NPS ವಿತ್ ಡ್ರಾನಿಂದ ಹಿಡಿದು ಸಾವರಿನ್ ಗೋಲ್ಡ್ ಬಾಂಡ್ ತನಕ ಫೆಬ್ರವರಿಯಲ್ಲಿ ಈ 6 ಹಣಕಾಸು ನಿಯಮಗಳಲ್ಲಿ ಬದಲಾವಣೆ

ಫೆಬ್ರವರಿ ತಿಂಗಳಲ್ಲಿ ಎನ್ ಪಿಎಸ್ ವಿತ್ ಡ್ರಾ, ಐಎಂಪಿಎಸ್ ಸೇರಿದಂತೆ ಒಟ್ಟು ಆರು ಹಣಕಾಸಿನ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. 
 

Latest Sovereign Gold Bond tranche new IMPS NPS withdrawal rules 6 money changes in February 2024 anu

ನವದೆಹಲಿ (ಜ.30): ಫೆಬ್ರವರಿ ತಿಂಗಳ ಪ್ರಾರಂಭಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿವೆ. ಪ್ರತಿ ಹೊಸ ತಿಂಗಳು ಪ್ರಾರಂಭವಾದಾಗ ಒಂದಿಷ್ಟು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದರಂತೆ ಫೆಬ್ರವರಿ ತಿಂಗಳಲ್ಲಿ ಕೂಡ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ನಿಯಮಗಳ ಬದಲಾವಣೆಗಳು ನಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇಲ್ಲವಾದ್ರೆ ಮುಂದೆ ತೊಂದರೆಗಳು ಎದುರಾಗಬಹುದು. ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಬದಲಾಗುವ ಈ 6 ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅಗತ್ಯ.

1.NPS ವಿತ್ ಡ್ರಾ ನಿಯಮ
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ಅಡಿಯಲ್ಲಿ ಪಿಂಚಣಿ ವಿತ್ ಡ್ರಾಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಈ ಬಗ್ಗೆ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ತನ್ನ ಹೊಸ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ. ಈ ಹೊಸ ಸುತ್ತೋಲೆ 2024ರ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಈ ಅಪ್ಡೇಟ್ ಆಗಿರುವ ನಿಯಮಗಳ ಪ್ರಕಾರ ಚಂದಾದಾರರು ತಮ್ಮ ವೈಯಕ್ತಿಕ ಪಿಂಚಣಿ ಖಾತೆಯಿಂದ ಉದ್ಯೋಗದಾತ ಸಂಸ್ಥೆಗಳ ಕೊಡುಗೆ ಹೊರತುಪಡಿಸಿ, ತಾವು ಮಾಡಿದ ಕೊಡುಗೆಯಿಂದ ಶೇ.25ರಷ್ಟು ಮೀರದಂತೆ ಭಾಗಶಃ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಚಂದಾದಾರರು ತಾವು ಸೇರ್ಪಡೆಗೊಂಡ ದಿನಾಂಕದಿಂದ ಕನಿಷ್ಠ ಮೂರು ವರ್ಷಗಳ ಕಾಲ ಎನ್ ಪಿಎಸ್ ಸದಸ್ಯರಾಗಿರೋದು ಕಡ್ಡಾಯ. ಒಬ್ಬ ಚಂದಾದಾರ ಎನ್ ಪಿಎಸ್ ಅವಧಿಯುದ್ದಕ್ಕೂ ಗರಿಷ್ಠ ಮೂರು ಭಾಗಶಃ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಫೆ.1ರಿಂದ ಹೊಸ IMPS ನಿಯಮ ಜಾರಿ; ಮೊಬೈಲ್ ಮೂಲಕ 5ಲಕ್ಷ ರೂ. ತನಕ ಹಣ ವರ್ಗಾವಣೆ ಇನ್ನಷ್ಟು ಸುಲಭ

2.IMPS ಹೊಸ ನಿಯಮ
ತ್ವರಿತ ಪಾವತಿ ಸೇವೆ (ಐಎಂಪಿಎಸ್ ) ಫೆ.1ರಿಂದ ಮಹತ್ವದ ಬದಲಾವಣೆಗೆ ಒಳಪಡಲಿದೆ. ಇದರಿಂದ ಐಎಂಪಿಎಸ್ ಬ್ಯಾಂಕ್ ಖಾತೆಗಳ ನಡುವೆ ಹಣದ ವರ್ಗಾವಣೆ ಇನ್ನಷ್ಟು ಸುಲಭವಾಗಲಿದೆ. ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ಈ ಹೊಸ ನಿಯಮ ಪರಿಚಯಿಸಿದ್ದು, ಇದರ ಅನ್ವಯ ಗ್ರಾಹಕರು 5ಲಕ್ಷ ರೂ. ತನಕದ ಮೊತ್ತವನ್ನು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ ಎಸ್ ಸಿ ಕೋಡ್  ಸೇರಿದಂತೆ ಫಲಾನುಭವಿಗಳ ಯಾವುದೇ ಮಾಹಿತಿಗಳನ್ನು ಸೇರ್ಪಡೆಗೊಳಿಸದೆ ವರ್ಗಾವಣೆ ಮಾಡಬಹುದು. 

