಿದ ಸಂದರ್ಭದಲ್ಲಿ ಪಾಲಿಸಿದಾರನ (Policyholder) ಕುಟುಂಬಕ್ಕೆ ಖಚಿತ ಮೊತ್ತವನ್ನು ಎಲ್ ಐಸಿ ಪಾವತಿಸುತ್ತದೆ. ಪ್ರಸ್ತುತ ಕೋವಿಡ್ -19 (COVID-19) ಭೀತಿಯ ನಡುವೆ ಬದುಕು ನಡೆಸಬೇಕಾದ ಅನಿವಾರ್ಯತೆಯಿದೆ. ಇಂಥ ಸಂದರ್ಭಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹಾಗೂ ಕುಟುಂಬದ ಭವಿಷ್ಯದ ಬಗ್ಗೆ ಯೋಚಿಸೋದು ಅತ್ಯಗತ್ಯ. ಹೀಗಾಗಿ ಭವಿಷ್ಯಕ್ಕೆ ಸುರಕ್ಷತೆ ಹಾಗೂ ಭದ್ರತೆ ಒದಗಿಸೋ ಎಲ್ ಐಸಿ ಪಾಲಿಸಿಗಳಲ್ಲಿ ಹೂಡಿಕೆ (Invest) ಮಾಡೋದು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವೆನಿಸುತ್ತದೆ. ಅದ್ರಲ್ಲೂ ಹೆಚ್ಚಿನ ಉಳಿತಾಯವಿಲ್ಲದೆ, ತಿಂಗಳ ವೇತನವನ್ನೇ ನಂಬಿಕೊಂಡು ಬದುಕುತ್ತಿರೋ ವ್ಯಕ್ತಿ ಎಲ್ ಐಸಿ ಪಾಲಿಸಿಗಳಲ್ಲಿ ಹೂಡಿಕೆ (Invest) ಮಾಡೋದು ಉತ್ತಮ ನಿರ್ಧಾರವೇ ಆಗಿದೆ.
LIC Aadhaar Shila : ಕಡಿಮೆ ಹೂಡಿಕೆ ಮಾಡಿ ಲಕ್ಷಾಂತರ ಗಳಿಸಿ, ಮಹಿಳೆಯರಿಗೆ ಅತ್ಯುತ್ತಮವಾಗಿದೆ ಈ ಪ್ಲಾನ್
ಏನಿದು ಸರಳ ಪಿಂಚಣಿ ಯೋಜನೆ?
ಎಲ್ಐಸಿ ಸರಳ ಪಿಂಚಣಿ ಯೋಜನೆಯಡಿಯಲ್ಲಿ ಪಾಲಿಸಿದಾರರಿಗೆ (Policyholders) ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಮೊದಲ ಆಯ್ಕೆಯಲ್ಲಿ ಖರೀದಿಸಿದ ಬೆಲೆಗೆ ಶೇ.100ರಷ್ಟು ರಿಟರ್ನ್ (Return) ನೀಡಲಾಗುತ್ತದೆ. ಪಾಲಿಸಿಯ ಪ್ರಯೋಜನಗಳನ್ನು ಹೂಡಿಕೆದಾರರಿಗೆ (Investors)ಮಾತ್ರ ಸೀಮಿತಗೊಳಿಸಲಾಗುತ್ತದೆ. ಪಾಲಿಸಿದಾರ ಜೀವಂತವಿರೋ ತನಕ ಮಾತ್ರ ಮಾಸಿಕ ಪಿಂಚಣಿ (Pension)ವಾಗ್ದಾನ ನೀಡಲಾಗುತ್ತದೆ. ಪಾಲಿಸಿದಾರ ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಮಾತ್ರ ನಾಮಿನಿಗೆ (Nominee) ಶೇ.100ರಷ್ಟು ರಿಟರ್ನ್(return) ಸಿಗುತ್ತದೆ. ಇನ್ನು ಎರಡನೇ ಆಯ್ಕೆಯಡಿಯಲ್ಲಿ ಎಲ್ ಐಸಿ ಸರಳ ಪಿಂಚಣಿ ಯೋಜನೆ ಜಂಟಿ ಜೀವನ ಪಿಂಚಣಿ ಪ್ಲ್ಯಾನ್ ಆಗಿದೆ. ಇದ್ರಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ಮಾಸಿಕ ಪಿಂಚಣಿ (Pension) ಪಡೆಯುತ್ತಾರೆ. ದಂಪತಿ ಮೃತಪಟ್ಟ ಸಂದರ್ಭದಲ್ಲಿ ನಾಮಿನಿ (Nominee) ಮೂಲ ಮೊತ್ತ ಪಡೆಯಲು ಮಾತ್ರ ಅರ್ಹತೆ ಗಳಿಸುತ್ತಾನೆ.
