ರಸ್ತೆಬದಿಯಲ್ಲಿ ಫೌಂಟೇನ್‌ ಸೋಡಾ ಮಾರ್ತಿದ್ದ ವ್ಯಕ್ತಿಯ ಕಂಪನಿಯ ಮೌಲ್ಯವೀಗ 3 ಸಾವಿರ ಕೋಟಿ!

ರಸ್ತೆ ಬದಿಯಲ್ಲಿ ಫೌಂಟೇನ್‌ ಸೋಡಾ ಮಾರ್ಕೊಂಡು ಜೀವನ ಸಾಗ್ತಿಸ್ತಿದ್ದ ವಡಿಲಾಲ್ ಗಾಂಧಿಗೆ ಯಾವುದೇ ಸಮಸ್ಯೆಗಳಿರ್ಲಿಲ್ಲ. ಆದರೆ, ಈತನ ಮಗ ರಂಚೋದ್‌ ಲಾಲ್‌ ಗಾಂಧಿಗೆ ಅಪ್ಪನ ಬ್ಯುಸಿನೆಸ್‌ಅನ್ನು ಇನ್ನಷ್ಟು ವಿಸ್ತಾರ ಮಾಡ್ಬೇಕು ಅನ್ನೋ ಬಯಕೆ ಹುಟ್ಟಿಕೊಂಡಿತ್ತು.
 

Ranchod Lal Gandhi From Selling Fountain Soda To 3015 Crore Empire story of Vadilal Industries san

ಅದು 1907ರ ಸಮಯ. ಅಹಮದಾಬಾದ್‌ನ ನಿವಾಸಿಯಾಗಿದ್ದ ವಡಿಲಾಲ್ ಗಾಂಧಿ, ತಮ್ಮದೇ ಹೆಸರನ್ನು ಇಟ್ಟುಕೊಂಡು ಬ್ರ್ಯಾಂಡ್‌ಅನ್ನು ಸ್ಥಾಪನೆ ಮಾಡಿದ್ದರು. ವಡಿಲಾಲ್‌ ಫೌಂಟೇನ್‌ ಸೋಡಾ ಅಂದ್ರೆ ಊರಿಗೆಲ್ಲಾ ಫೇಮಸ್‌, ರಸ್ತೆ ಬದಿಯಲ್ಲಿ ಫೌಂಟೇನ್‌ ಸೋಡಾ ಮಾರಾಟದೊಂದಿಗೆ ತಮ್ಮ ಉದ್ಯಮವನ್ನು ಆರಂಭಿಸಿದ್ದ ವಡಿಲಾಲ್‌ ಗಾಂಧಿ ಸ್ವಲ್ಪವೇ ವರ್ಷದಲ್ಲಿ ತಮ್ಮ ಬ್ರ್ಯಾಂಡ್‌ನಲ್ಲಿ ಐಸ್‌ಕ್ರೀಮ್‌ ಮಾರಾಟವನ್ನು ಆರಂಭಿಸಿದ್ದರು. ಸಣ್ಣದಾಗಿದ್ದರೂ, ಅವರು ನಡೆಸುತ್ತಿದ್ದ ಉದ್ಯಮ ವೇಗವಾಗಿ ಬೆಳೆಯುತ್ತಿತ್ತು. ತಾವು ಬೆಳೆಸಿದ ಕಂಪನಿಯ ಬಗ್ಗೆ ಖುಷಿ ಕೂಡ ವಡಿಲಾಲ್‌ ಗಾಂಧಿಗೆ ಇತ್ತು. ಅಪ್ಪನ ದಿನಗಳು ಮುಗಿದ ಹಾಗೆ ಈ ಕಂಪನಿ ಅವರ ಪುತ್ರ ರಂಚೋದ್‌ ಲಾಲ್‌ ಗಾಂಧಿಯವರ ಕೈಸೇರಿತು. ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಯಾದ ಶತಮಾನದಷ್ಟು ಹಳೆಯದಾದ ವಡಿಲಾಲ್‌ ಈಗ ವಡಿಲಾಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಆಗಿ ಬದಲಾಗಿದೆ. ಇಂದು ಅಮೆರಿಕ ಮಾರುಕಟ್ಟೆಯಲ್ಲೂ ಛಾಪು ಮೂಡಿಸಿರುವ ವಡಿಲಾಲ್‌ ಇಂಡಸ್ಟ್ರೀಸ್‌ ಕಂಪನಿಯ ಮೌಲ್ಯ 3015 ಕೋಟಿ ರೂಪಾಯಿ. ಈ ಕಂಪನಿಯ ಷೇರುಗಳನ್ನು ಸ್ವತಃ ರಾಹುಲ್‌ ಗಾಂಧಿ ಕೂಡ ಖರೀದಿ ಮಾಡಿದ್ದಾರೆ.

