Asianet Suvarna News Asianet Suvarna News

SBI ಫಿಕ್ಸೆಡ್ ಡೆಪಾಸಿಟ್ vs ಪೋಸ್ಟ್ ಆಫೀಸ್ ಡೆಪಾಸಿಟ್; ಯಾವುದರಲ್ಲಿದೆ ಗರಿಷ್ಠ ಬಡ್ಡಿ?

ಸಣ್ಣ ಉಳಿತಾಯದ ಖಾತೆ ಮೇಲಿನ ಬಡ್ಡಿ ದರ ಇಳಿಕೆ ಮಾಡಿ ಮತ್ತೆ ಯಥಾ ಸ್ಥಿತಿ ಕಾಪಾಡಿಕೊಂಡ ಕೇಂದ್ರ ಸರ್ಕಾರ ಜನರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಸಿದೆ. ಕಾರಣ ಶೀಘ್ರದಲ್ಲೇ ಬಡ್ಡಿದರ ಇಳಿಕೆಯಾಗಬಲ್ಲ ಸೂಚನೆಯಂತು ಸಿಕ್ಕಿದೆ. ಹೀಗಾಗಿ ಬಹುತೇಕರು ಇದೀಗ ಫಿಕ್ಸೆಡ್ ಡೆಪಾಸಿಟ್(FD) ಕಡೆ ಗಮನಹರಿಸುತ್ತಿದ್ದಾರೆ. ಹಾಗಾದರೆ SBI ಹಾಗೂ ಪೋಸ್ಟ್ ಆಫೀಸ್‌ಗಳಲ್ಲಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರ ಎಷ್ಟು? ಯಾವುದು ಸೂಕ್ತ? ಇಲ್ಲಿದೆ ಮಾಹಿತಿ.

Latest interest rate term of Fixed deposits in Post Office and SBI ckm
Author
Bengaluru, First Published Apr 2, 2021, 6:13 PM IST

ಬೆಂಗಳೂರು(ಎ.02): ಸುರಕ್ಷಿತ ಹಾಗೂ ಭರವಸೆಯ ಉಳಿತಾಯ ನಿರೀಕ್ಷಿಸುತ್ತಿರುವ ಬಹತೇಕರಿಗೆ ಫಿಕ್ಸೆಡ್ ಡೆಪಾಸಿಟ್ ಅತ್ಯುತ್ತಮ ಆಯ್ಕೆ. ಈ  ಮೂಲಕ ಅಲ್ವಾವಧಿ, ಸುದೀರ್ಘ ಠೇವಣಿ ಮೂಲಕ ಹೆಚ್ಚಿನ ಹಣ ಉಳಿತಾಯದ ಜೊತೆ ಸುರಕ್ಷತೆ ಹಣ ಹಿಂಪಡೆಬಹುದು. SBI , ಪೋಸ್ಟ್ ಆಫೀಸ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಅವಕಾಶಗಳಿವೆ. 

ಹೊಸ ನಿಯಮ ಸದ್ಯಕ್ಕೆ ಕೈ ಬಿಟ್ಟ ಆರ್‌ಬಿಐ: ಆತಂಕದಲ್ಲಿದ್ದ ಗ್ರಾಹಕರು ನಿರಾಳ!

SBI ಹಾಗೂ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ನಿಯಮದಲ್ಲಿ ಕೆಲ ಬದಲಾವಣೆಗಳಿವೆ. ಪೋಸ್ಟ್ ಆಫೀಸ್ ಠೇವಣಿಗಳ ಬಡ್ಡಿ ದರವನ್ನು ತ್ರೈಮಾಸಿಕದಲ್ಲಿ ಪರಿಷ್ಕರಣೆ ಮಾಡುತ್ತದೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಣ್ಣ ಉಳಿತಾಯದ ಮೇಲಿನ ಬಡ್ಡಿ ಕಡಿತಗೊಳಿತ್ತು. ಬಳಿಕ ಯಥಾ ಸ್ಥಿತಿ ಕಾಪಾಡಿಕೊಳ್ಳಲಿದೆ ಎಂದು ಆತಂಕ ದೂರ ಮಾಡಿತ್ತು. ಆದರೆ ಮುಂದಿನ ತ್ರೈಮಾಸಿಕದಲ್ಲಿ ಕೇಂದ್ರ ಬಡ್ಡಿದರ ಕಡಿತಗೊಳಿಸಿದರೂ ಅಚ್ಚರಿಯಿಲ್ಲ. 

ಆಧಾರ್‌ ಜೊತೆ ಪಾನ್‌ ಕಾರ್ಡ್‌ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?

SBI ಹಾಗೂ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರದಲ್ಲಿ ಬದಲಾವಣೆಗಳಿವೆ. ಈ ಎರಡೂ ಬ್ಯಾಂಕ್ ನೀಡುವ ಬಡ್ಡಿ ದರ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗಿದೆ.

