ಬಿಯರ್ ರೇಟ್ ಮತ್ತೆ ಹೆಚ್ಚಿಸಲಿದೆ ಸರ್ಕಾರ: ವರ್ಷಕ್ಕೆ ಎಷ್ಟುಬಾರಿ ಬೆಲೆ ಏರಿಸ್ತೀರಾ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ 2ನೇ ಬಾರಿಗೆ ಮದ್ಯದ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಈಗ ಬಿಯರ್ ದರ ಹೆಚ್ಚಳಕ್ಕೆ ಮುಂದಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಬೆಂಗಳೂರು (ಜ.23): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಗ್ಯಾರಂಟಿಗಳನ್ನು ಜಾರಿಗೆ ತಂದ ಬೆನ್ನಲ್ಲಿಯೇ ಆದಾಯದ ಮೂಲಕ್ಕಾಗಿ ಪರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶೇ.20ರಷ್ಟು ಮದ್ಯದ ಸುಂಕ ಹೆಚ್ಚಳ ಮಾಡಿದ್ದ ಸರ್ಕಾರ ಈಗ ಪುನಃ 6 ತಿಂಗಳ ಅಂತದಲ್ಲಿ ಮತ್ತೊಮ್ಮೆ ಮದ್ಯದ ದರ ಹೆಚ್ಚಳಕ್ಕೆ ಮುಂದಾಗಿದೆ. ಅದರಲ್ಲಿಯೂ ಮುಖ್ಯವಾಗಿ ಬಿಯರ್ ದರವನ್ನು ಮಾತ್ರ ಹೆಚ್ಚಳ ಮಾಡಲು ಚಿಂತನೆಯನ್ನು ಮಾಡಿದೆ.
ಹೌದು, ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ 2ನೇ ಬಾರಿಗೆ ಮದ್ಯದ ದರವನ್ನು ಹೆಚ್ಚಳ ಮಾಡುವ ಮೂಲಕ ಮತ್ತೊಮ್ಮೆ ಮದ್ಯ ಪ್ರಿಯರಿಗೆ ಶಾಕ್ ನೀಡಲು ಮುಂದಾಗಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನ ಶೇಕಡ 10 ಪರ್ಸೆಂಟ್ ಹೆಚ್ಚಿಸಲು ಚಿಂತನೆ ಮಾಡಲಾಗಿದೆ. ಒಂದು ಬಿಯರ್ ಬಾಟಲಿಯ ಮೇಲೆ 8 ರಿಂದ 10 ರೂ. ದರ ಏರಿಕೆಗೆ ಅಬಕಾರಿ ಇಲಾಖೆ ಪ್ಲ್ಯಾನ್ ಮಾಡಿದೆ. ಇದೇ ತಿಂಗಳ ಆರಂಭದಲ್ಲಿ ಕೆಲವು ಮದ್ಯದ ಕಂಪನಿಗಳು ಕೆಲವು ಮದ್ಯದ ದರಗಳನ್ನು ಏರಿಕೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬಿಯರ್ ದರ ಏರಿಕೆ ಮಾಡಲು ಮುಂದಾಗಿದೆ.
ವಿಸ್ಕಿ ಮಾರಾಟದಲ್ಲೂ 'ಆತ್ಮನಿರ್ಭರ', ಜಾಗತಿಕ ದೈತ್ಯ ವಿಸ್ಕಿ ಕಂಪನಿಗಳ ಮೀರಿಸಿದ ಮೇಡ್ ಇನ್ ಇಂಡಿಯಾ ಲಿಕ್ಕರ್ಸ್!
