Asianet Suvarna News Asianet Suvarna News

Business Ideas : ಮಹಿಳೆಯ ಸೌಂದರ್ಯ ಹೆಚ್ಚಿಸಿ ಗಳಿಕೆ ಶುರು ಮಾಡಿ

ಮಹಿಳೆಯರಿಗೆ ಹಣಗಳಿಸಲು ಅನೇಕ ವಿಧಾನಗಳಿವೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ಸಣ್ಣಪುಟ್ಟು ವ್ಯಾಪಾರ ಶುರು ಮಾಡಿ ಮಹಿಳೆಯರು ಹಣ ಗಳಿಸಬಹುದು. ಅದ್ರಲ್ಲಿ ಬ್ಯೂಟಿಪಾರ್ಲರ್ ಕೂಡ ಸೇರಿದೆ. ಬ್ಯೂಟಿಪಾರ್ಲರ್ ಕೋರ್ಸ್ ಮಾಡಿ ಈ ಕೆಲಸ ಶುರು ಮಾಡಿದ್ರೆ ನಷ್ಟದ ಮಾತಿಲ್ಲ.
 

Ladies Beauty Parlour Business
Author
First Published Feb 14, 2023, 5:28 PM IST

ಬ್ಯೂಟಿ ಪಾರ್ಲರ್, ಯಾವಾಗ್ಲೂ ಬ್ಯುಸಿಯಾಗಿರುವ ಸ್ಥಳ. ಮಹಿಳೆಯರ ಇಷ್ಟದ ಸ್ಥಳಗಳಲ್ಲಿ ಒಂದು. ಕೊರೊನಾ ಸಂದರ್ಭದಲ್ಲೂ ಬೇಡಿಕೆಯಲ್ಲಿದ್ದ ಬ್ಯೂಟಿಪಾರ್ಲರ್ ನಿಮ್ಮ ಖಜಾನೆ ತುಂಬಿಸೋದ್ರಲ್ಲಿ ಎರಡು ಮಾತಿಲ್ಲ. ನೀವು ಕೂಡ ಬ್ಯೂಟಿ ಬಗ್ಗೆ ಆಸಕ್ತಿ ಹೊಂದಿದ್ದರೆ ಬ್ಯೂಟಿಪಾರ್ಲರ್ ತೆರೆಯುವ ಮೂಲಕ ಗಳಿಕೆ ಶುರು ಮಾಡಬಹುದು. 

ಬ್ಯೂಟಿಪಾರ್ಲರ್ (Beautyparlour) ತೆರೆಯೋದು ಹೇಗೆ? : ಬ್ಯೂಟಿ ಪಾರ್ಲರ್ ತೆರೆಯುವ ಮುನ್ನ ನೀವು ಬ್ಯೂಟಿಷಿಯನ್ ಕೋರ್ಸ್ (Course ) ಮಾಡಿರಬೇಕು. ನೀವು ಯಾವುದೇ ಬ್ಯೂಟಿಷಿಯನ್ ಕೋರ್ಸ್ ಮಾಡಿಲ್ಲದಿದ್ದರೆ, ಮೊದಲು ಪಾರ್ಲರ್ ಅಥವಾ ಅಕಾಡೆಮಿಯಲ್ಲಿ ತರಬೇತಿ (Training) ಪಡೆಯಿರಿ. ನಂತ್ರ ಪಾರ್ಲರ್ ತೆರೆಯುವ ಯೋಚನೆ ಮಾಡಿ. ಏಕೆಂದರೆ ತರಬೇತಿ ಪಡೆಯದೆ ಈ ಕೆಲಸ ಮಾಡಿದ್ರೆ ಯಡವಟ್ಟಾಗೋದು ಗ್ಯಾರಂಟಿ.

