Asianet Suvarna News Asianet Suvarna News

ಕೇರಳದ ಈ ಯುವತಿಗೆ ತ್ಯಾಜ್ಯವೇ ಆದಾಯದ ಮೂಲ;ಬಾಟಲ್ ನಿಂದ ಅಲಂಕಾರಿಕಾ ಸಾಮಗ್ರಿ, ತಿಂಗಳಿಗೆ 8 ಸಾವಿರ ಗಳಿಕೆ

ಕೆಲವೊಮ್ಮೆ ಹವ್ಯಾಸವೇ ಆದಾಯದ ಮೂಲವಾಗುತ್ತದೆ. ಕೇರಳದ ಅಪರ್ಣಾ ಎಂಬ ಯುವತಿಯ ಇಂಥ ಹವ್ಯಾಸವೇ ಇಂದು ಸ್ಟಾರ್ಟ್ ಅಪ್ ಪ್ರಾರಂಭಿಸಲು ಪ್ರೇರಣೆಯಾಗಿದೆ. ತ್ಯಾಜ್ಯ ಬಾಟಲ್ ಗಳಿಂದ ಅಲಂಕಾರಿಕಾ ಸಾಮಗ್ರಿ ಸಿದ್ಧಪಡಿಸಿ ಈಕೆ ತಿಂಗಳಿಗೆ ಸುಮಾರು 8 ಸಾವಿರ ರೂ. ತನಕ ಆದಾಯ ಗಳಿಸುತ್ತಿದ್ದಾರೆ.  
 

Kerala Girl Collects Discarded Bottles From Dirty Lake Upcycles Them Into Decor anu
Author
First Published Aug 14, 2023, 6:07 PM IST | Last Updated Aug 14, 2023, 6:09 PM IST

Business Desk: ಕಸದಿಂದ ರಸ ತೆಗೆಯೋದು ಒಂದು ಕಲೆ. ಅದು ಎಲ್ಲರಿಗೂ ತಿಳಿದಿರೋದಿಲ್ಲ. ಸೂಕ್ಷ್ಮ ಮನಸ್ಸು, ಕಲಾತ್ಮಕ ನೋಟ ಹೊಂದಿರೋರಿಗೆ ಮಾತ್ರ ಈ ಕಲೆ ಸಿದ್ಧಿಸಿರುತ್ತದೆ. ಪ್ರತಿನಿತ್ಯ ನಾವು ಅದೆಷ್ಟು ವಸ್ತುಗಳನ್ನು ಉಪಯೋಗಕ್ಕೆ ಬಾರದು ಎಂದು ಕಸದತೊಟ್ಟಿಗೆ ಎಸೆಯುತ್ತೇವೆ. ಆದರೆ, ಇಂಥ ಉಪಯೋಗಕ್ಕೆ ಬಾರದ ವಸ್ತುಗಳಿಂದಲೇ ಅಲಂಕಾರಿಕಾ ವಸ್ತುಗಳನ್ನು ತಯಾರಿಸುವ ಮೂಲಕ ಆದಾಯ ಜೊತೆಗೆ ಪರಿಸರದ ಸ್ವಚ್ಛತೆಯನ್ನು ಕೂಡ ಕಾಪಾಡುವ ಕೆಲಸವನ್ನು ಕೇರಳದ ಅಪರ್ಣಾ ಎಂಬ 23 ವಯಸ್ಸಿನ ಯುವತಿ ಮಾಡುತ್ತಿದ್ದಾರೆ. ಈ ಕೆಲಸಕ್ಕಾಗಿ ಈಕೆ ತನ್ನ ಮನೆಯಲ್ಲಿ ಒಂದು ಸ್ಟುಡಿಯೋ ಕೂಡ ಮಾಡಿದ್ದಾರೆ. ಅದಕ್ಕೆ 'ಕುಪ್ಪಿ' ಎಂಬ ಹೆಸರಿಟ್ಟಿದ್ದಾರೆ. ಮಲಯಾಳಂನಲ್ಲಿ 'ಕುಪ್ಪಿ' ಅಂದ್ರೆ ಬಾಟಲ್ . ಹೀಗೆ ತ್ಯಾಜ್ಯ ವಸ್ತುಗಳನ್ನು ಮರುನವೀಕರಿಸಿ ಅದರಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಮೂಲಕ ಅಪರ್ಣಾ ಸ್ಟಾರ್ಟ್ ಅಪ್ ಒಂದನ್ನೇ ಪ್ರಾರಂಭಿಸಿದ್ದಾರೆ. ಈ ಉದ್ಯಮದ ಮೂಲಕ ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ. ಅಪರ್ಣಾ ಅವರ ಈ ವಿನೂತನ ಉದ್ಯಮ ಯುವಜನರಿಗೆ ಪ್ರೇರಣಾದಾಯಕವಾಗಿದೆ. 

