ಎಲ್ಐಸಿ ಈ ಪಾಲಿಸಿಯಲ್ಲಿ 5ಲಕ್ಷ ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 50ಲಕ್ಷ ರೂ. ರಿಟರ್ನ್ಸ್!

ಎಲ್ಐಸಿ ಆಯಾ ವಯೋಮಾನದ ಜನರಿಗೆ ತಕ್ಕಂತೆ ಪಾಲಿಸಿಗಳನ್ನು ಪರಿಚಯಿಸುತ್ತದೆ. ಅವುಗಳಲ್ಲಿ ಎಲ್ಐಸಿ ಬಿಮಾ ರತ್ನ ಪಾಲಿಸಿ ಕೂಡ ಒಂದು. ಈ ಪಾಲಿಸಿಯಲ್ಲಿ 5ಲಕ್ಷ ರೂ. ಹೂಡಿಕೆ ಮಾಡಿದ್ರೆ 50ಲಕ್ಷ ರೂ. ರಿಟರ್ನ್ಸ್ ಸಿಗುತ್ತದೆ. ಹಾಗಾದ್ರೆ ಈ ಪಾಲಿಸಿಯಲ್ಲಿ ಯಾರು ಹೂಡಿಕೆ ಮಾಡಬಹುದು? ಪಾಲಿಸಿ ಅವಧಿ ಎಷ್ಟು? ಇಲ್ಲಿದೆ ಮಾಹಿತಿ. 
 

LIC Bima Ratna Invest Rs 5 lakh in this LIC policy and get up to Rs 5000000 at maturity

Business Desk:ಹೂಡಿಕೆ ಮಾಡುವ ಮುನ್ನ ಸಾಮಾನ್ಯವಾಗಿ ಎಲ್ಲರೂ ಎರಡು ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಒಂದು ಸುರಕ್ಷತೆ ಹಾಗೂ ಇನ್ನೊಂದು ರಿಟರ್ನ್ಸ್. ಇದೇ ಕಾರಣಕ್ಕೆ ಭಾರತದ ಮಧ್ಯಮ ವರ್ಗದ ಜನರು ಹೂಡಿಕೆಗೆ ಸರ್ಕಾರಿ ಬೆಂಬಲಿತ ಸಂಸ್ಥೆಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ. ಅದರಲ್ಲೂ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಹೂಡಿಕೆ ಮಾಡೋದು ಹೆಚ್ಚು ಸುರಕ್ಷಿತ ಎಂಬ ಭಾವನೆ ಅವರಲ್ಲಿದೆ. ಆಯಾ ವಯೋಮಾನದ ಜನರಿಗೆ ಹೊಂದಿಕೆಯಾಗುವ ಪಾಲಿಸಿಗಳನ್ನು ಎಲ್ಐಸಿ ರೂಪಿಸುತ್ತ ಬಂದಿರೋದು ಕೂಡ ಇದಕ್ಕೆ ಕಾರಣ. ಹೀಗಾಗಿ ಆದಾಯ, ವಯಸ್ಸನ್ನು ಆಧರಿಸಿ ಎಲ್ಲ ವರ್ಗದ ಜನರು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಎಲ್ ಐಸಿಯ ಇಂಥ ಪಾಲಿಸಿಗಳಲ್ಲಿ ಎಲ್ಐಸಿ ಬಿಮಾ ರತ್ನ ಪ್ಲ್ಯಾನ್ ಕೂಡ ಒಂದು. ಈ ಯೋಜನೆ ಮನಿ ಬ್ಯಾಕ್, ಭರವಸೆ ನೀಡಿರುವ ಬೋನಸ್ ಹಾಗೂ ಮರಣ ಪ್ರಯೋಜನ ಹೀಗೆ ಈ ಮೂರು ಪ್ರಯೋಜನಗಳನ್ನು ನೀಡುತ್ತದೆ. ಈ ಪಾಲಿಸಿಯ ಅವಧಿ 15 ವರ್ಷಗಳ ತನಕ ಇದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ತಮ್ಮ ಪ್ರಾರಂಭಿಕ ಠೇವಣಿಯ 10 ಪಟ್ಟು ಹೆಚ್ಚಿನ ಹಣ ಪಡೆಯಬಹುದಾಗಿದೆ. 

15 ವರ್ಷಗಳ ಅವಧಿಯ ಈ ಪ್ಲ್ಯಾನ್ ನಲ್ಲಿ ಹೂಡಿಕೆದಾರರು ಪಾಲಿಸಿಯ 13 ಹಾಗೂ 14ನೇ ವರ್ಷದಲ್ಲಿ ತಮ್ಮ ಹೂಡಿಕೆಯ ಶೇ.25ರಷ್ಟನ್ನು ಪಡೆಯುತ್ತಾರೆ. ಅದೇರೀತಿ 20 ವರ್ಷಗಳ ಅವಧಿಯ ಪಾಲಿಸಿಯಲ್ಲಿ ಹೂಡಿಕೆದಾರರು ತಮ್ಮ ಹೂಡಿಕೆಯ ಶೇ.25ರಷ್ಟನ್ನು 18 ಹಾಗೂ 19ನೇ ವರ್ಷದಲ್ಲಿ ಪಡೆಯುತ್ತಾರೆ. ಇನ್ನು 25 ವರ್ಷಗಳ ಪಾಲಿಸಿ ಅವಧಿಯಲ್ಲಿ 23 ಹಾಗೂ 24ನೇ ತಿಂಗಳಿನಲ್ಲಿ ಶೇ.25ರಷ್ಟು ರಿಟರ್ನ್ಸ್ ಪಡೆಯುತ್ತಾರೆ. ಇನ್ನು ಈ ಯೋಜನೆ ಮೊದಲ ಐದು ವರ್ಷಗಳ ಅವಧಿಯಲ್ಲಿ ಪ್ರತಿ 1000ರೂ. ಹೂಡಿಕೆ ಮೇಲೆ 50ರೂ. ಬೋನಸ್ ನೀಡುತ್ತದೆ. ಈ ಬೋನಸ್ 6-10 ವರ್ಷಗಳ ಅವಧಿಯಲ್ಲಿ 55ರೂ.ಗೆ ಏರಿಕೆಯಾಗುತ್ತದೆ. ಇನ್ನ ಮೆಚ್ಯೂರಿಟಿ ಅವಧಿಯಲ್ಲಿ ಪ್ರತಿ ಸಾವಿರ ರೂಪಾಯಿಗೆ 60ರೂ. ಸಿಗುತ್ತದೆ.