3.ಫಾಸ್ಟ್ ಟ್ಯಾಗ್ ಇ-ಕೆವೈಸಿ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಸವಾರರಿಗೆ ಜನವರಿ 31ರೊಳಗೆ  ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಿದೆ. ಅಲ್ಲದೆ, ಕೆವೈಸಿ ಪೂರ್ಣಗೊಳಿಸದವರ 
 ಫಾಸ್ಟ್ ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸೋದಾಗಿ ಕೂಡ ತಿಳಿಸಿದೆ. ಒಂದು ವಾಹನ ಒಂದು ಫಾಸ್ಟಾಗ್ ನಿಯಮ ಜಾರಿಗೊಳಿಸಿದ NHAI, ಟೋಲ್ ಗೇಟ್‌ಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿತ್ತು. ಆದರೆ ಕೆಲ ಫಾಸ್ಟಾಗ್‌ಗಳು ಹಲವು ವಾಹನಗಳಲ್ಲಿ ಬಳಕೆಯಾಗಿದೆ. ಇಷ್ಟೇ ಅಲ್ಲ ಕೆಲ ವಾಹನದಲ್ಲಿ ಹಲವು ಫಾಸ್ಟಾಗ್ ಬಳಕೆ ಮಾಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳನ್ನು ಹಾಗೂ ವಾಹನ ಟ್ರಾಕ್ ಸೂಕ್ತವಾಗಿ ಮಾಡಲು ಒಂದು ವಾಹನ ಒಂದು ಫಾಸ್ಟಾಗ್ ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಕೆವೈಸಿ ಇದೀಗ ಕಡ್ಡಾಯವಾಗಿದೆ.

ಎನ್ ಪಿಎಸ್ ಹೊಸ ನಿಯಮ ಫೆ.1ರಿಂದ ಜಾರಿ; ಶೇ.25ರಷ್ಟು ಭಾಗಶಃ ವಿತ್ ಡ್ರಾಗೆ ಅವಕಾಶ

4.ಸಾವರಿನ್ ಗೋಲ್ಡ್ ಬಾಂಡ್ ಹೊಸ ಸರಣಿ
2023-24ನೇ  ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಕೊನೆಯ ಸರಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದೆ.  ಸಾವರಿನ್ ಗೋಲ್ಡ್ ಬಾಂಡ್ 2023-24 ಸಾಲಿನ ನಾಲ್ಕನೇ ಸರಣಿ ಫೆ.12ರಿಂದ ಚಂದಾದಾರಿಕೆಗೆ ಲಭ್ಯವಾಗಲಿದೆ. ಇನ್ನು ಇದು ಫೆ.16ರ ತನಕ ಮಾತ್ರ ಚಂದಾದಾರಿಕೆಗೆ ಸಿಗಲಿದೆ. 

5.ಎಸ್ ಬಿಐ ಗೃಹಸಾಲ ಅಭಿಯಾನ
ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗ್ರಾಹಕರಿಗೆ ನಿಗದಿತ ಬಡ್ಡಿದರಕ್ಕಿಂತ  65 ಬಿಪಿಎಸ್ ಕಡಿಮೆ ದರದಲ್ಲಿ ಗೃಹಸಾಲಗಳನ್ನು ನೀಡುತ್ತಿದೆ. ಈ ಆಫರ್ ಜನವರಿ 31ರ ತನಕ ಮಾತ್ರ ಲಭ್ಯವಿದೆ. 

6.ಪಂಜಾಬ್ ಹಾಗೂ ಸಿಂಧ್ ವಿಶೇಷ ಎಫ್ ಡಿ ಗಡುವು
ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ವಿಶೇಷ ಎಫ್ ಡಿ ಯೋಜನೆ ಪ್ರಾರಂಭಿಸಿದೆ. 'ಧನ್ ಲಕ್ಷ್ಮೀ 444 ದಿನಗಳು' ಹೆಸರಿನ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಜನವರಿ 31, 2024ರ ತನಕ ಅವಕಾಶವಿದೆ. ಈ ಠೇವಣಿ ಮೇಲೆ ಶೇ. 7.60 ರಷ್ಟು ಬಡ್ಡಿದರ ಸಿಗಲಿದೆ. 

Latest Videos
Follow Us:
Download App:
  • android
  • ios