Life Insurance Guide: ಮೊದಲ ಬಾರಿ ವಿಮೆ ಖರೀದಿಸುತ್ತಿದ್ದರೆ ಈ ನಿಯಮ ನೆನಪಿಡಿ!

ವಿಮೆ ಪಾಲಿಸಿ ಈಗಿನ ದಿನಗಳಲ್ಲಿ ಅನಿವಾರ್ಯವಾಗಿದೆ. ವಿಮೆ ಅನೇಕ ಕಾರಣಕ್ಕೆ ಜನರ ನೆರವಿಗೆ ಬರಲಿದೆ. ಆದ್ರೆ ವಿಮೆ ಖರೀದಿ ಮಾಡುವ ವೇಳೆ ನೂರಾರು ಬಾರಿ ಆಲೋಚನೆ ಮಾಡುವ ಅಗತ್ಯವಿದೆ. ತಜ್ಞರ ಸಲಹೆ ಪಡೆಯುವ ಅನಿವಾರ್ಯತೆಯಿದೆ.
 

First Time Life Insurance Buying Tips What To Keep In Mind

Business Desk: ಕೊರೊನಾ (Corona) ನಂತ್ರ ಜನರ ಆಲೋಚನೆ,ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರು ಸಾಂಕ್ರಾಮಿಕ ರೋಗದ ನಂತ್ರ ಬುದ್ದಿ ಕಲಿತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಎನ್ನುವ ಕಾರಣಕ್ಕೆ ವಿಮೆ ಪಾಲಿಸಿ (Insurance policy) ಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಯುವಕರಲ್ಲಿ ಇದರತ್ತ ಒಲವು ಹೆಚ್ಚಿದೆ. ಜೀವ ವಿಮಾ ಪಾಲಿಸಿಯು ಮಕ್ಕಳ (Children ) ಶಿಕ್ಷಣ (Education)ದ ಜೊತೆಗೆ ನಿವೃತ್ತಿ ನಂತ್ರ ಜೀವನಕ್ಕೆ ಸಾಕಷ್ಟು ನೆರವಾಗಲಿದೆ.

ಹೂಡಿಕೆ ಮಾಡಬೇಕು,ವಿಮೆ ಖರೀದಿ ಮಾಡಬೇಕೆಂಬ ಕಾರಣಕ್ಕೆ ಪೂರ್ವಾಲೋಚನೆ ಇಲ್ಲದೆ,ಸರಿಯಾಗಿ ಪರಿಶೀಲನೆ ನಡೆಸದೆ ವಿಮೆ ಪಾಲಿಸಿಯನ್ನು ಖರೀದಿಸಬಾರದು. ಮೊದಲು ಮುಂದಿನ ಜೀವನದ ಬಗ್ಗೆ ಪ್ಲಾನ್ ಮಾಡಿ, ವೆಚ್ಚದ ಅಂದಾಜು ಮಾಡಿ, ನಂತ್ರ ವಿಮಾ ಕಂಪನಿಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ಆ ನಂತ್ರವೇ ಹೂಡಿಕೆ ಮಾಡಬೇಕು. ಒಂದು ವಿಮೆಯಲ್ಲಿ ಎಲ್ಲ ಸೌಲಭ್ಯವೂ ಲಭ್ಯವಾಗುವುದಿಲ್ಲ. ಶಿಕ್ಷಣದ ವಿಮೆ,ಆರೋಗ್ಯ ರಕ್ಷಣೆ ನೀಡುವುದಿಲ್ಲ. ಆರೋಗ್ಯದ ವಿಮೆ ಬೇರೆ ಅಗತ್ಯತೆಯನ್ನು ಪೂರೈಸುವುದಿಲ್ಲ. ವಿಮೆ ಖರೀದಿ ಮೊದಲು ಏನು ಮಾಡಬೇಕು ಎನ್ನುವ ಬಗ್ಗೆ ನಾವಿಂದು ಹೇಳ್ತೆವೆ.       

ಆದಾಯದ ಎಷ್ಟು ಭಾಗ ವಿಮೆಗೆ ನೀಡಬೇಕು? : ಮೊದಲ ಬಾರಿಗೆ ಪಾಲಿಸಿಯನ್ನು ಖರೀದಿಸುವಾಗ, ಹೆಚ್ಚಿನ ಜನರು ಎಷ್ಟು ಕವರ್ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಆದಾಯದ ಕನಿಷ್ಠ 10 ಪಟ್ಟು ಲೈಫ್ ಕವರ್ ತೆಗೆದುಕೊಳ್ಳಬೇಕು ಎಂದು ಹೆಚ್ಚಿನ ಹಣಕಾಸು ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಇದನ್ನು ಅನ್ವಯಿಸುವುದು ಕಷ್ಟ. ಆದಾಯ, ಸಾಲ, ಉಳಿತಾಯ ಮತ್ತು ಜೀವನಶೈಲಿ ಇತ್ಯಾದಿಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: PAN Card for Children: ಮಕ್ಕಳ‌ ಪಾನ್ ಕಾರ್ಡ್ ಮಾಡಿಸೋದು ಸುಲಭ : ಆನ್ಲೈನ್ ನಲ್ಲಾಗುತ್ತೆ ಎಲ್ಲ ಕೆಲಸ!

