Asianet Suvarna News Asianet Suvarna News

ಅಲ್ಪಸಂಖ್ಯಾತ ಸಮುದಾಯಕ್ಕೆ ಬಂಪರ್ ಘೋಷಿಸಿದ ಸಿದ್ದರಾಮಯ್ಯ, 393 ಕೋಟಿ ರೂ ಅನುದಾನ ಮೀಸಲು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 15 ನೇ ಆಯವ್ಯಯ ಮಂಡಿಸಿದ್ದು ಅಲ್ಪಸಂಖ್ಯಾತ ಸಮುದಾಯಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. 

Karnataka Budget 2024 CM Siddaramaiah announced a bumper gift to minority community development gow
Author
First Published Feb 16, 2024, 12:05 PM IST

ಬೆಂಗಳೂರು (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 15 ನೇ ಆಯವ್ಯಯ ಮಂಡಿಸಿದ್ದು ಅಲ್ಪಸಂಖ್ಯಾತ ಸಮುದಾಯಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.  ಅಲ್ಪಸಂಖ್ಯಾತ ಸಮುದಾಯ  ಅಭಿವೃದ್ಧಿಗಾಗಿ ಘೋಷಣೆ ಮಾಡಿರುವ ಪ್ರಮುಖ  ಹೈಲೈಟ್ಸ್ ಇಲ್ಲಿದೆ.

  • ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 393 ಕೋಟಿ ರೂ ಅನುದಾನ ಮೀಸಲು
  • 50 ಸಂಖ್ಯಾಬಲವುಳ್ಳ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭ
  • 100 ಸಂಖ್ಯಾಬಲವುಳ್ಳ 100 ಮೆಟ್ರಿಕ್ ವಿದ್ಯಾರ್ಥಿ ನಿಲಯ ಪ್ರಾರಂಭ
  • 100 ಮೌಲಾನಾ ಆಜಾದ್ ಶಾಲೆ ಆರಂಭ
  • ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವ ಯೋಜನೆ ಮತ್ತೆ ಆರಂಭ
  • ಅಲ್ಪಸಂಖ್ಯಾತ ಉದ್ಯಮಶೀಲರು ಕೈಗಾರಿಕೆ ಸ್ಥಾಪನೆಗೆ 10 ಕೋಟಿವರೆಗೂ ಸಾಲ (ಶೇ.6ರಷ್ಟು ಬಡ್ಡಿ ಸಹಾಯಧನ)
  • ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡಲು 10 ಕೋಟಿ ರೂ  ಅನುದಾನ ಮೀಸಲು

ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಘೋಷಣೆ, ಮೆಟ್ರೋ, ಟನಲ್ ರೋಡ್‌, ಬಿಎಂಟಿಸಿಗೆ ಸಿಕ್ಕಿದ್ದೆಷ್ಟು?

  • ರಾಜ್ಯದಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗೆ 100 ಕೋಟಿ ಅನುದಾನ
  • ಮಂಗಳೂರಿನ ಹಜ್  ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ
  • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ಮೀಸಲು
  •  ಧಾರ್ಮಿಕ ಸ್ಥಳದಲ್ಲಿ ಮೂಲಭೂತ ಸೌಕರ್ಯ 20 ಕೋಟಿ ಅನುದಾನ ಮೀಸಲು
  • ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ 50  ಕೋಟಿ ಅನುದಾನ ಮೀಸಲು
  • ರಾಜ್ಯದಲ್ಲಿರುವ ಸಿಖ್ಖ್ ಲಿಗಾರ್ ಸಮುದಾಯದವರ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಯೋಜನೆಗೆ 2 ಕೋಟಿ ಅನುದಾನ.
  • ಬೀದರ್‌ನಲ್ಲಿ ಶ್ರೀ ನಾನಕ್ ಝೀರಾ ಸಾಹೇಬ್‌ ಗುರುದ್ವಾರ ಅಭಿವೃದ್ಧಿಗೆ 1 ಕೋಟಿ ಮೀಸಲು
Follow Us:
Download App:
  • android
  • ios