ನೀವು ಬ್ಯೂಟಿಷಿಯನ್ ಕೋರ್ಸ್ ಮಾಡಿದ್ರೆ ಮನೆಯಲ್ಲಿಯೇ ಬ್ಯೂಟಿಪಾರ್ಲರ್ ಬ್ಯುಸಿನೆಸ್ (Business) ಶುರು ಮಾಡಬಹುದು. ಈಗಿನ ದಿನಗಳಲ್ಲಿ ನೀವು ಬ್ಯೂಟಿ ಪಾರ್ಲರ್ ಗಾಗಿ ಶಾಪ್ ಓಪನ್ ಮಾಡ್ಬೇಕಾಗಿಲ್ಲ. ಗ್ರಾಹಕರ ಮನೆಗೆ ಹೋಗಿ ಸೇವೆಯನ್ನು ನೀಡೋದು ಈಗ ಫೇಮಸ್ ಆಗಿದೆ. ಹಾಗಾಗಿ ನೀವು ಗ್ರಾಹಕರ ಮನೆಗೆ ಹೋಗಿ ಅವರಿಗೆ ಬೇಕಾದ ಸೇವೆ ನೀಡಿ ಯಾವುದೇ ಹೆಚ್ಚಿನ ಖರ್ಚಿಲ್ಲದೆ ಬ್ಯೂಟಿಪಾರ್ಲರ್ ವ್ಯವಹಾರ ಶುರು ಮಾಡ್ಬಹುದು.  ಜನನಿಬಿಡಿ ಪ್ರದೇಶದಲ್ಲಿ ನಿಮ್ಮ ಮನೆಯಿದ್ರೆ ನೀವು ಮನೆಯಲ್ಲಿಯೇ ಚಿಕ್ಕದಾಗಿ ಇದನ್ನು ಶುರು ಮಾಡ್ಬಹುದು. ನಂತ್ರ ಅಗತ್ಯವಾದ್ರೆ ನೀವು ಶಾಪ್ ತೆರೆಯಬಹುದು.

HDFC ಗ್ರಾಹಕರಿಗೆ ಶುಭಸುದ್ದಿ; ಇನ್ಮುಂದೆ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಬೇಕಾಗಿಲ್ಲ!

ಬ್ಯೂಟಿಪಾರ್ಲರ್ ಗೆ ನೋಂದಣಿ (Registration of Beauty Parlors): ಬ್ಯೂಟಿ ಪಾರ್ಲರ್‌ನ ಲಾಭವು ಜಿಎಸ್‌ಟಿ ವಹಿವಾಟಿಗೆ ಹೆಚ್ಚಾದಾಗ ಮಾತ್ರ ನೀವು ಜಿಎಸ್‌ಟಿ ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಪಾರ್ಲರ್ ಸಣ್ಣ ಪ್ರಮಾಣದಲ್ಲಿದ್ದರೆ ನಿಮಗೆ ಯಾವುದೇ ರೀತಿಯ ನೋಂದಣಿ ಅಗತ್ಯವಿಲ್ಲ. ಬ್ಯೂಟಿಪಾರ್ಲರ್ ವ್ಯಾಪ್ತಿ ದೊಡ್ಡದಿದೆ. ನೀವು ತರಬೇತಿ ಪಡೆದು ಮಹಿಳೆಯರ ಸೌಂದರ್ಯ ವೃದ್ಧಿಗೆ ಸಹಾಯ ಮಾಡಬಹುದು. ಅದಿಲ್ಲವೆಂದ್ರೆ ಬ್ಯೂಟಿ ಉತ್ಪನ್ನಗಳನ್ನು ಮಾರಾಟ ಮಾಡಿಯೂ ನೀವು ಹಣ ಗಳಿಸಬಹುದು. ವೃತ್ತಿಪರ ಕೋರ್ಸ್ ಮಾಡುವ ಮೂಲಕ ಸೌಂದರ್ಯ ಚಿಕಿತ್ಸೆಯನ್ನೂ ಮಾಡಬಹುದು. ಗೋರಂಟಿಯನ್ನು ಸುಂದರವಾಗಿ ಹಾಕ್ತಿದ್ದರೆ ಮದುವೆ ಸಮಾರಂಭದಲ್ಲಿ ಗೋರಂಟಿ ಹಾಕಿಯೂ ನೀವು ಹಣ ಗಳಿಸಬಹುದು.

