RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಟಣೆ!
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಪಾತಾಳಕ್ಕೆ ಕುಸಿದಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆತ್ತಲು RBI ರೆಪೋ ದರವನ್ನು 40 BPSನಿಂದ 4.00% ಹಾಗೂ ರಿವರ್ಸ್ ರೆಪೊ ದರವನ್ನು 40 BPSನಿಂದ 3.35% ಕ್ಕೆ ಇಳಿಸಿದೆ. RBI ನಿರ್ಧಾರವನ್ನು ಜೆಕೆ ಟೈಯರ್ ಹಾಗೂ ಇಂಡಸ್ಟ್ರಿ ಲಿಮಿಡೆಟ್ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಘುಪತಿ ಸಿಂಘಾನಿಯ ಸ್ವಾಗತಿಸಿದ್ದಾರೆ.
ನವದೆಹಲಿ(ಮೇ.22) ಉತ್ಪಾದನಾ ವಲಯವನ್ನ ಆವರಿಸಿರುವ ಕೊರೋನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಲ ನೀಡಲು ಪ್ರೋತ್ಸಾಹಿಸಬೇಕು. ಸಾಲ ಮರುಪಾವತಿಯನ್ನು ಮೂರು ತಿಂಗಳವರೆಗೆ ವಿಸ್ತರಿಸುವುದರೊಂದಿಗೆ ದರ ಕಡಿತವು ಉದ್ಯಮಕ್ಕೆ ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ. ಇವುಗಳು ಆರ್‌ಬಿಐನ ಸ್ವಾಗತಾರ್ಹ ಕ್ರಮಗಳಾಗಿದ್ದರೂ, ಕಾರ್ಪೊರೇಟ್‌ಗಳಿಗೆ ಕಡಿಮೆ ಬಡ್ಡಿದರದ ಮೂಲಕ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ನೀಡುವುದು ದ್ರವ್ಯತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು ನೆರವಾಗುತ್ತದೆ ಎಂದು ರಘಪಕಿ ಸಿಂಘಾನಿಯ ಹೇಳಿದ್ದಾರೆ.
ಇದರೊಂದಿಗೆ ಉದ್ಯಮದ ನಿರ್ದಿಷ್ಟ ಕ್ರಮಗಳ ಮೂಲಕ ಬೇಡಿಕೆಯನ್ನು ಉತ್ಪಾದಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ನಿರ್ಣಾಯಕ. ಪ್ರಮುಖವಾಗಿ ಕೊರೋನಾ ವೈರಸ್‌ಗೂ ಮೊದಲೇ ಸಂಕಷ್ಟದಲ್ಲಿ ಸಿಲುಕಿದ್ದ ಆಟೋಮೊಬೈಲ್ ವಲಯಕ್ಕೆ ಉತ್ತೇಜನ ಅವಶ್ಯಕ ಎಂದಿದ್ದಾರೆ. ಇಷ್ಟೇ ಅಲ್ಲ ಪ್ರಮುಖ ಸಲಹೆಯನ್ನೂ ನೀಡಿದ್ದಾರೆ.
3 ವರ್ಷಗಳ ಅವಧಿಗೆ GST ದರಗಳ ಕಡಿತ. ಸದ್ಯ ಆಗಿರುವ ಆದಾಯ ನಷ್ಟವು ಉತ್ಪತ್ತಿಯಾಗುವ ಹೆಚ್ಚುವರಿ ಬೇಡಿಕೆಯಿಂದ ಸರಿದೂಗಿಸಲ್ಪಡುತ್ತದೆ.
ಹಳೆಯ ವಾಹನಗಳ ಗುಜುರಿಗೆ ಹಾಕುವ ಸ್ಕ್ರಾಪ್ ಪಾಲಿಸಿಯನ್ನು ಶೀಘ್ರದಲ್ಲೇ ಸ್ಕ್ರ್ಯಾಪೇಜ್ ನೀತಿಯನ್ನು ಜಾರಿಗೆ ತರಬೇಕು
ಗ್ರಾಹಕನಿಗೆ ವಾಹನ ಖರೀದಿಗೆ ಸುಲಭ ಹಣಕಾಸು ಸೌಲಭ್ಯ ನೋಡಿಕೊಳ್ಳಬೇಕು
ಈ ಕ್ರಮಗಳಳು ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಆರ್ಥಿಕತೆಯನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ ಎಂದು ರಘುಪತಿ ಸಿಂಘಾನಿಯಾ ಹೇಳಿದ್ದಾರೆ.