2019ರಲ್ಲಿ ರೂಪಾಯಿ ಮೌಲ್ಯಕ್ಕೆ ಗರ ಬಡಿಯಲಿದೆ: ಕಾರ್ವಿ ವರದಿಯಲ್ಲೇನಿದೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Feb 2019, 4:31 PM IST
Karvy Annual Report Says Rupee Likely to Depreciate Further in 2019
Highlights

ಎಲ್ಲಾ ಸರಿ ಇದೆ ಅಂತಿದ್ದಂಗೇ ವಕ್ಕರಿಸಿದ ಕಹಿ ಸುದ್ದಿ| 2019ರಲ್ಲಿ ರೂಪಾಯಿ ಮೌಲ್ಯದಲ್ಲಿ ಭಾರೀ ಕುಸಿತ| ಡಾಲರ್ ಎದುರು ಮತ್ತೆ ಮಕಾಡೆ ಮಲಗಲಿರುವ ರೂಪಾಯಿ| ಕಾರ್ವಿ ಸಂಸ್ಥೆಯಿಂದ ವರದಿ ಬಹಿರಂಗ| ವಿತ್ತೀಯ ಕೊರತೆ, ಚಾಲ್ತಿ ಖಾತೆ ಕೊರತೆ ಹೆಚ್ಚಳವೇ ಕುಸಿತಕ್ಕೆ ಕಾರಣ| ಲೋಕಸಭೆ ಚುನಾವಣೆ ಫಲಿತಾಂಶ ಕೂಡ ಬೀರಲಿದೆ ಪರಿಣಾಮ

ನವದೆಹಲಿ(ಫೆ.07): 2018ರಲ್ಲಿ ಭಾರೀ ಕುಸಿತ ಕಂಡು, ವರ್ಷಾಂತ್ಯದ ವೇಳೆ ಡಾಲರ್‌ ಎದುರು ಚೇತರಿಸಿಕೊಂಡಿದ್ದ ರೂಪಾಯಿ ಮೌಲ್ಯ, 2019ರಲ್ಲಿ ಮತ್ತೆ ಭಾರೀ ಕುಸಿತ ಕಾಣಲಿದೆ ಎನ್ನಲಾಗಿದೆ.

ಪ್ರಸಕ್ತ ವರ್ಷದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 78 ರೂ.ವರೆಗೂ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯಾದ ಕಾರ್ವಿ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 

ಕುಸಿತಕ್ಕೆ ಕಾರಣ?:
ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆಯಲ್ಲಿನ ಕೊರತೆ ಹೆಚ್ಚಳವಾಗಿರುವುದು, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಬಹುದು ಎಂದು ಕಾರ್ವಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ಎಲೆಕ್ಷನ್ ಎಫೆಕ್ಟ್:
ಇಷ್ಟೇ ಅಲ್ಲದೇ ಲೋಕಸಭಾ ಚುನಾವಣೆಯ ಫಲಿತಾಂಶ ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕಾರ್ವಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

loader