ಎಲ್‌ಐಸಿ ಬೆಸ್ಟ್ ಪಾಲಿಸಿ: ಕೇವಲ ₹80 ಉಳಿಸಿ ನಿಮ್ಮ ಖಾತೆಗೆ ಜಮೆ ಮಾಡ್ಕೊಳ್ಳಿ 10 ಲಕ್ಷ ರೂಪಾಯಿ

LIC Jeevan Anand Know Benefits Features Eligibility: ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯು ದಿನಕ್ಕೆ ₹80 ಉಳಿಸುವ ಮೂಲಕ ₹10 ಲಕ್ಷ ಪಡೆಯುವ ಅವಕಾಶ ನೀಡುತ್ತದೆ. ಈ ಪಾಲಿಸಿಯು ರಿಟರ್ನ್ಸ್ ಜೊತೆಗೆ ಬೋನಸ್, ವಿಮಾ ಕವರ್ ಮತ್ತು ಇತರ ಲಾಭಗಳನ್ನು ಒಳಗೊಂಡಿದೆ.

LIC Jeevan Anand Policy Invest Daily less than 100 Rs Get Return 10 Lakh rupees mrq

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ ತನ್ನ ಗ್ರಾಹಕರ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹಲವು ಯೋಜನೆ/ಪಾಲಿಸಿಗಳನ್ನು ಬಿಡುಗಡೆ ಮಾಡಿದೆ.  ಎಲ್‌ಐಸಿ ತನ್ನ ಪಾಲಿಸಿಗಳ ಮೂಲಕ ಹಲವು ಆಫರ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಪ್ರತಿದಿನ 100 ರೂ.ಗಿಂತಲೂ ಕಡಿಮೆ ಹಣ ಉಳಿಸಿ 10 ಲಕ್ಷ ರೂ.ಗಳಷ್ಟು ಮೊತ್ತವನ್ನು ನಿಮ್ಮದಾಗಿಸಿಕೊಳ್ಳುವ ಪಾಲಿಸಿ ಎಲ್‌ಐಸಿ ನೀಡುತ್ತಿದೆ. ಸುರಕ್ಷಿತ ಹೂಡಿಕೆ ಮಾಡಲು ಬಯಸುವ ಜನರು ಇದರಲ್ಲಿ ತಮ್ಮ ಹಣವನ್ನು ಉಳಿಸಬಹುದು. ಇಂದಿನ ಸಣ್ಣ ಉಳಿತಾಯ, ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತದೆ. ನಾವು ಹೇಳುತ್ತಿರೋದು ಎಲ್‌ಐಸಿ ಆನಂದ್ ಜೀವನ್ ಪಾಲಿಸಿ (LIC Jeevan Anand Policy Plan). ಇದು ಎಲ್‌ಐಸಿಯ ಜನಪ್ರಿಯ ಪಾಲಿಸಿಗಳಲ್ಲಿ ಒಂದಾಗಿದೆ. 

ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯಲ್ಲಿ ಹಣ ಹೂಡಿಕೆ ಮಾಡಲು ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು. ಪ್ರತಿದಿನ ಕೇವಲ 80 ರೂಪಾಯಿ ಹೂಡಿಕೆ ಮಾಡುವ ಮೂಲಕ ಜೀವನ್ ಪಾಲಿಸಿಗೆ ಸೇರ್ಪಡೆಯಾಗಬಹುದು.

ಹೂಡಿಕೆ, ರಿಟರ್ನ್ ಲೆಕ್ಕಾಚಾರ
ವಾರ್ಷಿಕ ಪ್ರೀಮಿಯಂ: 27,000 ರೂಪಾಯಿ
ಹೂಡಿಕೆದಾರರು ಪ್ರತಿದಿನ 80 ರೂಪಾಯಿ ಹಣವನ್ನು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ ಅದು ತಿಂಗಳಿಗೆ 2,300 ರೂ. ಆಗುತ್ತದೆ. ಅಂದ್ರೆ 21 ವರ್ಷಕ್ಕೆ ನಿಮ್ಮ ಒಟ್ಟು ಹೂಡಿಕೆಯ ಮೊತ್ತ 5.60 ಲಕ್ಷ ರೂ. ಆಗುತ್ತದೆ. ಪಾಲಿಸಿಯ ಮೆಚ್ಯೂರಿಟಿ ಮೇಲಿನ ಆದಾಯ ಸೇರಿ ಒಟ್ಟು ಮೊತ್ತ 10 ಲಕ್ಷ ರೂಪಾಯಿ ಆಗಲಿದೆ. 

