Asianet Suvarna News Asianet Suvarna News

Vodafone Idea ಚಂದಾದಾರರ ಸಂಖ್ಯೆ 20 ಮಿಲಿಯನ್ ಕುಸಿತ: Q3 FY22ರಲ್ಲಿ ಕಂಪನಿಗೆ ರೂ.7,231 ಕೋಟಿ ನಷ್ಟ!

ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಡಿಸೆಂಬರ್ 2021ಕ್ಕೆ ಮುಕ್ತಾಯವಾದ ಮೂರನೇ ತ್ರೈಮಾಸಿಕಕ್ಕೆ ತನ್ನ ಏಕೀಕೃತ ನಷ್ಟವನ್ನು ರೂ.7,230.9 ಕೋಟಿ ಎಂದು ಶುಕ್ರವಾರ  ತಿಳಿಸಿದೆ

Vodafone Idea  Subscriber Base Declines by Nearly 2 Crore YoY Q3 mnj
Author
Bengaluru, First Published Jan 22, 2022, 3:27 PM IST

Tech Desk: ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (Vodafone Idea VI)  ಡಿಸೆಂಬರ್ 2021 ರ ಮೂರನೇ ತ್ರೈಮಾಸಿಕಕ್ಕೆ ತನ್ನ ಏಕೀಕೃತ ನಷ್ಟವನ್ನು ರೂ.7,230.9 ಕೋಟಿ ಎಂದು ಶುಕ್ರವಾರ ತಿಳಿಸಿದೆ. ಕಂಪನಿಯು  ಹಿಂದಿನ ವರ್ಷ ಇದೇ ಅವಧಿಯಲ್ಲಿ ರೂ.4,532.1 ಕೋಟಿ  ನಷ್ಟ ಅನುಭವಿತ್ತು. ಕಾರ್ಯಾಚರಣೆಗಳಿಂದ (Operations) ಕ್ರೋಢೀಕೃತ ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ ರೂ.10,894.1 ಕೋಟಿಗಿಂತ ಶೇಕಡಾ 10.8 ರಷ್ಟು ಕುಸಿದು ರೂ.9,717.3 ಕೋಟಿಗೆ ಇಳಿಕೆ ಕಂಡಿದೆ ಎಂದು ಕಂಪನಿ ತಿಳಿಸಿದೆ.

"ಕಳೆದ ಕೆಲವು ತಿಂಗಳುಗಳಲ್ಲಿ ತೆಗೆದುಕೊಂಡ ಹಲವಾರು ದರ ಬದಲಾವಣೆ ಮಧ್ಯಸ್ಥಿಕೆಗಳಿಂದ (tariff interventions) ಆದಾಯದ ಬೆಳವಣಿಗೆಯ ಎರಡನೇ ಸತತ ತ್ರೈಮಾಸಿಕವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ದರ  ಬದಲಾವಣೆ ಮಧ್ಯಸ್ಥಿಕೆಗಳ ಪರಿಣಾಮವಾಗಿ ಒಟ್ಟಾರೆ ಚಂದಾದಾರರ ಮೂಲವು ಕುಸಿದಿದ್ದರೂ, Vi GIGAnet ನೀಡುವ ಡೇಟಾ ಮತ್ತು ಧ್ವನಿ ಅನುಭವ ಮೂಲಕ 4G ಚಂದಾದಾರರ ಮೂಲವು ಉತ್ತಮವಾದ ಹಿನ್ನೆಲೆಯಲ್ಲಿ ಸ್ಥಿರತೆ ಹೊಂದಿದೆ. " ಎಂದು VIL MD ಮತ್ತು CEO ರವೀಂದರ್ ಟಕ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Vodafone Idea : ಸರ್ಕಾರದ ಪಾಲಿಗೆ ಶೇ. 35.8 ಷೇರು, ಮುಂದೇನಾಗಬಹುದು?

26.98 ಕೋಟಿಯಿಂದ 24.72 ಕೋಟಿಗೆ ಕುಸಿತ:  ಕಂಪನಿಯು ದರ  ಹೆಚ್ಚಳದಿಂದಾಗಿ ವೊಡಾಫೋನ್ ಐಡಿಯಾದ ಚಂದಾದಾರರ ಮೂಲವು ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿದ್ದ 26.98 ಕೋಟಿಯಿಂದ 24.72 ಕೋಟಿಗೆ ಕುಸಿದಿದೆ. "ನವೆಂಬರ್ 2021 ರಲ್ಲಿ, ನಾವು ಅನಿಯಮಿತ ಯೋಜನೆಗಳು ಮತ್ತು ಕಾಂಬೊ ವೋಚರ್‌ಗಳು ಸೇರಿದಂತೆ ಎಲ್ಲಾ ಬೆಲೆಯ ಪ್ಯಾಕ್‌ಗಳಲ್ಲಿ ಪ್ರಿಪೇಯ್ಡ್ ದರಗಳನ್ನು ಹೆಚ್ಚಿಸಿದ್ದೇವೆ ಜತೆಗೆ ಪ್ರವೇಶ ಮಟ್ಟದ ಪ್ರಿಪೇಯ್ಡ್ ಯೋಜನೆಯನ್ನು ರೂ. 99 ಕ್ಕೆ ಸರಿಸಿದ್ದೇವೆ"

