Asianet Suvarna News Asianet Suvarna News

ಫೆ.1ರಿಂದ ಹೊಸ IMPS ನಿಯಮ ಜಾರಿ; ಮೊಬೈಲ್ ಮೂಲಕ 5ಲಕ್ಷ ರೂ. ತನಕ ಹಣ ವರ್ಗಾವಣೆ ಇನ್ನಷ್ಟು ಸುಲಭ

ಐಎಂಪಿಎಸ್ ಹೊಸ ನಿಯಮ ಫೆ.1ರಿಂದ ಜಾರಿಗೆ ಬರಲಿದೆ.ಇದರ ಅನ್ವಯ ಗ್ರಾಹಕರು 5ಲಕ್ಷ ರೂ. ತನಕದ ಮೊತ್ತವನ್ನು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ ಎಸ್ ಸಿ ಕೋಡ್  ಸೇರಿದಂತೆ ಫಲಾನುಭವಿಗಳ ಯಾವುದೇ ಮಾಹಿತಿಗಳನ್ನು ಸೇರ್ಪಡೆಗೊಳಿಸದೆ ವರ್ಗಾವಣೆ ಮಾಡಬಹುದು.

New IMPS rule from Feb 1 You can transfer up to Rs 5 lakh without adding a beneficiary anu
Author
First Published Jan 29, 2024, 4:55 PM IST | Last Updated Jan 29, 2024, 4:55 PM IST

ನವದೆಹಲಿ (ಜ.29): ಭಾರತದಲ್ಲಿ ತ್ವರಿತ ಪಾವತಿ ಸೇವೆ (ಐಎಂಪಿಎಸ್ ) ಫೆ.1ರಿಂದ ಮಹತ್ವದ ಬದಲಾವಣೆಗೆ ಒಳಪಡಲಿದೆ. ಈ ಮೂಲಕ ಐಎಂಪಿಎಸ್ ಬ್ಯಾಂಕ್ ಖಾತೆಗಳ ನಡುವೆ ಹಣದ ವರ್ಗಾವಣೆಯನ್ನು ಇನ್ನಷ್ಟು ಸುಲಭವಾಗಿಸಲಿದೆ. ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ಹೊಸ ನಿಯಮ ಪರಿಚಯಿಸಿದ್ದು, ಇದರ ಅನ್ವಯ ಗ್ರಾಹಕರು 5ಲಕ್ಷ ರೂ. ತನಕದ ಮೊತ್ತವನ್ನು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ ಎಸ್ ಸಿ ಕೋಡ್  ಸೇರಿದಂತೆ ಫಲಾನುಭವಿಗಳ ಯಾವುದೇ ಮಾಹಿತಿಗಳನ್ನು ಸೇರ್ಪಡೆಗೊಳಿಸದೆ ವರ್ಗಾವಣೆ ಮಾಡಬಹುದು. ಈ ಹೊಸ ಸರಳ ಐಎಂಪಿಎಸ್ ನಿಯಮಗಳಡಿಯಲ್ಲಿ ಬಳಕೆದಾರರು ಪಾವತಿ ಸ್ವೀಕರಿಸುವ ವ್ಯಕ್ತಿಯ ಮೊಬೈಲ್ ಸಂಖ್ಯೆ ಹಾಗೂ ಅವರ ಬ್ಯಾಂಕ್ ಹೆಸರನ್ನು ನಮೂದಿಸುವ ಮೂಲಕ ಹಣ ವರ್ಗಾವಣೆ ಮಾಡಬಹುದು. ಈ ಕ್ರಮ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಿದೆ. ಅಲ್ಲದೆ, ಫಲಾನುಭವಿಯ ಮಾಹಿತಿಗಳನ್ನು ನಮೂದಿಸುವಲ್ಲಿ ತಪ್ಪುಗಳಾಗುವುದನ್ನು ತಗ್ಗಿಸಲು ನೆರವು ನೀಡಿದೆ. 

ಇನ್ನು ಹಣದ ವರ್ಗಾವಣೆಯನ್ನು ಅಧಿಕೃತಗೊಳಿಸುವ ಮುನ್ನ ಫಲಾನುಭವಿಯ ದೃಢೀಕರಣದ ಅಗತ್ಯವಿರುವ ಕಾರಣ ತಪ್ಪಾದ ಹಣದ ವರ್ಗಾವಣೆಯ ಸಾಧ್ಯತೆಯನ್ನು ಇದು ತಗ್ಗಿಸಿದೆ. ಈ ಅಪ್ಡೇಟ್ ವ್ಯವಸ್ಥೆಯನ್ನು ಬಳಕೆದಾರರ-ಸ್ನೇಹಿಯನ್ನಾಗಿ ರೂಪಿಸಲಾಗಿದೆ. ಇನ್ನು ರವಾನೆದಾರರ ಬ್ಯಾಂಕ್ ಗಳು ಸದಸ್ಯ ಬ್ಯಾಂಕ್ ಗಳ ಹೆಸರುಗಳನ್ನು ಎಂಎಂಐಡಿ (ಮೊಬೈಲ್ ಮನಿ ಐಡೆಂಟಿಫಿಕೇಷನ್ ನಂಬ್ರ) ಜೊತೆಗೆ ಮ್ಯಾಪಿಂಗ್ ಮಾಡಬೇಕು ಹಾಗೂ ಈ ಹೊಸ ಹಣ ವರ್ಗಾವಣೆ ವಿಧಾನವನ್ನು ಪ್ರೋತ್ಸಾಹಿಸಲು ಅಗತ್ಯ ಯುಐ ಅಥವಾ ಯುಎಕ್ಸ್ ಹೆಚ್ಚಳ ಮಾಡಬೇಕು. 2023ರ ಅಕ್ಟೋಬರ್ 31ರಂದು ಎನ್ ಪಿಸಿಐ ಹೊರಡಿಸಿರುವ ಸುತ್ತೋಲೆ ಪ್ರಕಾರ ಎಲ್ಲ ಸದ್ಸಯರು ಕಡ್ಡಾಯವಾಗಿ ಈ ಬದಲಾವಣೆಗಳಿಗೆ ಜನವರಿ 31ರೊಳಗೆ ಬದ್ಧರಾಗಿರಬೇಕು.