Vodafone Idea ಚಂದಾದಾರರ ಸಂಖ್ಯೆ 20 ಮಿಲಿಯನ್ ಕುಸಿತ: Q3 FY22ರಲ್ಲಿ ಕಂಪನಿಗೆ ರೂ.7,231 ಕೋಟಿ ನಷ್ಟ!
ಯೋಜನೆ ವಿಶೇಷತೆಗಳು
-ಪಾಲಿಸಿದಾರ ಆನ್ ಲೈನ್ (Online) ಹಾಗೂ ಆಪ್ಲೈನ್ (Offline) ಎರಡೂ ವಿಧಾನದ ಮೂಲಕ ಈ ಪಾಲಿಸಿಯಲ್ಲಿ ಹೂಡಿಕೆ (Invest)ಮಾಡಬಹುದಾಗಿದೆ.
-ಈ ಪಾಲಿಸಿಯಲ್ಲಿ ಒಮ್ಮೆಗೆ ಹೂಡಿಕೆ ಮಾಡಿದ ತಕ್ಷಣ ಪಿಂಚಣಿ (Pension) ಪ್ರಾರಂಭವಾಗುತ್ತದೆ.
-ಪಾಲಿಸಿದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯೋ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.
-ಪಾಲಿಸಿದಾರರು ಎಲ್ ಐಸಿ ಸರಳ ಪಿಂಚಣಿ ಯೋಜನೆಯಲ್ಲಿ 40 ವರ್ಷದಿಂದ 80 ವರ್ಷದ ತನಕ ಹೂಡಿಕೆ ಮಾಡಬಹುದು.
-ಪಾಲಿಸಿದಾರರು ಪಾಲಿಸಿ ಪ್ರಾರಂಭವಾದ ಆರು ತಿಂಗಳ ಬಳಿಕ ಅವರ ಹೂಡಿಕೆ ಮೇಲೆ ಯಾವಾಗ ಬೇಕಾದ್ರೂ ಸಾಲ ಪಡೆಯಬಹುದಾಗಿದೆ.
-ಈ ಯೋಜನೆಯಲ್ಲಿ ನೀವು ವಾರ್ಷಿಕ 12 ಸಾವಿರ ರೂ. ಹೂಡಿಕೆ ಮಾಡಲೇಬೇಕು. ಆದ್ರೆ ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ.
-ಪಾಲಿಸಿ ಖರೀದಿಗೆ ಕನಿಷ್ಠ ಮೊತ್ತ ವಾರ್ಷಿಕ 12 ಸಾವಿರ ರೂ. ಇದನ್ನು ಮಾಸಿಕ ಒಂದು ಸಾವಿರ ರೂ. ಅಥವಾ ತ್ರೈಮಾಸಿಕ ಮೂರು ಸಾವಿರ ರೂ. ಅಥವಾ ಅರ್ಧವಾರ್ಷಿಕ ಆರು ಸಾವಿರ ರೂ. ವಿಭಜಿಸಬಹುದು.