ಬ್ಯೂಟಿ ಪಾರ್ಲರ್ ತೆರೆಯಲು ಬೇಕಾಗುವ ವೆಚ್ಚ : ಈ ಕೆಲಸವನ್ನು ನಿಮ್ಮ ಮನೆಯಿಂದಲೇ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ನೀವು ಬಯಸಿದರೆ, ನೀವು ಕೇವಲ 10 ರಿಂದ 15000 ಸಾವಿರ ಬಂಡವಾಳ ಹಾಕಿ ಕೆಲಸವನ್ನು ಪ್ರಾರಂಭಿಸಬಹುದು. ಬ್ಯೂಟಿ ಪಾರ್ಲರ್ ಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿ ಮಾಡ್ಬೇಕು. ನಂತರದ ದಿನಗಳಲ್ಲಿ ನೀವು ನಿಮ್ಮ ಉತ್ಪನ್ನಗಳನ್ನು ಹೆಚ್ಚಿಸುತ್ತ ಹೋಗ್ಬೇಕು. ದೊಡ್ಡ ಪ್ರಮಾಣದಲ್ಲಿ ಬ್ಯೂಟಿ ಪಾರ್ಲರ್ ತೆರೆಯಲು ಬಯಸಿದ್ರೆ ಕನಿಷ್ಠ 1 ರಿಂದ 2 ಲಕ್ಷ ಹೂಡಿಕೆ ಮಾಡಬೇಕು. 

ಬ್ಯೂಟಿ ಪಾರ್ಲರ್‌ನಲ್ಲಿ ಬಳಸುವ ವಸ್ತುಗಳನ್ನು ಎಲ್ಲಿ ಖರೀದಿಸಬೇಕು ? :  ಈ ಕೆಲಸಕ್ಕೆ ಹೊಸಬರಾಗಿದ್ದರೆ ವಸ್ತುಗಳು ಎಲ್ಲಿ ಸಿಗುತ್ತವೆ ಎಂಬುದನ್ನು ಮೊದಲು ಪತ್ತೆ ಮಾಡಿ. ಕೆಲವೊಂದು ವಸ್ತುಗಳ ಬೆಲೆ ಕಡಿಮೆ ಇರುತ್ತದೆ, ಆದ್ರೆ ಗುಣಮಟ್ಟ ಚೆನ್ನಾಗಿರುವುದಿಲ್ಲ. ಹಾಗಾಗಿ ನೀವು ಗುಣಮಟ್ಟಕ್ಕೆ ಆದ್ಯತೆ ನೀಡ್ಬೇಕು. ಒಳ್ಳೆಯ ಉತ್ಪನ್ನಗಳನ್ನು ಬಳಸಿದ್ರೆ ಗ್ರಾಹಕರು ಮತ್ತೆ ಮತ್ತೆ ನಿಮ್ಮ ಬಳಿ ಬರ್ತಾರೆ.

Business Idea : ಸಂಗೀತದ ಮೂಲಕ ಮನರಂಜನೆ ನೀಡಿ ಹಣ ಗಳಸಿ

ಬ್ಯೂಟಿಪಾರ್ಲರ್ ಬ್ಯುಸಿನೆಸ್ ನಿಂದಾಗುವ ಲಾಭ (Profit) : ಲಾಭ ನೀವು ಹೇಗೆ ಕೆಲಸ ಮಾಡ್ತೀರಿ ಎಂಬುದನ್ನು ಅವಲಂಭಿಸಿದೆ. ನಿಮ್ಮ ಕೆಲಸ ಗ್ರಾಹಕರಿಗೆ ಇಷ್ಟವಾಗ್ಬೇಕು. ನೀವು ಹೆಚ್ಚಿನ ಜಾಹೀರಾತುಗಳನ್ನು ನೀಡ್ಬೇಕು. ಶಾಪ್ ಜೊತೆ ಗ್ರಾಹಕರ ಮನೆಗಳಿಗೆ ಹೋಗಿ ಸೇವೆ ನೀಡಿದಾಗ ಹೆಚ್ಚು ಗಳಿಕೆ ಮಾಡ್ಬಹುದು.   
 

Follow Us:
Download App:
  • android
  • ios