ಪ್ಲಾಸ್ಟಿಕ್ ಬಾಟಲ್ ಗೆ ಮರುಜೀವ 
ಅಪರ್ಣಾ ಕೇರಳದ ಕೊಲ್ಲಂ ಸಮೀಪದ ಮುನ್ರೊ ತುರುತು ನಿವಾಸಿ. ಈ ಸ್ಥಳ ಪ್ರವಾಸಿ ತಾಣವಾಗಿರುವ ಕಾರಣ ಇಲ್ಲಿನ ರಸ್ತೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಾಟಲ್ ಗಳು ಹಾಗೂ ತ್ಯಾಜ್ಯ  ಬಿದ್ದಿರುತ್ತಿದ್ದವು. 2017ರಲ್ಲಿ ಅಪರ್ಣಾ ಕಾಲೇಜು ಶಿಕ್ಷಣಕ್ಕಾಗಿ ಕೊಲ್ಲಂಗೆ ಹೋಗಿ ಬರುತ್ತಿದ್ದರು. ಈ ಸಮಯದಲ್ಲಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಬಾಟಲ್ ಗಳು ಹಾಗೂ ತ್ಯಾಜ್ಯವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಿದ್ದರು. ಇದು ಅವರ ನಿತ್ಯದ ಕೆಲಸವಾಗಿತ್ತು. ಹೀಗೆ ಅಪರ್ಣಾ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಬಾಟಲ್ ಗಳನ್ನು ಸಂಗ್ರಹಿಸೋದನ್ನು ನೋಡಿ ಸ್ಥಳೀಯರು ಆಕೆಯನ್ನು'ಕುಪ್ಪಿ' ಎಂಬ ಹೆಸರಿನಿಂದ ಕರೆದು ಹಂಗಿಸುತ್ತಿದ್ದರು. ಮಲಯಾಳಂನಲ್ಲಿ 'ಕುಪ್ಪಿ' ಅಂದ್ರೆ ಬಾಟಲ್ ಎಂದರ್ಥ. ಇದರಲ್ಲಿನ ಗಾಜಿನ ಬಾಟಲ್ ಗಳನ್ನು ಅಲಂಕರಿಸಿ ಅವುಗಳನ್ನು ಮರಳಿ ಅದೇ ರಸ್ತೆ ಪಕ್ಕದಲ್ಲಿರಿಸಿ ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಇದರಿಂದ ಜನರಲ್ಲಿ ಪರಿಸರದ ಸ್ವಚ್ಛತೆ ಕುರಿತು ಅರಿವು ಮೂಡಲಿ ಅನ್ನೋದು ಅಪರ್ಣಾ ಅವರ ಉದ್ದೇಶ. ಕ್ರಮೇಣ ಅವರ ಈ ಕೆಲಸ ಸ್ಥಳೀಯ ಜನರಿಗೂ ಇಷ್ಟವಾಗತೊಡಗಿತು.

50ನೇ ವಯಸ್ಸಿನಲ್ಲಿ ವೃತ್ತಿ ಶುರು ಮಾಡಿ ಲಕ್ಷ ಗಳಿಸ್ತಿದ್ದಾರೆ ಗೃಹಿಣಿ!

