522 ಕೋಟಿ ಡೀಲ್, ಅಶೋಕ್ ಲೇಲ್ಯಾಂಡ್ ಕಂಪನಿಯಿಂದ 1225 ಹೊಸ ಬಸ್ ಖರೀದಿ ಮಾಡಲಿರುವ KSRTC
ಯೋಜನೆಯ ಭಾಗವಾಗಿ ಕಂಪನಿಯು 210-ಇಂಚಿನ ವೀಲ್ ಬೇಸ್ ವೈಕಿಂಗ್ ಸಂಪೂರ್ಣ-ನಿರ್ಮಿತ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಅಶೋಕ್ ಲೇಲ್ಯಾಂಡ್ ನೀಡಲಿದೆ.
ಮುಂಬೈ (ಜ.18): ರಾಜ್ಯದ ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ಅದರಂತೆ ಕೆಎಸ್‌ಆರ್‌ಟಿಸಿ ಅಶೋಕ್ ಲೆಲ್ಯಾಂಡ್ ಕಂಪನಿಯಿಂದ 1225 ಬಸ್‌ಗಳನ್ನು ಖರೀದಿಸಲು ನಿರ್ಧಾರ ಮಾಡಿದೆ. ಈ ಬಗ್ಗೆ ಜನವರಿ 18 ರಂದು ಅಶೋಕ್ ಲೇಲ್ಯಾಂಡ್ ಕಂಪನಿ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ. ಕೆಎಸ್‌ಆರ್‌ಟಿಸಿಯಿಂದ 522 ಕೋಟಿ ರೂಪಾಯಿ ವೆಚ್ಚದಲ್ಲಿ 1225 ರನ್‌ಗಳ ಆರ್ಡರ್ ಪಡೆದುಕೊಂಡಿದ್ದಾಗಿ ತಿಳಿಸಿದೆ. ಕೆಎಸ್‌ಆರ್‌ಟಿಸಿ ಅಡಿಯಲ್ಲಿ ಬರುವ ವಿಭಾಗಗಳಾದ ಕೆಎಸ್‌ಆರ್‌ಟಿಸಿ (KSRTC), ಎನ್‌ಡಬ್ಲ್ಯುಕೆಆರ್‌ಟಿಸಿ (NWKRTC), ಕೆಕೆಆರ್‌ಟಿಸಿ (KKRTC) ಈ ಹೊಸ ಬಸ್‌ಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದೆ. ಯೋಜನೆಯ ಭಾಗವಾಗಿ ಕಂಪನಿಯು 210-ಇಂಚಿನ ವೀಲ್ ಬೇಸ್ ವೈಕಿಂಗ್ ಸಂಪೂರ್ಣ-ನಿರ್ಮಿತ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಲಿದ್ದೇವೆ ಎಂದಿದೆ.
ಈ ವಾಹನಗಳು AIS 153 ಪ್ರಮಾಣೀಕೃತ ಮತ್ತು BSVI OBD II ಡೀಸೆಲ್ ಆಗಿದ್ದು, ಗ್ರಾಮೀಣ ಕಾರ್ಯಾಚರಣೆಗೆ ಸೂಕ್ತವಾಗಿದೆ. ಇದು ದೃಢವಾದ 147 kW H ಸರಣಿಯ ಎಂಜಿನ್‌ನೊಂದಿಗೆ ಸುಧಾರಿತ iGen6 BSVI ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. "ಎಂಜಿನ್ ಸುರಕ್ಷತೆ, ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ" ಎಂದು ಕಂಪನಿ ಹೇಳಿದೆ. ಏಪ್ರಿಲ್ 2024ರ ವೇಳೆಗೆ ಈ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸಿಗಲಿದೆ ಎಂದು ಮಾಹಿತಿ ನೀಡಿದೆ.
ಕಳೆದ ತಿಂಗಳು, ವಾಣಿಜ್ಯ ವಾಹನ ತಯಾರಕ ಕಂಪನಿ ಬೆಂಗಳೂರಿನಲ್ಲಿ ತನ್ನ ಹೊಸ AL H6 ಡೀಸೆಲ್ - CEV ಹಂತ V ಎಂಜಿನ್ ಅನ್ನು ಅನಾವರಣ ಮಾಡಿತ್ತು. ಬೆಂಗಳೂರಿನಲ್ಲಿ ನಡೆದ EXCON 2023 ರ 12 ನೇ ಅಂತರರಾಷ್ಟ್ರೀಯ ನಿರ್ಮಾಣ ಉಪಕರಣಗಳು ಮತ್ತು ತಂತ್ರಜ್ಞಾನ ವ್ಯಾಪಾರ ಮೇಳದಲ್ಲಿ ಇದು ಸುಮಾರು ಅರ್ಧ ಡಜನ್ ಉತ್ಪನ್ನಗಳನ್ನು ಪ್ರದರ್ಶನ ಮಾಡಿತ್ತು.
ಶಕ್ತಿ ಯೋಜನೆಯಿಂದಾಗಿ ಬಸ್ ಸಿಗದೇ ವಿದ್ಯಾರ್ಥಿಗಳ ಪರದಾಟ, ಜೀವ ಭಯಬಿಟ್ಟು ಗೂಡ್ಸ್ ವಾಹನದಲ್ಲಿ ಓಡಾಟ!
ಕೆಎಸ್‌ಅರ್‌ಟಿಸಿಯಿಂದ ಆರ್ಡರ್ ಪಡೆದುಕೊಂಡ ಬೆನ್ನಲ್ಲಿಯೇ ಗುರುವಾರ ಅಶೋಕ್ ಲೇಲ್ಯಾಂಡ್ ಕಂಪನಿಯ ಷೇರುಗಳು ಭರ್ಜರಿಯಾಗಿ ಮುನ್ನಡೆದಿವೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ 171.40 ರೂಪಾಯಿಗೆ ಅಶೋಕ್ ಲೇಲ್ಯಾಂಡ್ ಷೇರು ನಿಂತಿತ್ತು. ಇಂದು 170.80 ರೂಪಾಯಿಯೊಂದಿಗೆ ಆರಂಭವಾದ ಅಶೋಕ್ ಲೇಲ್ಯಾಂಡ್ ಕಂಪನಿಯ ಷೇರುಗಳು, ಮಾರುಕಟ್ಟೆಯ ಕುಸಿತದ ನಡುವೆಯೂ 173.65 ರೂಪಾಯಿಗೆ ವಹಿವಾಟು ಮುಗಿಸಿದೆ.
ಉಚಿತ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಫೈಟಿಂಗ್: ಕಾಂಗ್ರೆಸ್ ಸರ್ಕಾರವೇ ಕಾರಣವೆಂದ ಪ್ರಯಾಣಿಕರು!