LIC Lapsed Insurance Revival: ಮಾ.25 ವರೆಗೆ ಪಾಲಿಸಿ ವಿಶೇಷ ಪುನಶ್ಚೇತನ ಅಭಿಯಾನ!

*ವಿಳಂಬ ಶುಲ್ಕದಲ್ಲಿ ರಿಯಾಯಿತಿ ಘೋಷಿಸಿದ ವಿಮಾ ಸಂಸ್ಥೆ
*ವಿಳಂಬವಾಗಿರುವ ಜೀವ ವಿಮೆಗಳ ಪುನಶ್ಚೇತನಕ್ಕೆ  ಅವಕಾಶ
*ವಿಮೆದಾರರಿಗೆ ನೆರವಾಗಲು ಎರಡನೇ ಬಾರಿಗೆ ಅಭಿಯಾನ 

LIC policyholders can revive lapsed plans till march 25th late fee concessions Details mnj

ಬೆಂಗಳೂರು (ಫೆ. 11): ವಿಮೆ ಕಂತು ತುಂಬಲು ವಿಳಂಬವಾಗಿರುವ ಜೀವ ವಿಮೆಗಳ ಪುನಶ್ಚೇತನಕ್ಕೆ (Revive) ಅವಕಾಶ ನೀಡಲು ಭಾರತೀಯ ಜೀವ ವಿಮಾ ನಿಗಮ (LIC) ಮುಂದಾಗಿದ್ದು, ಈ ಉದ್ದೇಶ ಸಾಧನೆಗಾಗಿ ಮಾರ್ಚ್ 25ರವರೆಗೆ ವಿಶೇಷ ಪುನಶ್ಚೇತನ ಅಭಿಯಾನವನ್ನು ಎಲ್‌ಐಸಿ ಆಯೋಜಿಸಿದೆ. ಹೈ ರಿಸ್ಕ್‌ ಪ್ಲಾನ್‌ ಮತ್ತು ವಿಮೆ ಅವಧಿಯಲ್ಲಿ ಸಾವು ಸಂಭವಿಸಿದರೆ ನೀಡುವ ಕನಿಷ್ಠ ವಿಮೆ ಮೊತ್ತ (Term Assurance)ದ ಯೋಜನೆಗಳನ್ನು ಹೊರತು ಪಡಿಸಿ ಉಳಿದ ಯೋಜನೆಗಳಿಗೆ ಒಟ್ಟು ಪಾವತಿ ಮಾಡಿರುವ ವಿಮೆ ಕಂತಿನ ಆಧಾರದಲ್ಲಿ ವಿಳಂಬ ಶುಲ್ಕದಲ್ಲಿ ರಿಯಾಯಿತಿಯನ್ನು ಎಲ್‌ಐಸಿ ಪ್ರಕಟಿಸಿದೆ. ಆರೋಗ್ಯ ಮತ್ತು ಮೈಕ್ರೋ ವಿಮೆ ಯೋಜನೆಗಳಿಗೂ ವಿಳಂಬ ಶುಲ್ಕದಲ್ಲಿ ರಿಯಾಯಿತಿ ಇರಲಿದೆ.

ವಿಳಂಬ ಶುಲ್ಕ: ವಿಶೇಷ ಪುನಶ್ಚೇತನ ಯೋಜನೆಯಡಿ ಪಾವತಿಸದ ಮೊದಲ ಕಂತಿನ ದಿನದಿಂದ ಐದು ವರ್ಷದೊಳಗೆ ಶರತ್ತು ಬದ್ಧವಾಗಿ ವಿಮೆಯನ್ನು ಪುನರುಜ್ಜೀವನ ಮಾಡಬಹುದು. ಸಾಂಪ್ರದಾಯಿಕ ಮತ್ತು ಆರೋಗ್ಯ ಪಾಲಿಸಿಗಳಲ್ಲಿ ಪಾವತಿಸಬೇಕಾದ ಕಂತಿನ ಮೊತ್ತ 1 ಲಕ್ಷದೊಳಗೆ ಇದ್ದರೆ ವಿಳಂಬ ಶುಲ್ಕದಲ್ಲಿ (Late Fee) ಶೇ. 20 ರಷ್ಟುಆದರೆ ಗರಿಷ್ಠ 2,000 ರು ರಿಯಾಯಿತಿ ಇರಲಿದೆ.

ಇದನ್ನೂ ಓದಿLIC Pension Plan:ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ!

