Asianet Suvarna News Asianet Suvarna News

Karnataka ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿ ಭತ್ಯೆ ಹೆಚ್ಚಳ!

* ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್..

* ಶೇಕಡಾ 3 ರಷ್ಟು DA ಹೆಚ್ಚಳ ಮಾಡಿದ ರಾಜ್ಯ ಸರ್ಕಾರ..

* ಜುಲೈ 1 ರಿಂದ ಪೂರ್ವಾನ್ವಯವಾಗುಂತೆ ಆದೇಶ

Karnataka Dearness Allowance hike for State govt employees effective from July 1 pod
Author
Bangalore, First Published Oct 27, 2021, 3:19 PM IST

ಬೆಂಗಳೂರು(ಅ.27): ಕರ್ನಾಟಕ ಸರ್ಕಾರವು(Karnataka Govt) ತನ್ನ ನೌಕರರಿಗೆ ದೀಪಾವಳಿ(Diwali) ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ನೀಡಿದೆ. ಹೌದು ಸರ್ಕಾರ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಆದೇಶ ಹೊರಡಿಸಿದೆ. ಶೇ. 21.50 ರಿಂದ ಶೇ. 24.50 ಕ್ಕೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ(Dearness Allowance) ನಿವೃತ್ತ ಸರ್ಕಾರಿ ನೌಕರರಿಗೂ ಅನುಕೂಲವಾಗಲಿದೆ. ಜುಲೈ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಆದೇಶ ಹೊರಡಿಸಲಾಗಿದೆ.

ಮೂರು ತಿಂಗಳ ಹಿಂದಷ್ಟೇ, ಜುಲೈ(July) ತಿಂಗಳಲ್ಲಿ ರಾಜ್ಯ ಸರ್ಕಾರ ತನ್ನ ನೌಕರರಿಗೆ ಶೇ 11.15ರಿಂದ 21.50ಕ್ಕೆ ತುಟ್ಟಿ ಭತ್ಯೆ ಹೆಚ್ಚಿಸಿತ್ತು ಎಂಬುವುದು ಉಲ್ಲೇಖನೀಯ. ಇನ್ನು ಸದ್ಯ ಡಿಎ ಹೆಚ್ಚಳದಿಂದ 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂಬುವುದು ಉಲ್ಲೇಖನೀಯ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಜುಲೈ 1, 2021ರಿಂದಲೇ ಇದು ಅನ್ವಯವಾಗುವಂತೆ,  ಪಿಂಚಣಿದಾರರಿಗೆ ಡಿಯರ್‌ನೆಸ್‌ ರಿಲೀಫ್‌ (ಡಿಆರ್‌) ಬಿಡುಗಡೆಗೂ ಅನುಮೋದನೆ ನೀಡಿದೆ. ತುಟ್ಟಿ ಭತ್ಯೆ ಮತ್ತು ಡಿಆರ್‌ ಏರಿಕೆಯ ಘೋಷಣೆಯಿಂದ ಕೇಂದ್ರ ಸರ್ಕಾರದ 47.14 ಲಕ್ಷ ಉದ್ಯೋಗಿಗಳು ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ತುಟ್ಟಿ ಭತ್ಯೆ ಹಾಗೂ ಡಿಆರ್‌ ಹೆಚ್ಚಳದಿಂದ ಸರಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 9,488.70 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ಸೆಪ್ಟೆಂಬರ್‌ನಲ್ಲಿ, ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ವೆಚ್ಚ ಇಲಾಖೆಯು, ನಿವೃತ್ತ ಕೇಂದ್ರ ಸರ್ಕಾರಿ ನೌಕರರು ನಗದು ಪಾವತಿ ಮತ್ತು ಗ್ರಾಚ್ಯುಟಿ ಪಡೆಯಲಿದ್ದಾರೆ ಎಂದು ತಿಳಿಸಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದ ಅನುರಾಗ್‌ ಠಾಕೂರ್‌!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರ ಶೇ. 3ರಷ್ಟು  ತುಟ್ಟಿ ಭತ್ಯೆ (Dearness allowance) ಹೆಚ್ಚಳಕ್ಕೆ ಕೇಂದ್ರ ಸಂಪುಟ ಗ್ರೀನ್‌ ಸಿಗ್ನಲ್ ನೀಡಿತ್ತು. ಈ ಹೆಚ್ಚಳದ ನಂತರ ಒಟ್ಟು ತುಟ್ಟಿ ಭತ್ಯೆ 31% ಆಗಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರದ ಹೆಚ್ಚಳದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು  68.62 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಇದರಿಂದ ಕೇಂದ್ರದ ಖಜಾನೆ ಮೇಲೆ ಪ್ರತಿ ವರ್ಷ 34,400 ಕೋಟಿ ಹೊರೆಯಾಗಲಿದೆ. ಜುಲೈ 1, 2021 ರಿಂದ ಈ ಭತ್ಯೆ ಅನ್ವಯಿಸುತ್ತದೆ ಎಂದು ಕೇಂದ್ರ ಮಂತ್ರಿ ಅನುರಾಗ್‌ ಠಾಕೂರ್‌ (Anuragh Thakur) ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. 

ಕೊರೋನಾ ವೈರಸ್‌ (Coronavirus) ಕಾರಣದಿಂದಾಗಿ ಕೇಂದ್ರ ಸರ್ಕಾರಿ ನೌಕರರು (Central govt employees) ಮತ್ತು ಪಿಂಚಣಿದಾರರು  ಜನವರಿ 1 2020, ಜುಲೈ 1 2020 ಮತ್ತು ಜನವರಿ 1 2021 ಒಟ್ಟು ಮೂರು ಕಂತಿನ ತುಟ್ಟಿಭತ್ಯೆ (ಡಿಎ) ಹಾಗೂ ತುಟ್ಟಿ ಭತ್ಯೆ ಪರಿಹಾರ (ಡಿಆರ್‌) ಮೊತ್ತವನ್ನು ತಡೆಹಿಡಿಯಲಾಗಿತ್ತು. ಒಂದು ವರ್ಷದ ನಂತರ ಜುಲೈ ತಿಂಗಳನಲ್ಲಿ  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಯರ್ನೆಸ್ ಅಲಾವೆನ್ಸ (DA) ಮತ್ತು ಡಿಯರ್ನೆಸ್ ರಿಲೀಫ್ (DR) ಅನ್ನು ಶೇ .17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರವು ಅನುಮೋದನೆ ನೀಡಿತ್ತು.  

Follow Us:
Download App:
  • android
  • ios