ಇಪಿಎಫ್ ಯುಎಎನ್ ಮರೆತು ಹೋಗಿದೆಯಾ? ಮರಳಿ ಪಡೆಯಲು ಹೊಸ ವಿಧಾನ ಪ್ರಕಟಿಸಿದ ಇಪಿಎಫ್ ಒ

ಭಾರತದ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ 24x7 ಗಂಟೆಗಳ ಕಾಲ ಲಭ್ಯವಿರುವ ಐಎಂಪಿಎಸ್ ಸೇವೆ ಹಾಗೂ ತ್ವರಿತ ಹಣ ವರ್ಗಾವಣೆ ಸಾಮರ್ಥ್ಯ ಮಹತ್ವದ ಪಾತ್ರ ವಹಿಸಲಿದೆ. ಐಎಂಪಿಎಸ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಬಳಕೆದಾರರು ಈ ಹಂತಗಳನ್ನು ಅನುಸರಿಸೋದು ಅಗತ್ಯ.
ಹಂತ 1: ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಗೆ ತೆರಳಿ.
ಹಂತ 2: 'Fund Transfer'ವಿಭಾಗದ ಮೇಲೆ ಕ್ಲಿಕ್ ಮಾಡಿ.
ಹಂತ 3: ಹಣ ವರ್ಗಾವಣೆಗೆ 'IMPS'ಅನ್ನು ನಿಮ್ಮ ಆಯ್ಕೆಯನ್ನಾಗಿ ಆರಿಸಿ.
ಹತ 4: ಹಣ ಸ್ವೀಕರಿಸೋರ ಮೊಬೈಲ್ ಸಂಖ್ಯೆ ನೀಡಿ. ಆ ಬಳಿಕ ಅವರ ಬ್ಯಾಂಕ್ ಹೆಸರು ಆಯ್ಕೆ ಮಾಡಿ. ಆದರೆ, ಅವರ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ ಎಸ್ ಸಿ ನಮೂದಿಸಬೇಕಾದ ಅಗತ್ಯವಿಲ್ಲ.
ಹಂತ 5: ನೀವು ವರ್ಗಾವಣೆ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ. ಇದು 5ಲಕ್ಷ ರೂ. ಒಳಗೆ ಇರಬೇಕು.
ಹಂತ 6: ಅಗತ್ಯ ದಾಖಲೆಗಳನ್ನು ನೀಡಿದ ಬಳಿಕ 'Confirm'ಮೇಲೆ ಕ್ಲಿಕ್ ಮಾಡಿ.
ಹಂತ 7: ಒನ್ ಟೈಮ್ ಪಾಸ್ ವರ್ಡ್ (OTP) ಸಿಕ್ಕಿದ ಬಳಿಕ ಹಣ ವರ್ಗಾವಣೆ ಮಾಡಿ. 

ಆರೋಗ್ಯ ವಿಮೆಗೆ ಸಂಬಂಧಿಸಿ ಮಹತ್ವದ ನಿಯಮ ಪ್ರಕಟ; ಎಲ್ಲ ಆಸ್ಪತ್ರೆಗಳಲ್ಲೂ ನಗದುರಹಿತ ದಾಖಲಾತಿಗೆ ಅವಕಾಶ

ಐಎಂಪಿಎಸ್ (IMPS) ಅಂದ್ರೇನು? : ಐಎಂಪಿಎಸ್  ಮೂಲಕ NEFT ಮತ್ತು RTGS ನಂತೆ ನೀವು ಯಾರಿಗಾದ್ರೂ ಸುಲಭವಾಗಿ ಹಣವನ್ನು ಕಳುಹಿಸಬಹುದು. ಇದನ್ನು 2010 ರಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಾರಂಭಿಸಿತು. ಬ್ಯಾಂಕ್ (Bank) ಖಾತೆಗಳ ನಡುವೆ ಹಣವನ್ನು ವರ್ಗಾವಣೆ ಮಾಡುವ ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದು ಇದನ್ನು ಪರಿಗಣಿಸಲಾಗಿದೆ. ನೀವು ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಲು ಬಯಸಿದ್ರೆ ಮೊಬೈಲ್ (Mobile) ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸುವುದು ಅವಶ್ಯಕ. ಇಲ್ಲವೆಂದ್ರೆ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀವು ಹೊಂದಿರಬೇಕು. ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ನಿಮಗೆ ಪಿನ್ ನೀಡಲಾಗುತ್ತದೆ. ಅದನ್ನು ಪಾಸ್‌ವರ್ಡ್ (Password) ಆಗಿ ಬಳಸಬಹುದು. ಇದರ ನಂತ್ರ ನಿಮ್ಮ ಬ್ಯಾಂಕ್ ಖಾತೆಯನ್ನು ಬೇರೆ ಯಾವುದೇ ಖಾತೆ (Account) ಗೆ ಲಿಂಕ್ ಮಾಡಬಹುದು ಮತ್ತು ಹಣವನ್ನು ವರ್ಗಾಯಿಸಬಹುದು.


 

Latest Videos
Follow Us:
Download App:
  • android
  • ios