‘ಸಮಗ್ರ ಅಭಿವೃದ್ಧಿ’ಯಲ್ಲಿ ಕರ್ನಾಟಕ ದೇಶಕ್ಕೇ ನಂ.2| ಕಳೆದ ವರ್ಷ 6ನೇ ಸ್ಥಾನದಲ್ಲಿತ್ತು ರಾಜ್ಯ, ಗುಜರಾತ್ ನಂ.1| ಜಿಡಿಪಿಯಲ್ಲಿ ‘ಬಿಮಾರು’ ಬಿಹಾರ ದೇಶಕ್ಕೇ ಟಾಪ್
ನವದೆಹಲಿ[ಜ.23]: ಆರ್ಥಿಕ ಪ್ರಗತಿ, ಹಣದುಬ್ಬರ ಹಾಗೂ ವಿತ್ತೀಯ ಕೊರತೆ ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟುಸುಧಾರಣೆ ಕಂಡಿದ್ದು, ದೇಶದಲ್ಲೇ ನಂ.2 ಸ್ಥಾನಕ್ಕೇರಿದೆ ಎಂದು ರೇಟಿಂಗ್ ಏಜೆನ್ಸಿಯಾಗಿರುವ ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.
2016- 2017ನೇ ಹಣಕಾಸು ವರ್ಷದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿತ್ತು. ಅದು 2017-18ನೇ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. ಗುಜರಾತ್ ನಂ.1 ಸ್ಥಾನಕ್ಕೆ ಜಿಗಿದಿದೆ ಎಂದು ವರದಿ ತಿಳಿಸಿದೆ. ಹಿಂದಿನ ವರ್ಷ ಛತ್ತೀಸ್‌ಗಢ, ಒಡಿಶಾ ಟಾಪರ್‌ಗಳಾಗಿದ್ದವು.
ಇದೇ ವೇಳೆ, ‘ಬಿಮಾರು’ ರಾಜ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಬಿಹಾರ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದರದಲ್ಲಿ ದೇಶದಲ್ಲೇ ಪ್ರಥಮ ರಾರಯಂಕ್ ಪಡೆದಿದೆ. ದೇಶದ ಸರಾಸರಿ ಜಿಡಿಪಿ ಶೇ.6.7ರಷ್ಟಿದ್ದರೂ, ಬಿಹಾರ ಶೇ.11.3ರ ದರದಲ್ಲಿ ಪ್ರಗತಿ ಹೊಂದುತ್ತಿದೆ. ಶೇ.11.2ರ ಜಿಡಿಪಿ ದರದೊಂದಿಗೆ ಆಂಧ್ರ 2ನೇ ಸ್ಥಾನದಲ್ಲಿದ್ದರೆ, ಶೇ.11.1ರ ದರದೊಂದಿಗೆ ಗುಜರಾತ್ 3ನೇ ಸ್ಥಾನದಲ್ಲಿದೆ. ಶೇ.9.3 ಜಿಡಿಪಿ ದರ ಸಾಧಿಸಿ ಕರ್ನಾಟಕ 5ನೇ ಸ್ಥಾನ ಗಳಿಸಿದೆ ಎಂದು ಕ್ರಿಸಿಲ್ ವರದಿ ಹೇಳುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 23, 2019, 11:37 AM IST