ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು, ಭಾನುವಾರ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂದು ಭಾರಿ ವಿವಾದ ಸೃಷ್ಟಿಸಿದ ಎಲ್ ಆ್ಯಂಡ್ ಟಿ ಚೇರ್ಮೆನ್ ಎಸ್ಎನ್ ಸುಬ್ರಹ್ಮಣ್ಯನ್ ವೇತನದಲ್ಲಿ  ಶೇಕಡಾ 50 ರಷ್ಟು  ಹೆಚ್ಚಳವಾಗಿದೆ. ಇದೀಗ ವಾರ್ಷಿಕ ಸ್ಯಾಲರಿ ಎಷ್ಟು?

ನವದೆಹಲಿ (ಜು.19) ದೇಶದಲ್ಲಿ ಉದ್ಯೋಗಿಗಳು ಹೆಚ್ಚು ಗಂಟೆ ಕೆಲಸ ಮಾಡಬೇಕು ಅನ್ನೋ ಚರ್ಚೆ ಭಾರಿ ವಿವಾದಕ್ಕೂ ಕಾರಣಾಗಿತ್ತು. ಇನ್ಫೋಸಿಸ್ ನಾರಾಯಣಮೂರ್ತಿ ಬಳಿಕ ಎಲ್ ಆ್ಯಂಡ್ ಟಿ ಚೇರ್ಮೆನ್ ಎಸ್ಎನ್ ಸುಬ್ರಹ್ಮಣ್ಯನ್ ವಾರದಲ್ಲಿ ಉದ್ಯೋಗಿಗಳು 90 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಭಾನುವಾರದ ರಜಾ ದಿನದಲ್ಲಿ ಮನೆಯಲ್ಲಿ ಹೆಂಡ್ತಿ ಮುಖ ಎಷ್ಟು ಹೊತ್ತು ನೋಡುತ್ತೀರಿ, ಕಚೇರಿಗೆ ಬಂದು ಕೆಲಸ ಮಾಡಿ ಎಂದು ಸೂಚಿಸಿದ್ದರು. ಉದ್ಯೋಗಿಗಳನ್ನು 90 ಗಂಟೆ ಕೆಲಸ ಮಾಡಲು ಹೇಳಿದ ಎಲ್ ಆ್ಯಂಡ್ ಟಿ ಚೇರ್ಮೆನ್ ಸುಬ್ರಹ್ಮಣ್ಯನ್ ವೇತನ ಈ ವರ್ಷ ಬರೋಬ್ಬರಿ ಶೇಕಡಾ 50 ರಷ್ಟು ಹೆಚ್ಚಳ ಮಾಡಲಾಗಿದೆ.

F25 ಸಾಲಿನಲ್ಲಿ ಸುಬ್ರಹ್ಮಣ್ಯನ್ ವಾರ್ಷಿಕ ಸ್ಯಾಲರಿ ಎಷ್ಟು?

ಉದ್ಯೋಗಿಗಳು ಹೆಚ್ಚು ಕೆಲಸ ಮಾಡಲು ಸೂಚಿಸಿದ ಎಲ್ ಆ್ಯಂಡ್ ಟಿ ಚೇರ್ಮೆನ್ ಸುಬ್ರಹ್ಮಣ್ಯನ್ ತಮ್ಮ ವೇತವನ್ನು ಬರೋಬ್ಬರಿ ಶೇಕಡಾ 50 ರಷ್ಟು ಹೆಚ್ಚಿಸಿಕೊಂಡಿದ್ದಾರೆ. 2024ರ ಸಾಲಿನಲ್ಲಿ ವಾರ್ಷಿಕ ವೇತನ 51.05 ಕೋಟಿ ರೂಪಾಯಿ ವೇತನ ಪಡೆದಿದ್ದರೆ, 2023ರ ಸಾಲಿನಲ್ಲಿ 35.7 ಕೋಟಿ ರೂಪಾಯಿ ವಾರ್ಷಿಕ ವೇತನ ಪಡೆದಿದ್ದರು. ಇದೀಗ ಅಂದರೆ 2025ರ ಸಾಲಿನಲ್ಲಿ ಇವರ ವಾರ್ಷಿಕ ಸ್ಯಾಲರಿ 76.25 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಸುಬ್ರಹ್ಮಣ್ಯನ್ ವೇತನದಲ್ಲಿ ಭಾರಿ ಏರಿಕೆ ಹಿಂದೆ ಎಂಪ್ಲಾಯ್ ಸ್ಟಾಕ್ ಆಪ್ಶನ್ (ESOPs) ಕೂಡ ಸೇರಿದೆ. ಈ ವರ್ಷ ಸುಬ್ರಹ್ಮಣ್ಯನ್ ESOPs ಸ್ಟಾಕ್ಸ್ ಮೌಲ್ಯ 16 ಕೋಟಿ ರೂಪಾಯಿ ಆಗಿದೆ.ಕಳೆದ ಹಲವು ವರ್ಷಗಳ ಸೇವೆಯಿಂದ ಸಿಕ್ಕಿದ ESOPs ಸ್ಟಾಕ್ ವಾಲ್ಯೂ ಸುಬ್ರಹ್ಮಣ್ಯನ್ ಸ್ಯಾಲರಿಯಲ್ಲಿ ಭಾರಿ ಏರಿಕೆ ತರುವಲ್ಲಿ ಯಶಸ್ವಿಯಾಗಿದೆ.