ಉಳಿದಂತೆ 1 ಲಕ್ಷದಿಂದ 3 ಲಕ್ಷ ದೊಳಗೆ ವಿಮೆ ಮೊತ್ತ ಪಾವತಿ ಬಾಕಿ ಇದ್ದರೆ ಶೇ.25 ಆದರೆ ಗರಿಷ್ಠ 2,500 ರು., 3 ಲಕ್ಷ ಮೀರಿದ ವಿಮೆ ಮೊತ್ತ ಬಾಕಿ ಇದ್ದರೆ ಶೇ.30 ಆದರೆ ಗರಿಷ್ಠ 3,000 ರು. ರಿಯಾಯಿತಿ ಇರಲಿದೆ. ಮೈಕ್ರೋ ವಿಮೆ ಯೋಜನೆಗಳಿಗೆ ವಿಳಂಬ ಶುಲ್ಕ ಮನ್ನಾ ಮಾಡಲಾಗಿದೆ ಎಂದು ಎಲ್‌ಐಸಿ ಹೇಳಿದೆ.

ವಿಮೆ ಕಂತು ಪಾವತಿಯ ಅವಧಿಯಲ್ಲಿ ವಿಮೆ ತುಂಬದ ಪಾಲಿಸಿಗಳಿಗೆ ಈ ಅಭಿಯಾನ ಅನ್ವಯಿಸಲಿದೆ. ಬೇರೆ ಬೇರೆ ಸಮಸ್ಯೆಗಳಿಂದ ಸಮಯಕ್ಕೆ ಸರಿಯಾಗಿ ವಿಮೆ ಕಟ್ಟಲು ಸಾಧ್ಯವಾಗದ ವಿಮೆದಾರರಿಗೆ ನೆರವಾಗಲು ಈ ಆರ್ಥಿಕ ವರ್ಷದಲ್ಲಿ ಎರಡನೇ ಬಾರಿಗೆ ಇಂತಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ. ಈ ಬಗ್ಗೆ ಎಲ್‌ಐಸಿ ಟ್ವಿಟರ್‌ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

 

 

ಇದನ್ನೂ ಓದಿ: Life Insurance Guide: ಮೊದಲ ಬಾರಿ ವಿಮೆ ಖರೀದಿಸುತ್ತಿದ್ದರೆ ಈ ನಿಯಮ ನೆನಪಿಡಿ!

ಅರ್ಹವಾದ ಪಾಲಿಸಿಗಳಿಗಾಗಿ ವಿಳಂಬ ಫೀಯಲ್ಲಿ ನೀಡಲಾಗುವ ರಿಯಾಯಿತಿಗಳು ಇಲ್ಲಿವೆ:

1. ರೂ 1,00,000 ವರೆಗೆ — ವಿಳಂಬ ಶುಲ್ಕದಲ್ಲಿ ರಿಯಾಯಿತಿ: 20 ಪ್ರತಿಶತ; ಗರಿಷ್ಠ ರಿಯಾಯಿತಿ: ರೂ 2000

2. ರೂ 100,001 ರಿಂದ ರೂ 3,00,000 ವರೆಗೆ - ಶುಲ್ಕದಲ್ಲಿ ರಿಯಾಯಿತಿ: 25 ಪ್ರತಿಶತ; ಗರಿಷ್ಠ ರಿಯಾಯಿತಿ: ರೂ 2,500

3. ರೂ 3,00,001 ಮತ್ತು ಅದಕ್ಕಿಂತ ಹೆಚ್ಚು - ವಿಳಂಬ ಶುಲ್ಕದಲ್ಲಿ ರಿಯಾಯಿತಿ: 30 ಪ್ರತಿಶತ; ಗರಿಷ್ಠ ರಿಯಾಯಿತಿ: ರೂ 3,000

4. ಮೈಕ್ರೋ ಇನ್ಶೂರೆನ್ಸ್ ಯೋಜನೆಗಳಿಗೆ, ರಿಯಾಯಿತಿಯು ಶೇಕಡಾ 100 ಆಗಿದೆ. 

ಆದರೆ ಹೈ ರಿಸ್ಕ್‌ ಪ್ಲಾನ್‌ ಮತ್ತು ವಿಮೆ ಅವಧಿಯಲ್ಲಿ ಸಾವು ಸಂಭವಿಸಿದರೆ ನೀಡುವ ಕನಿಷ್ಠ ವಿಮೆ ಮೊತ್ತದ ಯೋಜನೆಗಳನ್ನು  ಈ ವ್ಯಾಪ್ತಿಯಿಂದ ಹೊರಗಿವೆ.

Latest Videos
Follow Us:
Download App:
  • android
  • ios