Asianet Suvarna News Asianet Suvarna News

ಸಿದ್ದು ಬಜೆಟ್: ನದಿ ತಿರುವು ಯೋಜನೆ ಆಯ್ತು, ಈಗ ಕರಾವಳಿಯ ನೇತ್ರಾವತಿ, ಗುರುಪುರ ನದಿಗಳಲ್ಲಿ ಜಲಮೆಟ್ರೋ ಸೇವೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 15 ನೇ ಆಯವ್ಯಯ ಮಂಡಿಸಿದ್ದು ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಲವು ಕೊಡುಗೆಗಳನ್ನು  ಘೋಷಣೆ ಮಾಡಿದ್ದಾರೆ.    ಪ್ರಮುಖ  ಹೈಲೈಟ್ಸ್ ಗಳ ಪಟ್ಟಿ ಇಲ್ಲಿದೆ.

Karnataka budget 2024 Water metro service on Netravati  river gow
Author
First Published Feb 16, 2024, 1:26 PM IST

ಬೆಂಗಳೂರು (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 15 ನೇ ಆಯವ್ಯಯ ಮಂಡಿಸಿದ್ದು ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಲವು ಕೊಡುಗೆಗಳನ್ನು  ಘೋಷಣೆ ಮಾಡಿದ್ದಾರೆ.    ಪ್ರಮುಖ  ಹೈಲೈಟ್ಸ್ ಗಳ ಪಟ್ಟಿ ಇಲ್ಲಿದೆ.

  • ರಾಜ್ಯದ 320 ಕಿ.ಮೀ. ಉದ್ದದ ಕರಾವಳಿ ತೀರವನ್ನು ಆರ್ಥಿಕ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳಲು ಆದ್ಯತೆ 
  • ಅಂದಾಜು 20,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸಮುದ್ರ ಸಾರಿಗೆ, ಸರಕು ಸಾಗಣೆ ಹಾಗೂ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುವ ಗುರಿ
  • ಸಾಗರಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಅಂದಾಜು 1,017 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 26 ಕಾಮಗಾರಿ
  • ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸಾಮರ್ಥ್ಯದ . ಮತ್ತು 4,200 ಕೋಟಿ ರೂ. ಅಂದಾಜು ಯೋಜನಾ ವೆಚ್ಚದ ಹೊಸ ಅಳಸಮುದ್ರ ಸರ್ವಋತು ಬಂದರು ಅಭಿವೃದ್ಧಿ
  • ಉತ್ತರ ಕನ್ನಡದ ಪಾವಿನಕುರ್ವೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಅಂದಾಜು 3048 ಕೋಟಿ ರೂ.ಗಳ  ವೆಚ್ಚದಲ್ಲಿ ಎರಡನೇ ಬೃಹತ್ ಬಂದರಿನ ಅಭಿವೃದ್ಧಿಗೆ ಅಂತರಾಷ್ಟ್ರೀಯ ಟೆಂಡ‌ರ್‌ಗೆ ಕರೆ
  • ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿ ತಯಾರಿಕೆ

ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಘೋಷಣೆ, ಮೆಟ್ರೋ, ಟನಲ್ ರೋಡ್‌, ಬಿಎಂಟಿಸಿಗೆ ಸಿಕ್ಕಿದ್ದೆಷ್ಟು?

  • ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ದೃಷ್ಟಿಯಿಂದ 1600 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ
  • ಮೈಸೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಸ್ವಾಧೀನಕ್ಕೆ 126 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬಾಕಿ 43 ಕೋಟಿ ರೂ. ಬಿಡುಗಡೆಗೊಳಿಸಿ, ಕಾಮಗಾರಿ ಪ್ರಾರಂಭಕ್ಕೆ ಕ್ರಮ ವಹಿಸಲಾಗುವುದು  ಎಂದ ಸಿಎಂ 
  • ವಿಜಯಪುರದಲ್ಲಿ 350 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯು ಮುಕ್ತಾಯ. ಕಾಂಗ್ರೆಸ್‌ ಸರ್ಕಾರದಿಂದ ಯೋಜನೆಗೆ 94 ಕೋಟಿ ರೂ.ಗಳನ್ನು ಬಿಡುಗಡೆ 
  • ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ 2023-24ನೇ ಸಾಲಿನಲ್ಲಿ 55 ಕೋಟಿ ರೂ.ಗಳನ್ನು ಬಿಡುಗಡೆ. ಬಾಕಿ ಇರುವ 30 ಕೋಟಿ ರೂ. ಶೀಘ್ರ ಬಿಡುಗಡೆ
  • 220 ಕೋಟಿ ರೂ. ವೆಚ್ಚದ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಅನುದಾನ

ಅಲ್ಪಸಂಖ್ಯಾತ ಸಮುದಾಯಕ್ಕೆ ಬಂಪರ್ ಘೋಷಿಸಿದ ಸಿದ್ದರಾಮಯ್ಯ, 393 ಕೋಟಿ ರೂ ಅನುದಾನ ಮೀಸಲು

  • ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯ ತೊಡಕು ನಿವಾರಿಸಿ ಶೀಘ್ರ ಕಾಮಗಾರಿ
  • ಬೆಂಗಳೂರು ಏರ್ಪೋರ್ಟ್ ಸಮೀಪದಲ್ಲಿ  817 ಕೋಟಿ ರೂ. ಯೋಜನಾ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿಗ್ನಚಿರ್ ಬಿಸಿನೆಸ್ ಪಾರ್ಕ್ ಮುಂದಿನ ದಿನಗಳಲ್ಲಿ 5,000 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ
  • ರೈಲ್ವೆ ಇಲಾಖೆಯೊಂದಿಗೆ ಸೇರಿ ವೆಚ್ಚ ಹಂಚಿಕೆ ಆಧಾರದಲ್ಲಿ 12,147 ಕೋಟಿ ರೂ.ಗಳ 9 ರೈಲ್ವೆ ಕಾಮಗಾರಿ ನಡೆಯುತ್ತಿದೆ. 
  • 2023-24ನೇ ಸಾಲಿನಲ್ಲಿ 600 ಕೋಟಿ ರೂ.ಗಳನ್ನು ರೈಲ್ವೆ ಯೋಜನೆಗಳಿಗಾಗಿ ಬಿಡುಗಡೆ
Follow Us:
Download App:
  • android
  • ios