ಅವರು ಕೈಯಿಂದ ತಯಾರಿಸಿದ "ಕೋತಿ" ವಿಧಾನದಿಂದ ಐಸ್ ಕ್ರೀಮ್ಗಳನ್ನು ತಯಾರಿಸುತ್ತಿದ್ದರು, ಅಲ್ಲಿ ಸಾಂಪ್ರದಾಯಿಕ ಕೈಯಿಂದ ಚಾಲಿತ ಯಂತ್ರದಲ್ಲಿ ಸಕ್ಕರೆ, ಉಪ್ಪು, ಹಾಲು ಮತ್ತು ಐಸ್ ಅನ್ನು ಬೆರೆಸಿ ಐಸ್ ಕ್ರೀಮ್ಗಳನ್ನು ತಯಾರಿಸುತ್ತಿದ್ದರು. ಇಂದು ಕಂಪನಿಯು 200ಕ್ಕೂ ಭಿನ್ನ ಫ್ಲೇವರ್‌ನ ಐಸ್‌ಕ್ರೀಮ್‌ಗಳನ್ನು ತಯಾರಿಸುತ್ತಿದೆ. ತನ್ನದೇ ಆದ ಐಸ್‌ಕ್ರೀಮ್‌ ಉತ್ಪಾದನಾ ಘಟಕಗಳನ್ನು ಹೊಂದಿದ್ದು, 49ಕ್ಕೂ ಅಧಿಕ ದೇಶಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ. ಒಂದು ಕಾಲದಲ್ಲಿ ರಸ್ತೆಬದಿಯಲ್ಲಿ ವ್ಯಾಪಾರ ಮಾಡ್ತಿದ್ದ ಈ ಕುಟುಂಬ ಇಷ್ಟು ದೊಡ್ಡದಾಗಿ ಬೆಳೆದಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲಿರಬಹುದು.

ರಂಚೋದ್‌ ಲಾಲ್ ಗಾಂಧಿಯವರ ನಾಯಕತ್ವದಲ್ಲಿ ವಡಿಲಾಲ್ ಕಂಪನಿ ಐಸ್ ಕ್ರೀಮ್‌ಗಳ ಮೇಲೆ ಹೆಚ್ಚು ಗಮನ ಹರಿಸಲು ಆರಂಭಿಸಿತ್ತು. ವಡಿಲಾಲ್ 1926 ರಲ್ಲಿ ತನ್ನ ಮೊದಲ ಐಸ್ ಕ್ರೀಮ್ ಔಟ್ಲೆಟ್ ಅನ್ನು ತೆರೆದಿತ್ತು. ಅದೇ ವರ್ಷದಲ್ಲಿ ಮೊದಲ ಬಾರಿಗೆ ಜರ್ಮನಿಯಿಂದ ಐಸ್ ಕ್ರೀಮ್ ತಯಾರಿಸುವ ಯಂತ್ರವನ್ನು ಕಂಪನಿ ಆಮದು ಮಾಡಿಕೊಂಡಿತ್ತು. ಭಾರತದ ಸ್ವಾತಂತ್ರ್ಯದ ಹೊತ್ತಿಗೆ, ಕಂಪನಿಯು ಅಹಮದಾಬಾದ್‌ ನಗರದಾದ್ಯಂತ ನಾಲ್ಕು ಮಳಿಗೆಗಳನ್ನು ತೆರೆದಿತ್ತು. 70 ರ ದಶಕದ ಆರಂಭದಲ್ಲಿ, ರಂಚೋದ್‌ ಲಾಲ್ ಗಾಂಧಿಯವರ ಮಕ್ಕಳಾದ ರಾಮಚಂದ್ರ ಮತ್ತು ಲಕ್ಷ್ಮಣ್ ಗಾಂಧಿ ಕೂಡ ವ್ಯಾಪಾರಕ್ಕೆ ಸೇರಿದಾಗ, ವಡಿಲಾಲ್ ಅಹಮದಾಬಾದ್‌ನಲ್ಲಿ 10 ಮಳಿಗೆಗಳನ್ನು ಆರಂಭ ಮಾಡಿತ್ತು.