ಹಣಕಾಸಿನ ಅಗತ್ಯಗಳ ಪರಿಶೀಲನೆ ಅಗತ್ಯವಿದೆ : ವಯಸ್ಸಿನ ಪ್ರತಿಯೊಂದು ಹಂತದಲ್ಲೂ ಹಣಕಾಸಿನ ಅಗತ್ಯಗಳು ಭಿನ್ನವಾಗಿರುತ್ತವೆ. ನೀವು ಒಂಟಿಯಾಗಿದ್ದರೆ ನಿಮ್ಮ ಹಣಕಾಸಿನ ಅಗತ್ಯಗಳು ವಿಭಿನ್ನವಾಗಿರುತ್ತದೆ ಮತ್ತು ನೀವು ಮಕ್ಕಳನ್ನು ಹೊಂದಿದ್ದರೆ ಹಣಕಾಸಿನ ಅಗತ್ಯಗಳು ವಿಭಿನ್ನವಾಗಿರುತ್ತದೆ. ಹಾಗಾಗಿ ವಿಮೆ ಖರೀದಿಸುವ ವೇಳೆ ಹಣಕಾಸಿನ ಅಗತ್ಯತೆಯನ್ನು ಪರಿಶೀಲಿಸಬೇಕಾಗುತ್ತದೆ. ಪ್ರತಿ ವರ್ಷ ಇದ್ರ ಲೆಕ್ಕಾಚಾರ ಕಷ್ಟ. ಮದುವೆ,ಮಕ್ಕಳು,ಉದ್ಯೋಗ ಬದಲಾವಣೆ ಸೇರಿದಂತೆ ಜೀವನದಲ್ಲಿ ಪ್ರಮುಖ ಬದಲಾವಣೆಯಾದಾಗ ನೀವು ಬಂಡವಾಳ ಪರಿಶೀಲನೆ ಮಾಡಬೇಕಾಗುತ್ತದೆ. ವಿಮೆಯಲ್ಲಿ ಪ್ರತಿ ವರ್ಷ ಪ್ರೀಮಿಯಂ ಪಾವತಿಯಿದ್ದರೆ ಮುಂದಾಲೋಚನೆ ಮಾಡಿಯೇ ನೀವು ವಿಮೆ ಖರೀದಿ ಮಾಡಬೇಕಾಗುತ್ತದೆ.

ಅಗತ್ಯ ಮಾಹಿತಿ : ಜೀವ ವಿಮಾ ಪಾಲಿಸಿಯನ್ನು ಖರೀದಿಸುವಾಗ  ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ಕೆಲ ಮಾಹಿತಿಯನ್ನು ಮುಚ್ಚಿಟ್ಟಲ್ಲಿ ಮುಂದೆ ನಿಮ್ಮ ನಾಮಿನಿಗೆ ಹಣ ಸಿಗುವುದಿಲ್ಲ. ಹಾಗಾಗಿ ಕಂಪನಿ ಕೇಳುವ ಎಲ್ಲ ಮಾಹಿತಿಯನ್ನು ನೀಡಬೇಕು.  

ಇದನ್ನೂ ಓದಿ: PAN Aadhaar Link: ಪಾನ್ ಜತೆ ಆಧಾರ್ ಲಿಂಕ್ ಹೇಗೆ ಮಾಡುವುದು? ಮಾರ್ಚ್ 31 ಡೆಡ್‌ಲೈನ್!

ಯಾವ ಪಾಲಿಸಿ ಖರೀದಿ : ಇದು ಅತ್ಯಂತ ಅಗತ್ಯ. ನಿಮ್ಮ ಗುರಿಯೇನು ಎಂಬುದನ್ನು ಮೊದಲು ತಿಳಿಯಿರಿ. ಯಾವುದಕ್ಕಾಗಿ ವಿಮೆ ಖರೀದಿ ಮಾಡಬೇಕೆಂದಿದ್ದೀರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಿ. ಈ ಬಗ್ಗೆ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಸಮಾಲೋಚಿಸಿದ ನಂತರ ವಿಮೆ ಖರೀದಿಗೆ ಮುಂದಾಗಿದೆ. ಶಿಕ್ಷಣ,ಆರೋಗ್ಯ,ನಿವೃತ್ತಿ ಹೀಗೆ ಬಗೆ ಬಗೆಯ ವಿಮೆ ಪಾಲಿಸಿಗಳಿವೆ ಎಂಬುದು ನೆನಪಿರಲಿ.

ವಿಮಾ ಕಂಪನಿಯ ಆಯ್ಕೆ : ವಿಮೆ ಕಂಪನಿ ಆಯ್ಕೆ ದೊಡ್ಡ ಸವಾಲು. ಪ್ರಸಿದ್ಧ ಕಂಪನಿಯಾಗಿರಲಿ ಇರದಿರಲಿ. ಮೊದಲು ಕಂಪನಿ ಬಗ್ಗೆ ನೀವು ಸರಿಯಾಗಿ ತಿಳಿಯಬೇಕು. ಕಂಪನಿ ಬಗ್ಗೆ ಸುತ್ತಮುತ್ತಲಿನ ಜನರ ಜೊತೆ ಅಥವಾ ಈಗಾಗಲೇ ಹೂಡಿಕೆ ಮಾಡಿರುವವ ಜೊತೆ ಮಾತನಾಡಬಹುದು. ಕಂಪನಿಯ ಕ್ಲೈಮ್ ಸೆಟಲ್‌ಮೆಂಟ್‌ನಂತಹ ಪ್ರಮುಖ ಡೇಟಾವನ್ನು ನೀವು ನೋಡಬಹುದು. ಹೆಸರಿದೆ ಎಂಬ ಮಾತ್ರಕ್ಕೆ ವಿಮೆ ಖರೀದಿಗೆ ಮುಂದಾಗಬೇಡಿ. ಅದು ಗ್ರಾಹಕರಿಗೆ ಯಾವ ರೀತಿ ಸೇವೆ ಒದಗಿಸುತ್ತಿದೆ ಎಂಬುದನ್ನು ಗಮನಿಸಿ ಖರೀದಿಗೆ ಮುಂದಾಗಿ. 

Latest Videos
Follow Us:
Download App:
  • android
  • ios