"ಪರಿಣಾಮವಾಗಿ, ARPU 2022ರ ಹಣಕಾಸು ವರ್ಷದ (FY) ಎರಡನೇ ತ್ರೈಮಾಸಿಕ (Q2) ನಲ್ಲಿ ರೂ.109ಗಿಂತ QoQ (quarter on quarter) ಮೇಲೆ 5.2 ರಷ್ಟು ಏರಿಕೆಯಾಗಿ Rs 115 ಕ್ಕೆ ಸುಧಾರಿಸಿದೆ. Q2, FY'22 ರಲ್ಲಿ ದರ ಬದಲಾವಣೆ ಮಧ್ಯಸ್ಥಿಕೆಗಳಿಂದಾಗಿ ಚಂದಾದಾರರ ಮೂಲವು 247.2 ಮಿಲಿಯನ್ ವಿರುದ್ಧ 253.0 ಮಿಲಿಯನ್‌ಗೆ ಕುಸಿಯಿತು" ಎಂದು ಕಂಪನಿ ತಿಳಿಸಿದೆ.

4G ಚಂದಾದಾರರ ಮೂಲವು ಬೆಳೆಯುತ್ತಿದೆ:  ಸುಂಕ ಹೆಚ್ಚಳದ ಹೊರತಾಗಿಯೂ, ವರದಿ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) 2020-21ರ ಅದೇ ತ್ರೈಮಾಸಿಕದಲ್ಲಿ ರೂ.ಗೆ 121  ಹೋಲಿಸಿದರೆ ಸುಮಾರು 5 ಪ್ರತಿಶತದಷ್ಟು ಕಡಿಮೆಯಾಗಿದೆ. ತ್ರೈಮಾಸಿಕದಲ್ಲಿ 80 ಲಕ್ಷ ಗ್ರಾಹಕರನ್ನು ಸೇರಿಸುವುದರೊಂದಿಗೆ ತನ್ನ 4G ಚಂದಾದಾರರ ಮೂಲವು ಬೆಳೆಯುತ್ತಲೇ ಇದೆ ಎಂದು ಕಂಪನಿಯು ಹೇಳಿದೆ. 4G ಬೇಸ್ ಈಗ 11.7 ಕೋಟಿ ಆಗಿದೆ.

ಇದನ್ನೂ ಓದಿ: Reliance Jio: 1000 ನಗರಗಳಲ್ಲಿ 5G ಕವರೇಜ್ ಪೂರ್ಣ: 2021ರ Q3ಯಲ್ಲಿ ₹3,795ಕೋಟಿ ನಿವ್ವಳ ಲಾಭ

ರೂ. 4,000 ಕೋಟಿ  ಉಳಿತಾಯದ ಗುರಿಯೊಂದಿಗೆ, ವರದಿಯಾದ ತ್ರೈಮಾಸಿಕದ ಅಂತ್ಯದ ವೇಳೆಗೆ ರನ್-ರೇಟ್ ಆಧಾರದ ಮೇಲೆ ಸುಮಾರು 90 ಪ್ರತಿಶತ ವಾರ್ಷಿಕ ಉಳಿತಾಯವನ್ನು ಸಾಧಿಸಿದೆ ಎಂದು VIL ಹೇಳಿದೆ.  ಡಿಸೆಂಬರ್ 31, 2021 ರಂತೆ ಒಟ್ಟು ಸಾಲ, ಲೀಸ್ ಹೊಣೆಗಾರಿಕೆಗಳನ್ನು ಹೊರತುಪಡಿಸಿ ಮತ್ತು ಸಂಚಿತ ಆದರೆ ಬಾಕಿ ಇರುವ ಬಡ್ಡಿ ಸೇರಿದಂತೆ ರೂ. 1,98,980 ಕೋಟಿ ಇದೆ ಎಂದು ವರದಿಯಾಗಿದೆ

ತರಂಗಾಂತರಗಳ ಬಳಕೆ ಮಾಡಿ ಬಾಕಿ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕಂಪನಿಯ ಷೇರುಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಮೂಲಕ ಪಾವತಿ ಮಾಡುತ್ತೇವೆ ಎಂದು ದೇಶದ ಪ್ರಮುಖ ದೂರಸಂಪರ್ಕ ಸೇವೆಯ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (Vodafone Idea) ತಿಳಿಸಿತ್ತು. ಮಂಗಳವಾರ ಈ ಕುರಿತಂತೆ ವೊಡಾಫೋನ್ ಐಡಿಯಾದ ನಿರ್ದೇಶಕರ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದ್ದು,  ಕಂಪನಿಯಲ್ಲಿ ಸರ್ಕಾರ 35.8ರಷ್ಟು ಪಾಲನ್ನು ಹೊಂದಿರಲಿದೆ.

Follow Us:
Download App:
  • android
  • ios