ವಡಿಲಾಲ್‌ ಕಂಪನಿಯ ದೊಡ್ಡ ಯಶಸ್ಸಿಗೆ ಕಾರಣ, ಕಂಪನಿ ಎಂದೂ ಗ್ರಾಹಕರ ನಾಡಿಮಿಡಿತವನ್ನು ಅರಿಯದೇ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಕಂಪನಿಯ ಯುಎಸ್‌ಪಿ ಅಂದರೆ ಯುನಿಕ್‌ ಸೆಲ್ಲಿಂಗ್‌ ಪ್ರೊಪೋಷನ್‌ ಏನೆಂದರೆ, ತಮ್ಮ ಎಲ್ಲಾ ಐಸ್‌ಕ್ರೀಮ್‌ಗಳು ಶೇ. 100ರಷ್ಟು ಸಸ್ಯಾಹಾರಿ ಹಾಗೂ ಉಪವಾಸದ ಸಂದರ್ಭಗಳಲ್ಲಿಯೂ ಯಾವುದೇ ಚಿಂತೆಯಲ್ಲದೆ ತಿನ್ನಬಹುದು ಎಂದು ಪ್ರಚಾರ ಮಾಡಲಾಯಿತು. 1990 ರ ಹೊತ್ತಿಗೆ ಗಾಂಧಿ ಕುಟುಂಬದ ನಾಲ್ಕನೇ ತಲೆಮಾರಿನವರು ವ್ಯಾಪಾರಕ್ಕೆ ಸೇರಿಕೊಂಡರು. ಇದರಲ್ಲಿ ರಾಮಚಂದ್ರ ಗಾಂಧಿ  ಅವರ ಮೂವರು ಪುತ್ರರಾದ ವೀರೇಂದ್ರ, ರಾಜೇಶ್ ಮತ್ತು ಶೈಲೇಶ್ ಗಾಂಧಿ ಮತ್ತು ಲಕ್ಷ್ಮಣ್ ಗಾಂಧಿ ಅವರ ಪುತ್ರ ದೇವಾಂಶು ಗಾಂಧಿ ಸೇರಿಕೊಂಡರು.

Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್‌ ನಾಯಕ!

1990 ರಲ್ಲಿ ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನಲ್ಲಿ ವಡಿಲಾಲ್ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಲಿಸ್ಟಿಂಗ್‌ ಆಯಿತು. ಅದೇ ವರ್ಷದಲ್ಲಿ, ಕುಟುಂಬದಲ್ಲಿನ ವಿಭಜನೆಯ ಪರಿಣಾಮವಾಗಿ ಎರಡು ಹೆಸರುಗಳು ಬಿಎಸ್‌ಇಯಲ್ಲಿ ಲಿಸ್ಟಿಂಗ್‌ ಆದವು. ರಫ್ತು ವ್ಯವಹಾರದಿಂದಾಗಿ ಕಂಪನಿ ಮತ್ತಷ್ಟು ವಿಸ್ತಾರವಾಯಿತು. ಒಟ್ಟು 500 ವಿತರಕರು, 40,000 ಚಿಲ್ಲರೆ ವ್ಯಾಪಾರಿಗಳು ಮತ್ತು 120 ಪ್ಲಸ್ ಐಸ್ ಕ್ರೀಮ್ ಫ್ಲೇವರ್‌ಗಳ ಬ್ರ್ಯಾಂಡ್‌ ಆಗಿದ್ದ ವಡಿಲಾಲ್‌, ಈಗ ಅಮೆರಿಕದಲ್ಲಿ ಅತಿದೊಡ್ಡ ಐಸ್ ಕ್ರೀಮ್ ಉತ್ಪಾದಕ ಬ್ರ್ಯಾಂಡ್  ಎನಿಸಿಕೊಂಡಿದೆ. ಸುಮಾರು 40ಕ್ಕೂ ಅಧಿಕ ದೇಶಗಳಲ್ಲಿ ಪ್ರಮುಖ ಐಸ್‌ಕ್ರೀಮ್‌ ಕಂಪನಿ ಎನಿಸಿಕೊಂಡಿದೆ. ಮಂಗಳವಾರದ ವೇಳೆಗೆ ವಡಿಲಾಲ್‌ ಇಂಡಸ್ಟ್ರೀಸ್‌ನ ಕಂಪನಿಯ ಪ್ರತಿ ಷೇರಿಗೆ 4193 ರೂಪಾಯಿ ಆಗಿದೆ.

ಇಂಡಿಯಾ ಮೈತ್ರಿ VS ಇಂಡಿಯಾ ಮೈತ್ರಿ: ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆಗೆ ಕೇರಳ ಸಿಎಂ ಕಿಡಿ!

Latest Videos
Follow Us:
Download App:
  • android
  • ios