'ಬೆಂಗಳೂರು ಏರ್‌ಪೋರ್ಟ್‌ ಸನಿಹ 25 ಎಕರೆ ಜಾಗ ಇದ್ರೆ ಕೊಡಿ..' ಲಿಂಕ್ಡಿನ್‌ನಲ್ಲಿ ಮನವಿ ಮಾಡಿದ ಸ್ಟಾರ್ಟ್‌ಅಪ್‌ ಕಂಪನಿ ಸಿಇಒ!

ದೇಶದ ಐವೇರ್‌ ಬ್ರ್ಯಾಂಡ್‌ಗಳ ಮಾರುತಿ ಸುಜುಕಿ ಎನ್ನಲಾಗುವ ಲೆನ್ಸ್‌ಕಾರ್ಟ್‌ ಕಂಪನಿಯ ಸಿಇಒ ಬೆಂಗಳೂರಿನಲ್ಲಿ ಮೆಗಾ ಫ್ಯಾಕ್ಟರಿ ಸ್ಥಾಪನೆ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆ.
 

Lenskart Peyush Bansal looking for 25 acres of land for mega plant near Bengaluru airport san

ಬೆಂಗಳೂರು (ಏ.9): ದೇಶದ ಪ್ರಮುಖ ಐವೇರ್‌ ರಿಟೇಲರ್‌ ಬ್ರ್ಯಾಂಡ್‌ ಆಗಿರುವ ಲೆನ್ಸ್‌ಕಾರ್ಟ್‌ನ ಸಿಇಒ ಹಾಗೂ ಸಂಸ್ಥಾಪಕ ಪೀಯುಷ್‌ ಭನ್ಸಾಲ್‌ ತಮ್ಮ ಲಿಂಕ್ಡಿನ್‌ ಪ್ರೊಫೈಲ್‌ನಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಕಂಪನಿಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಬಯಕೆ ವ್ಯಕ್ತಪಡಿಸಿರುವ ಪೀಯುಷ್‌ ಭನ್ಸಾಲ್‌, ಬೆಂಗಳೂರಿನಲ್ಲಿ ಮೆಗಾ ಫ್ಯಾಕ್ಟರಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇದಕ್ಕಾಗಿ ತಮಗೆ 25 ಎಕರೆ ಜಾಗದ ಅವಶ್ಯಕತೆ ಇದೆ. ಹಾಗೇನಾದರೂ ಬೆಂಗಳೂರು ಸನಿಹ 25 ಎಕರೆ ಜಾಗವನ್ನು ಯಾವುದೇ ಕಂಪನಿಗಳಾಗಲಿ, ವ್ಯಕ್ತಿಗಳಾಗಲಿ ಮಾರಾಟ ಮಾಡುವುದಿದ್ದರೆ ಸಂಪರ್ಕ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ' ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ 60 ಕಿಲೋಮೀಟರ್‌ ಒಳಗೆ ಮೆಗಾ ಫ್ಯಾಕ್ಟರಿಯನ್ನು ಸ್ಥಾಪಿಸಲು ಲೆನ್ಸ್‌ಕಾರ್ಟ್‌ ಬಯಸಿದೆ. ಅದಕ್ಕಾಗಿ 25 ಎಕರೆ ಜಾಗವನ್ನು ನೋಡುತ್ತಿದೆ. ಹಾಗೇನಾದ್ರೂ ಯಾವುದೇ ಕಂಪನಿಗಳು ಬೆಂಗಳೂರು ಏರ್‌ಪೋರ್ಟ್‌ನ ಸನಿಹವಿರುವ ತಮ್ಮ ಫ್ಯಾಕ್ಟರಿ ಜಾಗವನ್ನು ಮಾರಾಟ ಮಾಡೋದಿದ್ದರೆ, ನನಗೆ ನೇರವಾಗಿ ಈ ಮೇಲ್‌ ಮಾಡಿ' ಎಂದು ತಮ್ಮ ಈಮೇಲ್‌ಅನ್ನೂ ಅವರು ನೀಡಿದ್ದಾರೆ.