ಸ್ನೇಹಿತರು, ಶಿಕ್ಷಕರೇ ಗ್ರಾಹಕರು
ಪ್ರಾರಂಭದಲ್ಲಿ ಅಪರ್ಣಾ ಪ್ರಾರಂಭದಲ್ಲಿ ಟೆರ್ರಾಕೋಟ್ ಆಭರಣಗಳನ್ನು ತಯಾರಿಸುತ್ತಿದ್ದರು. ಇದನ್ನು ಕಾಲೇಜಿನಲ್ಲಿ ಆಕೆಯ ಸ್ನೇಹಿತರು ಹಾಗೂ ಶಿಕ್ಷಕರು ಇಷ್ಪಪಟ್ಟು ಖರೀದಿಸಲು ಪ್ರಾರಂಭಿಸಿದರು. ಕ್ರಮೇಣ ಬಾಯಿಂದ ಬಾಯಿಗೆ ಹರಡಿ ಹೆಚ್ಚಿನ ಪ್ರಮಾಣದಲ್ಲಿ ಅವರ ವಸ್ತುಗಳಿಗೆ ಬೇಡಿಕೆ ಸೃಷ್ಟಿಯಾಯಿತು. ಮುಂದೆ ಇದೇ ಹವ್ಯಾಸ ಆಕೆಗೆ ತ್ಯಾಜ್ಯ ವಸ್ತುಗಳಿಂದ ಅಲಂಕಾರಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲು ಪ್ರೇರಣೆಯಾಯ್ತು. ಅಪರ್ಣಾ ಅವರ ಮನೆ ಸಮೀಪದ ಅಷ್ಟಮುಡಿ ಕೆರೆ ಬಳಿ ದೊಡ್ಡ ಪ್ರಮಾಣದಲ್ಲಿ ಬಿದ್ದಿರುತ್ತಿದ್ದ ಗಾಜಿನ ಬಾಟಲ್ ಗಳು ಅವರ ಕೈಯಲ್ಲಿ ಸುಂದರ ರೂಪ ಪಡೆದವು. ನಿಧಾನವಾಗಿ ಅವರ ಈ ಬಾಟಲ್ ಕಲಾಕೃತಿಗಳಿಗೆ ಬೇಡಿಕೆ ಬರಲು ಪ್ರಾರಂಭವಾಯಿತು. ಪರಿಣಾಮ ಅಪರ್ಣಾ ಫೇಸ್ ಬುಕ್ ನಲ್ಲಿ ಪೇಜ್ ವೊಂದನ್ನು ತೆರೆದು ಅದರ ಮೂಲಕ ಮಾರಾಟ ಮಾಡಲು ಪ್ರಾರಂಭಿಸಿದರು.

ಪುತ್ತೂರಿನ ಸಾವಯವ 'ಕೋಕೊ ಪಾಡ್ಸ್' ಚಾಕ್ಲೇಟ್‌ಗೆ ದೇಶಾದ್ಯಂತ ಬೇಡಿಕೆ: ದಂಪತಿಯ ಸ್ಟಾರ್ಟಪ್ ಯಶೋಗಾಥೆ ನೋಡಿ..

ಹವ್ಯಾಸವೇ ಸ್ಟಾರ್ಟ್ ಅಪ್ ಆಯ್ತು
ಅಪರ್ಣಾ ಅವರಿಗೆ ಬಾಟಲ್ ಗಳನ್ನು ರಿಸೈಕಲ್ ಮಾಡುವ ಕಾರ್ಯ ಹವ್ಯಾಸವಾಗಿತ್ತು. ಆದರೆ, ಕ್ರಮೇಣ ಈ ಹವ್ಯಾಸವೇ ಆಕೆಯ ಆದಾಯದ ಮೂಲವಾಯ್ತು. ಸ್ಟಾರ್ಟ್ ಅಪ್ ಸ್ಥಾಪನೆಗೆ ಕಾರಣವಾಯಿತು. ಇಂದು ಆಕೆ ಈ ಸ್ಟಾರ್ಟ್ ಅಪ್ ಮೂಲಕ ತಿಂಗಳಿಗೆ 5ರಿಂದ 8 ಸಾವಿರ ರೂ. ತನಕ ಆದಾಯ ಗಳಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪರ್ಣಾ  ತ್ಯಾಜ್ಯದಿಂದ ಸಿದ್ಧಪಡಿಸಿದ ಅಲಂಕಾರಿಕಾ ವಸ್ತುಗಳ ಫೋಟೋ ಪೋಸ್ಟ್ ಮಾಡುತ್ತಿದ್ದರು. ಇದಕ್ಕೆ ಜನರಿಂದ ಈಗ ಉತ್ತಮ ಬೇಡಿಕೆಗಳು ಬರುತ್ತಿವೆ. 


 

Latest Videos
Follow Us:
Download App:
  • android
  • ios