ಪೋಸ್ಟ್ ಆಫೀಸ್:
ಪೋಸ್ಟ್ ಆಫೀಸ್‌ ಕೂಡ ಬ್ಯಾಂಕ್‌ನಂತೆ ಫಿಕ್ಸೆಡ್ ಡೆಪಾಸಿಟ್ ಆಯ್ಕೆ ನೀಡಿದೆ. ಪೋಸ್ಟ್ ಆಫೀಸ್ 1 ರಿಂದ 5 ವರ್ಷದವರೆಗೆ ಫಿಕ್ಸೆಡ್ ಡೆಪಾಸಿಟ್ ಟರ್ಮ್ ನಿಗದಿ ಪಡಿಸಿದೆ. ಎಪ್ರಿಲ್ 1, 2021ರಿಂದ ಅನ್ವಯವಾಗುವಂತೆ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರವವನ್ನು5.5% ರಿಂದ 6.7 % ವರೆಗೆ ನೀಡುತ್ತದೆ.

ಪೋಸ್ಟ್ ಆಫೀಸ್ ಫಿಕ್ಸೆಡ್ ಡಾಪಿಸಿಟ್ ಬಡ್ಡಿದರ ಹಾಗೂ ವರ್ಷ
1 ವರ್ಷ ಅವಧಿ: 5.5% ಬಡ್ಡಿ
2 ವರ್ಷ ಅವಧಿ: 5.5% ಬಡ್ಡಿ
3 ವರ್ಷ ಅವಧಿ: 5.5% ಬಡ್ಡಿ
4 ವರ್ಷ ಅವಧಿ: 5.5% ಬಡ್ಡಿ
5 ವರ್ಷ ಅವಧಿ: 6.7% ಬಡ್ಡಿ

ಪೋಸ್ಟ್ ಆಫೀಸ್‌ನಲ್ಲಿ ಫಿಕ್ಸೆಡ್ ಡಾಪಿಸಿಟ್ ಟರ್ಮ್ ಕನಿಷ್ಠ 1 ವರ್ಷದಿಂದ ಗರಿಷ್ಠ 5 ವರ್ಷದವರಗೆ ನೀಡುತ್ತಿದೆ. ಆದರೆ SBI ಬ್ಯಾಂಕ್ 7 ರಿಂದ 45 ದಿನದ ಫಿಕ್ಸೆಡ್ ಡಾಪಿಸಿಟ್ ಟರ್ಮ್‌ನಿಂದ ಆರಂಭಿಸಿ ಗರಿಷ್ಠ 10 ವರ್ಷದ ವರಗೆ ನೀಡಲಿದೆ. ಈ ಬಡ್ಡಿದರ 2021ರ ಜನವರಿಯಿಂದ ಜಾರಿಯಲ್ಲಿದೆ. 

SBI ಫಿಕ್ಸೆಡ್ ಡಾಪಿಸಿಟ್ ಬಡ್ಡಿದರ ಹಾಗೂ ವರ್ಷ:
7 ರಿಂದ 45 ದಿನ: 2.9% ಬಡ್ಡಿ
46 ರಿಂದ 179 ದಿನ: 3.9% ಬಡ್ಡಿ
ಒಂದು ವರ್ಷದೊಳಗಿನ ಅವಧಿ:  4.4% ಬಡ್ಡಿ
1 ರಿಂದ 2 ವರ್ಷದೊಳಗಿನ ಅವಧಿ: 5 % ಬಡ್ಡಿ
2 ರಿಂದ 3 ವರ್ಷದೊಳಗಿನ ಅವಧಿ: 5.1% ಬಡ್ಡಿ
3 ರಿಂದ 5 ವರ್ಷದೊಳಗಿನ ಅವಧಿ: 5.3% ಬಡ್ಡಿ
5 ರಿಂದ 10 ವರ್ಷದೊಳಗಿನ ಅವಧಿ: 5.4% ಬಡ್ಡಿ

SBI ಹಿರಿಯ ನಾಗರೀಕರಿಗೆ ವಿಶೇಷ ಬಡ್ಡಿದರ ನಿಗದಿ ಪಡಿಸಿದೆ.  ಹಿರಿಯ ನಾಗರಿಕರಿಗೆ 7 ರಿಂದ 10 ವರ್ಷದೊಳಗಿನ ಫಿಕ್ಸೆಡ್ ಡೆಪಾಸಿಟ್‌ಗೆ 3.4% ರಿಂದ 6.2% ಬಡ್ಡಿ ದರ ನಿಗದಿಪಡಿಸಲಾಗಿದೆ.

Follow Us:
Download App:
  • android
  • ios