ಬೆಂಗಳೂರು [ಆ.09]:  ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದರೂ ಪೆಟ್ರೋಲ್‌-ಡೀಸೆಲ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಕಾರಣವಿಲ್ಲ ಎಂದು ಅಖಿಲ ಕರ್ನಾಟಕ ಪೆಟ್ರೋಲ್‌ ಡೀಲ​ರ್ಸ್ ಅಸೋಸಿಯೇಷನ್‌ ತಿಳಿಸಿದೆ.

ಮಳೆಯ ಕಾರಣದಿಂದ ಮೂರು ದಿನಗಳ ಕಾಲ ಪೆಟ್ರೋಲ್‌-ಡೀಸೆಲ್‌ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಮಳೆ ಬೀಳುತ್ತಿದ್ದರೂ ಪೆಟ್ರೋಲ್‌-ಡೀಸೆಲ್‌ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಂದಿನಂತೆ ಲೋಡ್‌ಗಳು ಬರುತ್ತಿವೆ. ಒಮ್ಮೆ ಲೋಡ್‌ ಬಂದರೆ ಮೂರ್ನಾಲ್ಕು ದಿನ ದಾಸ್ತಾನು ಇರುತ್ತದೆ. ನೆರೆ ಪ್ರದೇಶಗಳಲ್ಲಿ ಪೆಟ್ರೋಲ್‌ ಬಂಕ್‌ಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದ್ದರೆ ತಾತ್ಕಾಲಿಕವಾಗಿ ಪೂರೈಕೆ ಸ್ಥಗಿತಗೊಳ್ಳಲಿದೆ. ಆದರೆ, ಇದುವರೆಗೂ ಅಂತಹ ಘಟನೆಗಳು ಗಮನಕ್ಕೆ ಬಂದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಎಂದು ಅಸೋಸಿಯೇಷನ್‌ನ ಕಾರ್ಯದರ್ಶಿ ಎ.ತಾರಾನಾಥ ತಿಳಿಸಿದ್ದಾರೆ.