ಉಚಿತ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಫೈಟಿಂಗ್: ಕಾಂಗ್ರೆಸ್‌ ಸರ್ಕಾರವೇ ಕಾರಣವೆಂದ ಪ್ರಯಾಣಿಕರು!

ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಬಸ್‌ ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಮತ್ತೊಂದು ವೀಡಿಯೋ ವೈರಲ್ ಆಗಿದೆ.

Congress Guarantee Shakti Scheme Free bus travelling women fighting for seats sat

ಬೆಂಗಳೂರು (ಜ.01): ಕರ್ನಾಟಕದಲ್ಲಿ ಕಳೆದ 6 ತಿಂಗಳ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ಉಚಿತ ರಾಜ್ಯ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಈಗ ತೆಲಂಗಾಣದಲ್ಲಿಯೂ ಗ್ಯಾರಂಟಿ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಅಲ್ಲಿಯೂ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಿದೆ. ಇದರ ಬೆನ್ನಲ್ಲಿಯೇ ಕರ್ನಾಟಕದ ಮಾದರಿಯಲ್ಲಿಯೇ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಘೊಷಣೆ ಮಾಡಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿ ಆಗಿವೆ. ಇನ್ನು  ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಘೋಷಣೆ ಮಾಡಿದಂತೆ ಅಧಿಕಾರಕ್ಕೆ ಬಂದ ಕುಡಲೇ ಒಂದೊಂದೇ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿವೆ. ಅದೇ ರೀತಿ ಕರ್ನಾಟಕದ ಮಾದರಿಯಲ್ಲಿಯೇ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದ ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ, ಅಲ್ಲಿಯೂ ಕೂಡ ಬಸ್‌ನಲ್ಲಿ ಉಚಿತ ಪ್ರಯಾಣಕ್ಕಾಗಿ ಮಹಿಳೆಯರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಳ್ಳುವ ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತಿವೆ. ಇನ್ನು ಮಹಿಳೆಯರ ಹೊಡೆದಾಟಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಪ್ರಯಾಣಿಕರು ಬೈದಿದ್ದಾರೆ.

ಸ್ಕೂಲ್‌ ಬಸ್‌ ಡ್ರೈವರ್‌ ಅಂಕಲ್‌ ಪ್ರೇಮಪಾಶಕ್ಕೆ ಬಲಿಯಾದ 8ನೇ ಕ್ಲಾಸ್‌ ಹುಡುಗಿ!

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೆ ತಂದಿದ್ದರೂ ಅದಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿಲ್ಲ. ಇನ್ನು ಕೆಲವು ಪ್ರಮುಖ ನಗರಗಳಿಗೆ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯರು ಹೆಚ್ಚಾಗಿ ಸಂಚಾರ ಮಾಡುತ್ತಿದ್ದರೂ, ಹೆಚ್ಚುವರಿ ಬಸ್‌ಗಳ ಸೇವೆಯನ್ನು ನೀಡುತ್ತಿಲ್ಲ. ಆದ್ದರಿಂದ, ಇರುವ ಬಸ್‌ಗಳಲ್ಲಿಯೇ ನೂಕು ನುಗ್ಗಲಿನಲ್ಲಿ ಪ್ರಯಾಣ ಮಾಡಬೇಕಾದ ಹಿನ್ನೆಲೆಯಲ್ಲಿ ಮಹಿಳೆಳೆಯರು ಬಸ್‌ನಲ್ಲಿ ಸೀಟಿಗಾಗಿ ಹೊಡೆದಾಡುತ್ತಿರುವ ಅಂಶಗಳು ಕಂಡುಬರುತ್ತಿವೆ ಎಂದು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಧುಕುಮಾರ ಎನ್ನುವವರೊಬ್ಬರು ತೆಲಂಗಾಣದಲ್ಲಿ ಉಚಿತ ಪ್ರಯಾಣದ ಎಫೆಕ್ಟ್‌ನಿಂದಾಗಿ ಮಹಿಳೆಯರು ಸೀಟಿಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಪೋಸ್ಟ್‌ ಮಾಡಿಕೊಂಡಿದ್ದಾರೆ. ಅದರಲ್ಲಿ 'ಉಚಿತ ಬಸ್ ಪ್ರಯಾಣದ ಪರಿಣಾಮ, ತೆಲಂಗಾಣದಲ್ಲಿಯೂ ಶುರುವಾಯಿತು ಬಸ್ಸುಗಳಲ್ಲಿ ಹೊಡೆದಾಟ' ಎಂದು ಬರೆದುಕೊಂಡಿ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ಕೇವಲ ನಾಲ್ಕು ಗಂಟೆಗಳಲ್ಲಿ 13 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದು, 110ಕ್ಕೂ ಹೆಚ್ಚು ಜನರು ರೀ ಪೋಸ್ಟ್‌ ಮಾಡಿಕೊಂಡಿದ್ದಾರೆ. ಹಲವರು ವಿವಿಧ ರೀತಿಯ ಕಮೆಂಟ್‌ಗಳನ್ನು ಮಾಡಿದ್ದಾರೆ.

ರಾಮ ಜನ್ಮಭೂಮಿಗಾಗಿ 30 ವರ್ಷದ ಹಿಂದೆ ಹೋರಾಡಿದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿರುವ ಕಾಂಗ್ರೆಸ್‌ ಸರ್ಕಾರ!

ಮಹದೇವ ಎನ್ನುವವರು 'ಶಕ್ತಿ ಯೋಜನೆ ಬದಲಾಗಿ ಇದರ ಆದಾಯ ವನ್ನ ಆರೋಗ್ಯ ಕ್ಕೆ ಹಾಕಿ ಖಾಸಗಿ ನಲ್ಲೂ ಮಹಿಳೆಯರು ಮತ್ತು ಮಕ್ಕಳಿಗೂ 0- 10 ಲಕ್ಷ ರೂ ತನಕ  ಉಚಿತ ಚಿಕತ್ಸೆ ಕೊಟ್ಟಿದ್ದರೆ ಸಾರಿಗೆ ಇಲಾಖೆ ಬದಲಾಗಿ ಆರೋಗ್ಯ ಇಲಾಖೆ ಅಭಿರುದ್ದಿ ಆಗಿ ಬಡವರಿಗೆ  ಉಚಿತ ಚಿಕತ್ಸೆ ಕೊಡಬೇಕು ಅನಿಸುತ್ತೆ. ಅಥವಾ ಶೇ.50 ರಿಯಾತಿ ಬಸ್ ನಲ್ಲಿ ಕೊಡಲಿ ಅನಿಸುತ್ತೆ ಸರ್' ಎಂದು ತಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಹರ್ಷವರ್ಧನ ಎನ್ನುವವರು 'ಮೊದಲು ಮಚ್ಚು ಲಾಂಗ್ ಗಳು ಹೆಚ್ಚಾಗಿ ಉಪಯೋಗಿಸೋದೇ ಆ ರಾಜ್ಯದಲ್ಲಿ. ಅಂಥದ್ದರಲ್ಲಿ, ಇನ್ನು ಮುಂದೆ ಹೆಣ್ಣು ಮಕ್ಕಳು ಅದನ್ನು ಹಿಡಿದುಕೊಂಡು ಓಡಾಡಿದರೂ ಆಶ್ಚರ್ಯವಿಲ್ಲ! ಎಂದು ಕಮೆಂಟ್ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios