LIC EV Rise; ಎಲ್‌ಐಸಿ ಆಸ್ತಿ .5.41 ಲಕ್ಷ ಕೋಟಿ

ಎಲ್‌ಐಸಿ ಆಸ್ತಿ .5.41 ಲಕ್ಷ ಕೋಟಿ ಗೆ ಏರಿಕೆಯಾಗಿದೆ. ಅಗಾಧ ಪ್ರಮಾಣದಲ್ಲಿ ಆಸ್ತಿ ಹೆಚ್ಚಳಕ್ಕೆ ನಿಧಿ ವಿಭಜನೆ ಕಾರಣ ಎಂದು ತಿಳಿದುಬಂದಿದೆ.

LIC reports Rs 5.41 lakh crore embedded value in FY22 gow

 ಬೆಂಗಳೂರು (ಜು.15): ಭಾರತೀಯ ಜೀವವಿಮಾ ನಿಗಮ   2022ರ ಮಾರ್ಚ್ 31ರ ಹೊತ್ತಿಗೆ .5,41,492 ಕೋಟಿಗಳ ಇಂಡಿಯನ್‌ ಎಂಬೆಡೆಡ್‌ ವ್ಯಾಲ್ಯೂ (ವಿಮಾ ಕಂ​ಪನಿಯೊಂದರ ಒಟ್ಟು ಆಸ್ತಿ ಮೌಲ್ಯದ ಮೊತ್ತ ಮತ್ತು ಭವಿಷ್ಯದ ಲಾಭದ ಪ್ರಸ್ತುತ ಮೌಲ್ಯ) ಹೊಂದಿದೆ. 2021ರ ಮಾರ್ಚ್ 31ಕ್ಕೆ .95,605 ಕೋಟಿ ಮೌಲ್ಯವನ್ನು ಎಲ್‌ಐಸಿ ಹೊಂದಿತ್ತು. ಆದರೆ 2021ರ ಸೆಪ್ಟೆಂಬರ್‌ನಲ್ಲಿ .5,39,686 ಕೋಟಿ ಮೌಲ್ಯವನ್ನು ಕಂಪನಿ ದಾಖಲಿಸಿತ್ತು. 2021ರ ಮಾರ್ಚ್ ಗಿಂತ ಸೆಪ್ಟೆಂಬರ್‌ನಲ್ಲಿ ಕಂಪನಿಯ ಮೌಲ್ಯ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಲು ನಿಧಿಯ ವಿಭಜನೆ ಕಾರಣ ಎಂದು ಎಲ್‌ಐಸಿ ತಿಳಿಸಿದೆ. 2022ರ ಮಾರ್ಚ್ 31ರ ಹೊತ್ತಿಗೆ ಹೊಸ ವ್ಯವಹಾರಗಳ ಮೌಲ್ಯವನ್ನು .7,619 ಕೋಟಿ ಎಂದು ಲೆಕ್ಕ ಹಾಕಲಾಗಿದೆ. 2021ರ ಮಾರ್ಚ್ ಅಂತ್ಯಕ್ಕೆ ಹೊಸ ವ್ಯವಹಾರಗಳ ಮೌಲ್ಯ .4,167 ಕೋಟಿಗಳಿತ್ತು.

LIC Policy For Children:ಎಲ್ಐಸಿ ಈ ಯೋಜನೆಯಲ್ಲಿ ದಿನಕ್ಕೆ 150 ರೂ. ಹೂಡಿಕೆ ಮಾಡಿದ್ರೆ 8.5ಲಕ್ಷ ರೂ. ರಿಟರ್ನ್!

ವಾರ್ಷಿಕ ವಿಮಾ ಮೊತ್ತ ಕಳೆದ ಮಾರ್ಚ್ 31ಕ್ಕೆ .50,390 ಕೋಟಿಗಳಿತ್ತು. ಇದರ ಹಿಂದಿನ ವರ್ಷ ಅಂದರೆ 2021ರ ಮಾರ್ಚ್ ಗೆ .45,588 ಕೋಟಿಗಳಿತ್ತು. ವೈಯಕ್ತಿಕ ವ್ಯವಹಾರ .35,572 ಕೋಟಿ (ಶೇ.70) ಮತ್ತು ಗುಂಪು ವ್ಯವಹಾರ .14,818 ಕೋಟಿ (ಶೇ.30) ಇದೆ ಎಂದು ಎಲ್‌ಐಸಿ ಹೇಳಿದೆ.

LIC Policy: ಈ ಪಾಲಿಸಿಯಲ್ಲಿ ನೀವು ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ಕೋಟ್ಯಧಿಪತಿ ಆಗೋದು ಗ್ಯಾರಂಟಿ!

ಎಲ್‌ಐಸಿಯ ನಿರ್ದೇಶಕರು 2022ರ ಜನವರಿ 8ರಂದು ಸಭೆ ಸೇರಿ ಒಂದು ಫಂಡನ್ನು ಭಾಗಿದಾರ (ಲಾಭದಲ್ಲಿ ಪಾಲು) ಮತ್ತು ಭಾಗಿದಾರರಲ್ಲದ (ಲಾಭದಲ್ಲಿ ಪಾಲಿಲ್ಲದ) ನಿಧಿಗಳು ಎಂದು ಪ್ರತ್ಯೇಕಿಸಲು ಅನುಮತಿ ನೀಡಿತ್ತು. ಈ ವಿಭಜನೆಯ ಪರಿಣಾಮ ಎಲ್‌ಸಿಯ 2022 ಹಣಕಾಸು ವ್ಯವಹಾರದಲ್ಲಿ ಬಿಂಬಿತವಾಗಿದೆ. ಮಿಲ್ಲಿಮ್ಯಾನ್‌ ಅಡ್ವೈಸ​ರ್‍ಸ್ ಎಲ್‌ಎಲ್‌ಪಿ ನೀಡಿರುವ ವರದಿಯನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಅಂಗೀಕರಿಸಿದೆ.

Latest Videos
Follow Us:
Download App:
  • android
  • ios