ಅಮೃತ್ ಕಲಶ್ ಯೋಜನೆ ಪರಿಚಯಿಸಿದ SBI; ಹಿರಿಯ ನಾಗರಿಕರಿಗೆ ಶೇ.7.6 ಬಡ್ಡಿದರ

ಈ ಯೋಜನೆಯಲ್ಲಿ 90 ದಿನಗಳ ಅವಧಿಯ ಮಗುವಿನಿಂದ ಹಿಡಿದು 55 ವರ್ಷಗಳ ವಯಸ್ಕರ ತನಕ ಹೂಡಿಕೆ ಮಾಡಬಹುದು. ಇನ್ನು ಹೂಡಿಕೆದಾರರು ಕನಿಷ್ಠ 5ಲಕ್ಷ ರೂ. ಹೂಡಿಕೆ ಮಾಡಬೇಕು. ಹೂಡಿಕೆದಾರರ ಆದ್ಯತೆಗೆ ಅನುಗುಣವಾಗಿ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು. 

50,00,000ರೂ. ಪಡೆಯೋದು ಹೇಗೆ?
ಇದನ್ನು ಒಂದು ಉದಾಹರಣೆ ಮೂಲಕ ನೋಡೋಣ. 30 ವರ್ಷ ವಯಸ್ಸಿನ ಉದ್ಯೋಗಿಯೊಬ್ಬ ಖಚಿತ ರಿಟರ್ನ್ಸ್ ಹಾಗೂ ಪ್ರಯೋಜನಗಳನ್ನು ನೀಡುವ ಜೀವ ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾನೆ. ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ ಬಳಿಕ ಆತ ಎಲ್ಐಸಿ ಬಿಮಾ ರತ್ನ ಪ್ಲ್ಯಾನ್ ಆಯ್ದುಕೊಳ್ಳುತ್ತಾನೆ. 15 ವರ್ಷಗಳ ಅವಧಿಯ ಪಾಲಿಸಿ ಆಯ್ಕೆ ಮಾಡುವ ಆತ ಇದರಲ್ಲಿ 5ಲಕ್ಷ ರೂ. ಹೂಡಿಕೆ ಮಾಡುತ್ತಾನೆ. ಆ ಬಳಿಕ ಮಾಸಿಕ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳುತ್ತಾನೆ. ಈ ಯೋಜನೆ ಪ್ರಕಾರ ಈ ವ್ಯಕ್ತಿ 13 ಹಾಗೂ 14ನೇ ವರ್ಷದಲ್ಲಿ ತನ್ನ ಹೂಡಿಕೆಯ ಶೇ.25ರಷ್ಟನ್ನು ಪಡೆಯುತ್ತಾನೆ. ಇದರ ಜೊತೆಗೆ ಪ್ರತಿ 1000ರೂ. ಹೂಡಿಕೆ ಮೇಲೆ ಮೊದಲ ಐದು ವರ್ಷಗಳಲ್ಲಿ 50ರೂ. ಬೋನಸ್ ಪಡೆಯುತ್ತಾನೆ. ಇದು 6-10 ವರ್ಷಗಳ ನಡುವಿನ ಅವಧಿಯಲ್ಲಿ  55ರೂ.ಗೆ ಏರಿಕೆಯಾಗುತ್ತದೆ. ಇನ್ನು ಮೆಚ್ಯುರಿಟಿ ಸಮಯದಲ್ಲಿ ಪ್ರತಿ 1000ರೂ.ಗೆ 6ರೂ.ಗೆ ಏರಿಕೆಯಾಗುತ್ತದೆ. ಹೀಗಾಗಿ ಮೆಚ್ಯುರಿಟಿ ಅವಧಿಯಲ್ಲಿ ಆತ ತನ್ನ ಪ್ರಾರಂಭಿಕ ಠೇವಣಿಯ 10 ಪಟ್ಟು ಅಂದ್ರೆ 50ಲಕ್ಷ ರೂ. ಗಳಿಸಬಹುದು. 

BHIM SBI Pay ಪ್ರಾರಂಭ; ಎಸ್ ಬಿಐ ಗ್ರಾಹಕರು ಇನ್ಮುಂದೆ ಕ್ಷಣಾರ್ಧದಲ್ಲಿ ಸಿಂಗಾಪುರಕ್ಕೆ ಹಣ ಕಳುಹಿಸ್ಬಹುದು!

 

Latest Videos
Follow Us:
Download App:
  • android
  • ios