ಬಾಸ್‌ಗೆ ಶೇಕಡಾ 50, ಉದ್ಯೋಗಿಳಿಗೆ ಶೇ.8ರಷ್ಟು ಸ್ಯಾಲರಿ ಹೈಕ್

ಉದ್ಯೋಗಿಗಳು 90 ಗಂಟೆ ಕೆಲಸಕ್ಕೆ ಸೂಚಿಸಿದ ಸುಬ್ರಹ್ಮಣ್ಯನ್ ತಮ್ಮ ಉದ್ಯೋಗಳಿಗೆ ನೀಡಿದ ಸ್ಯಾಲರಿ ಹೈಕ್ ಶೇಕಡಾ 8.2 ರಷ್ಟು. ಇನ್ನು ಬೋರ್ಡ್ ಮಟ್ಟದಲ್ಲಿ, ಮ್ಯಾನೇಜರ್ ಲೆವಲ್‌ನಲ್ಲಿರುವ ಉದ್ಯೋಗಿಗಳಿಗೆ ಶೇಕಡಾ 21.8ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಸ್ವತಃ ಸುಬ್ರಹ್ಮಣ್ಯನ್ ಸ್ಯಾಲರಿ ಕಳೆದೆರಡು ವರ್ಷದಲ್ಲಿ ಶೇಕಡಾ 50 ರಷ್ಟು ಹೆಚ್ಚಾಗಿದೆ.

58,244 ಪರ್ಮನೆಂಟ್ ಉದ್ಯೋಗಿಗಳ ಸಂಸ್ಥೆ

ಎಲ್ ಆ್ಯಂಡ್ ಟಿ ಕಂಪನಿಯಲ್ಲಿ 58,244 ಪರ್ಮನೆಂಟ್ ಉದ್ಯೋಗಿಗಳಿದ್ದಾರೆ. ಇದೇ ವೇಳೆ ಹಲವರು ಗುತ್ತಿಗೆ ಆಧಾರ, ಎಜೆನ್ಸಿ ಸೇರಿದಂತೆ ಇತರ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಎಲ್ ಆ್ಯಂಡ್ ಟಿ ಆದಾಯ 2.56 ಲಕ್ಷ ಕೋಟಿ ರೂ.ಗೆ ಏರಿಕೆ

ಎಲ್ ಆ್ಯಂಡ್ ಟಿ ಕಂಪನಿ ವಾರ್ಷಿಕ ಆದಾಯ 2.56 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಟ್ಟು ಆದಾಯದಲ್ಲಿ ಈ ವರ್ಷ ಶೇಕಡಾ 16 ರಷ್ಟು ಏರಿಕೆಯಾಗಿದೆ. ಇದರಲ್ಲಿ ನಿವ್ವಳ ಲಾಭ ಶೇಕಡಾ 15ರಷ್ಟು ಏರಿಕೆಯಾಗಿದೆ. ಈ ವರ್ಷದ ಎಲ್ ಆ್ಯಂಡ್ ಟಿ ನಿವ್ವಳ ಲಾಭ 15,037 ಕೋಟಿ ರೂಪಾಯಿ ಆಗಿದೆ.

ಸ್ಟಾಕ್ ನಿರೀಕ್ಷಿತ ರಿಟರ್ಸನ್ ನೀಡಿಲ್ಲ

ಎಲ್ ಆ್ಯಂಡ್ ಟಿ ಆದಾಯ, ಲಾಭದಲ್ಲೂ ಉತ್ತಮ ಏರಿಕೆ ಕಂಡಿದೆ. ಆದರೆ ಷೇರು ಮೌಲ್ಯದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ. 2024ರಲ್ಲಿ ಷೇರುಗಳಿಂದ ಬಂದಿರುವ ರಿಟರ್ನ್ಸ್ ಶೇಕಡಾ 2.3ರಷ್ಟು ಮಾತ್ರ. ಇನ್ನು 2025ರಲ್ಲಿ ಶೇಕಡಾ 3ರಷ್ಟು ಕುಸಿತ ಕಂಡಿದೆ. ಜುಲೈ 16ರ ಮಾರುಕಟ್ಟೆ ವ್ಯಾಲ್ಯೂ ಪ್ರಕಾರ ಎಲ್ ಆ್ಯಂಡ್ ಟಿ ಕಂಪನಿ ಮೌಲ್ಯ 4.82 ಲಕ್ಷ ಕೋಟಿ ರೂಪಾಯಿ.