ಇನ್ನು ಭನ್ಸಾಲ್‌ ಅವರ ಟ್ವೀಟ್‌ಗೆ  ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರವು ಲೆನ್ಸ್‌ಕಾರ್ಟ್ ಅನ್ನು ಬೆಂಬಲಿಸುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಬನ್ಸಾಲ್ ಅವರನ್ನು ತಲುಪಲಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದರ ನಡುವೆ ದೇಶದ ಪ್ರಮುಖ ಐವೇರ್‌ ಕಂಪನಿ ಶೀಘ್ರದಲ್ಲಿಯೇ ಷೇರು ಮಾರುಕಟ್ಟೆಗೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್ ವ್ಯವಸ್ಥಾಪಕ ಪಾಲುದಾರ ಮತ್ತು ಮುಖ್ಯ ಹಣಕಾಸು ಅಧಿಕಾರಿ ನವನೀತ್ ಗೋವಿಲ್ ಅವರು ಸಂದರ್ಶನವೊಂದರಲ್ಲಿ ವಿಷನ್‌ ಫಂಡ್‌ನ ಪೋರ್ಟ್‌ಫೋಲಿಯೊದ ಭಾಗವಾಗಿರುವ ಲೆನ್ಸ್‌ಕಾರ್ಟ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಗೆ ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಸ್ತೆಬದಿಯಲ್ಲಿ ಫೌಂಟೇನ್‌ ಸೋಡಾ ಮಾರ್ತಿದ್ದ ವ್ಯಕ್ತಿಯ ಕಂಪನಿಯ ಮೌಲ್ಯವೀಗ 3 ಸಾವಿರ ಕೋಟಿ!

ಇದಕ್ಕೂ ಮುನ್ನ ಪೀಯುಷ್‌ ಭನ್ಸಾಲ್‌ ಕೂಡ ಶೀಘ್ರದಲ್ಲಿಯೇ ಲೆನ್ಸ್‌ಕಾರ್ಟ್‌ ಕಂಪನಿ ಐಪಿಓಗೆ ಹೋಗಲಿದೆ ಎಂದು ತಿಳಿಸಿದ್ದರು. ಆದರೆ, ಐಪಿಓಗೆ ಇಳಿಯಲು ಕಂಪನಿ ಯಾವುದೇ ರೀತಿಯಲ್ಲೂ ಆತುರ ಪಡೋದಿಲ್ಲ ಎಂದು ತಿಳಿಸಿದ್ದರು. 2008 ರಲ್ಲಿ ಸ್ಥಾಪನೆಯಾದ ಲೆನ್ಸ್‌ಕಾರ್ಟ್ ಐವೇರ್‌, ಐಗ್ಲಾಸ್‌, ಸನ್‌ಗ್ಲಾಸ್, ಕಾಂಟ್ಯಾಕ್ಟ್ ಲೆನ್ಸ್, ಪವರ್ ಸನ್‌ಗ್ಲಾಸ್, ಐಕೇರ್, ವಿಷನ್‌ಕೇರ್ ಸೇರಿದಂತೆ  ಹಲವು ವಿಭಾಗಗಳಲ್ಲಿ ತನ್ನ ಸೇವೆ ನೀಡುತ್ತದೆ. ಭಾರತ, ಸಿಂಗಾಪುರ ಮತ್ತು ದುಬೈನ 175 ನಗರಗಳಲ್ಲಿ 1,500 ಓಮ್ನಿಚಾನಲ್ ಮಳಿಗೆಗಳನ್ನು ಹೊಂದಿರುವ ಕಂಪನಿಯು 2025 ರ ವೇಳೆಗೆ ಜಾಗತಿಕವಾಗಿ 1 ಬಿಲಿಯನ್ ಕಣ್ಣುಗಳಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ.

iPhone 16 Update: ಐಫೋನ್‌ 16 ಸಿರೀಸ್‌ನ ಮೊಬೈಲ್‌ ಬಗ್ಗೆ ಬಿಗ್ಗೆಸ್ಟ್‌ ನ್ಯೂಸ್‌ ಲೀಕ್‌!

Latest Videos
Follow Us:
Download App:
  • android
  • ios