ರಾಜ್ಯಕ್ಕೆ 4314 ಕೋಟಿ ರು. ಜಿಎಸ್‌ಟಿ ಪರಿಹಾರ ಬಿಡುಗಡೆ| ಕೇಂದ್ರದಿಂದ 3 ತಿಂಗಳ ಬಾಕಿ ನೀಡಿಕೆ|  ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಕೊಂಚ ನಿರಾಳ

ಬೆಂಗಳೂರು(ಜೂ.06): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯನ್ವಯ ಆದಾಯ ನಷ್ಟಪರಿಹಾರವಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೂರು ತಿಂಗಳ ಬಾಕಿ ಮೊತ್ತ 4,314 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿದ್ದ ರಾಜ್ಯಕ್ಕೆ ಕೊಂಚ ನಿರಾಳತೆ ಲಭಿಸಿದೆ.

2019ರ ಡಿಸೆಂಬರ್‌ ತಿಂಗಳಿನಿಂದ 2020ರ ಫೆಬ್ರವರಿ ತಿಂಗಳವರೆಗಿನ ಆದಾಯ ನಷ್ಟದ ಪರಿಹಾರವನ್ನು ನೀಡಿದೆ. ಮೂರು ತಿಂಗಳ ಅವಧಿಯಲ್ಲಿ ರಾಜ್ಯ ಎದುರಿಸಿದ ಆದಾಯ ನಷ್ಟದ ಪರಿಹಾರವನ್ನು ಒದಗಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಟಣೆ!

‘2017ರ ಜು.1 ರಂದು ಜಾರಿಯಾದ ಜಿಎಸ್‌ಟಿ ಕಾಯ್ದೆಯಂತೆ ಐದು ವರ್ಷಗಳ ಕಾಲ ಕೇಂದ್ರವು ರಾಜ್ಯಗಳಿಗೆ ಆದಾಯ ನಷ್ಟದ ಪರಿಹಾರವನ್ನು ನೀಡಲಿದೆ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಎದುರಿಸುತ್ತಿರುವ ರಾಜ್ಯಕ್ಕೆ ಇದು ನೆರವಾಗಲಿದೆ. ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾದ ಒಟ್ಟು ಪರಿಹಾರಕ್ಕಿಂತ ಕಡಿಮೆ ಇದ್ದರೆ ನಂತರ ಹಂತದಲ್ಲಿ ರಾಜ್ಯದ ಆದಾಯದ ಕಾರ್ಯಕ್ಷಮತೆಯ ಸುಧಾರಣೆಗೆ ಇದೇ ರೀತಿಯ ವಿಧಾನ ಅನುಸರಿಸಲಾಗುತ್ತದೆ’ ಎಂದು ಕೇಂದ್ರ ಸರ್ಕಾರವು ಹೇಳಿದೆ.

ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!

ಇನ್ನೂ 2 ತಿಂಗಳ ಬಾಕಿ ಬರಬೇಕು:

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಗೃಹ ಸಚಿವರೂ ಆಗಿರುವ ಜಿಎಸ್‌ಟಿ ಸಮಿತಿಯ ಸದಸ್ಯ ಬಸವರಾಜ ಬೊಮ್ಮಾಯಿ, ಕಳೆದ ಫೆಬ್ರವರಿ ತಿಂಗಳವರೆಗಿನ ಮೂರು ತಿಂಗಳ ಅವಧಿಯ ಜಿಎಸ್‌ಟಿ ಬಾಕಿ ಮೊತ್ತ ಬಿಡುಗಡೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಳಿ ಮನವಿ ಮಾಡಿದ್ದರು. ಮಾಚ್‌ರ್‍ ಮತ್ತು ಏಪ್ರಿಲ್‌ ತಿಂಗಳ ಜಿಎಸ್‌ಟಿ ಮೊತ್ತ 1800 ಕೋಟಿ ರು. ಬರಬೇಕಾಗಿದೆ. ಅದು ಮುಂದಿನ ಜುಲೈ ತಿಂಗಳಲ್ಲಿ ಬರಬಹುದು ಎಂದು ತಿಳಿಸಿದ್ದಾರೆ.