ಈ ಪಾಲಿಸಿಯಲ್ಲಿ ಹೂಡಿಕೆದಾರರಿಗೆ ರಿಟರ್ನ್ ಜೊತೆಯಲ್ಲಿ ಬೋನಸ್ ಲಾಭ ಸಿಗುತ್ತದೆ. ಇದರಲ್ಲಿ 5 ಲಕ್ಷ ರೂ.ವರೆಗೆ ವಿಮಾ ಕವರ್ ಮತ್ತು 8.60 ಲಕ್ಷ ರೂ.ವರೆಗೆ ರಿವಿಷನಲ್ ಬೋನಸ್ ಒಳಗೊಂಡಿರುತ್ತದೆ. ಒಂದು ವೇಳೆ ಜೀವನ್ ಪಾಲಿಸಿಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಿದ್ರೆ ನಿಮಗೆ ಡಬಲ್ ಬೋನಸ್ ಸಿಗುತ್ತದೆ. 

ಜೀವನ್ ಆನಂದ್ ವಿಮಾ ಪಾಲಿಸಿಯ ಇತರೆ ಲಾಭಗಳು 

  • ಹೂಡಿಕೆದಾರರ ಆಕಸ್ಮಿಕ ಸಾವು ಆದ್ರೆ ವಿಮಾ ಮೊತ್ತ ಕವರ್ ಮಾಡಲಾಗುತ್ತದೆ.
  • ವಿಕಲಾಂಗತೆ ಮತ್ತು ಗಂಭೀರ ಕಾಯಿಲೆ ವೆಚ್ಚ ಕವರ್ ಮಾಡುತ್ತದೆ. 
  • ಟರ್ಮ್ ಅಶ್ಯೂರೆಯನ್ಸ್ ಲಾಭವೂ ಹೂಡಿಕೆದಾರರಿಗೆ ಸಿಗಲಿದೆ. 
  • ಪಾಲಿಸಿದಾರನ ಮರಣದ ನಂತರ ನಾಮಿನಿಗೆ ಶೇ.125ರಷ್ಟು ವಿಮಾದ ಮೊತ್ತವನ್ನು ನೀಡಲಾಗುತ್ತದೆ. 

ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ದುಡ್ಡು ಮಾಡೋದು ಹೇಗೆ? 1 ಲಕ್ಷ ಫಾಲೋವರ್ಸ್ ಇದ್ರೆ ಎಷ್ಟು ಬರುತ್ತೆ ಹಣ ?

ಯಾಕೆ ಬೇಕು ಈ ವಿಮಾ?
ಎಲ್‌ಐಡಿ ಜೀವನ್ ವಿಮಾ ಪಾಲಿಸಿ ದೊಡ್ಡಮಟ್ಟದಲ್ಲಿ ರಿಟರ್ನ್ ನೀಡುತ್ತದೆ. ರಿಟರ್ನ್ ಲಾಭದ ಜೊತೆಯಲ್ಲಿ ಬೋನಸ್ ಸಹ ಸೇರ್ಪಡೆಯಾಗುತ್ತದೆ. ಕುಟುಂಬದ ಆರ್ಥಿಕ ಭದ್ರತೆಗಾಗಿ ಈ ಪಾಲಿಸಿಯನ್ನು ಬಹುತೇಕರು ಆಯ್ಕೆ ಮಾಡಿಕೊ್ಳುತ್ತಾರೆ. ಮಾರುಕಟ್ಟೆಯ ಅಪಾಯಗಳಿಂದ ಹೂಡಿಕೆ ಸುರಕ್ಷಿತವಾಗಿರಬೇಕಾದ್ರೆ ಈ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

Disclaimer: ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಏಷ್ಯಾನೆಟ್‌ ಸುವರ್ಣನ್ಯೂಸ್‌ ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.

ಇದನ್ನೂ ಓದಿ: ದೈತ್ಯ ಕಂಪನಿಗಳಿಗೆ ಮಹಾ ಟಕ್ಕರ್; ಅಮೆಜಾನ್‌, ಫ್ಲಿಪ್‌ಕಾರ್ಟ್‌ ಬಿಗ್ ಶಾಕ್!

Latest Videos
Follow Us:
Download App:
  • android
  • ios