ಆದ್ದರಿಂದ ಈಗ ಸದ್ಯ ಬಿಯರ್ ದರ ಏರಿಕೆಗೆ ಅಬಕಾರಿ ಇಲಾಖೆಯಿಂದಲೇ ಚಿಂತನೆ ಮಾಡಿದೆ. ಅಬಕಾರಿ ಇಲಾಖೆಯಿಂದ ಶೇ.10 ರಷ್ಟು ತೆರಿಗೆ ಹೆಚ್ಚಿಸಲಾಗುತ್ತಿದೆ. ಪ್ರತಿ ಬಿಯರ್ ಬಾಟಲಿನ ಮೇಲೆ 8ರಿಂದ 10 ರೂ ದರ ಏರಿಕೆ ಸಾಧ್ಯತೆಯಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರಿಕ್ಕೆ ಬಂದು ಒಂದು ವರ್ಷದೊಳಗೆ ಎರಡನೇ ಬಾರಿಗೆ ದರ ಏರಿಕೆಗೆ ಮುಮದಾಗಿದೆ. ಸರ್ಕಾರ ಅಧಿಕಾರಕ್ಕೆ 6 ತಿಂಗಳಲ್ಲಿ ಎರಡನೇ ಬಾರಿಗೆ ಅಬಕಾರಿ ಸುಂಕ ಹೆಚ್ಚಳಕ್ಕೆ ಚಿಂತನೆ ಮಾಡಲಾಗಿದೆ.
ಜನವರಿ ಕೊನೆಯ ವಾರ ಅಥವಾ ಫೆಬ್ರವರಿಯಲ್ಲಿ ಹೊಸ ನಿಯಮ ಜಾರಿ ಸಾಧ್ಯತೆಯಿದೆ. 650 ಮಿ.ಲೀ ಪ್ರತಿ ಬಾಟಲಿಗೆ 8 ರಿಂದ 10 ರೂ ದರ ಏರಿಸಲಾಗುತ್ತದೆ. ಸದ್ಯ ಈ ಬಗ್ಗೆ ಅಬಕಾರಿ ಇಲಾಖೆಯಿಂದ ಆಕ್ಷೇಪಣೆ ಸಲ್ಲಿಕೆಗೆ 7 ದಿನ ಅವಕಾಶ ನೀಡಿಲಾಗಿದೆ. ಸಾರ್ವಜನಿಕರು ಹಣಕಾಸು ಇಲಾಖೆಯ ಮುಖ್ಯಕಾರ್ಯದರ್ಶಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದಾಗಿದೆ.
ಹೊಸ ವರ್ಷಾಚರಣೆ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್..!
ಜನವರಿ ಆರಂಭದಲ್ಲಿ ದರ ಹೆಚ್ಚಳ: ಬೆಂಗಳೂರು (ಜ.2): ಜನವರಿ ತಿಂಗಳ ಆರಂಭದಲ್ಲಿಯೇ ಬಡವರ ನೆಚ್ಚಿನ ಕೆಲ ಬ್ರಾಂಡ್ ಗಳ ದರ ಏರಿಕೆ ಮಾಡಲಾಗಿದ್ದು, ಮದ್ಯ ಮತ್ತಷ್ಟು ತುಟ್ಟಿಯಾಗಲಿದೆ. ಉತ್ವಾದನ ಕಂಪನಿಗಳು ಕ್ವಾಟರ್ ಮದ್ಯಕ್ಕೆ 20 ರಿಂದ 30 ರೂಪಾಯಿ ಏರಿಸಿದ್ದವು. ರಾಜ್ಯಾದ್ಯಂತ ಓಟಿ, ಬಿಪಿ, 8 ಪಿಎಂ ದರ ಏಕಾಏಕಿ ಹೆಚ್ಚಳ. ಶೇ. 20 ರಷ್ಟು ದರ ಹೆಚ್ಚಳದಿಂದಾಗಿ ಶಾಕ್ ಆದ ಮದ್ಯ ಪ್ರಿಯರು. ಬೆಲೆ ಏರಿಕೆ ಕುರಿತಂತೆ ಈಗಾಗಲೇ ಬಾರ್ ಮಾಲೀಕರಿಗೆ ಸಂದೇಶ ಕಳುಹಿಸಿದ್ದವು. ಮದ್ಯದ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದಿದ್ದ ಸರ್ಕಾರ ಇದೀಗ ಏಕಾಏಕಿ ಹೆಚ್ಚಳ ಮಾಡಿರುವುದರಿಂದ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಉತ್ಪಾದನ ವೆಚ್ಚ ಅಧಿಕವಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಅಂತಿರೋ ಮದ್ಯ ಉತ್ವನ್ನ ಕಂಪನಿಗಳು. ಈ ಬ್ರಾಂಡ್ ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆ.