Asianet Suvarna News Asianet Suvarna News

Karnataka Budget 2023: ಜಿಲ್ಲೆಗೊಂದು ಗೋಶಾಲೆ, ವಿವೇಕ ಸಿರಿ.. ಬಿಜೆಪಿ ಸರ್ಕಾರದ ಯೋಜನೆಗೆ ಸಿದ್ಧರಾಮಯ್ಯ ಎಳ್ಳುನೀರು!

Karnataka State Budget 2023: ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಹಲವು ಕಾರ್ಯಕ್ರಮಗಳನ್ನು ಹೊಸ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿಲ್ಲ. ವಿವೇಕ, ಜಿಲ್ಲೆಗೊಂದು ಗೋಶಾಲೆ ಯೋಜೆನಯನ್ನು ಬಜೆಟ್‌ನಲ್ಲಿ ಕೈಬಿಡಲಾಗಿದೆ.
 

Karnataka Budget 2023 Siddaramaiah government scraps BJP Programs san
Author
First Published Jul 7, 2023, 1:59 PM IST

ಬೆಂಗಳೂರು (ಜು.7): ನಿರೀಕ್ಷೆಯಂತೆಯೇ ಸಿದ್ಧರಾಮಯ್ಯ ಸರ್ಕಾರ ಕಳೆದ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕೆಲವು ಯೋಜನೆಗಳನ್ನು ಕೈಬಿಟ್ಟಿದೆ. ಗೋವುಗಳ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಕಳೆದ ಬಾರಿ ಜಿಲ್ಲೆಗೊಂದು ಗೋಶಾಲೆ ಆರಂಭ ಮಾಡುವ ಯೋಜನೆ ರೂಪಿಸಿತ್ತು. ಆದರೆ, ಹಾಲಿ ಸರ್ಕಾರದಲ್ಲಿ ಈ ಯೋಜನೆ ಮುಂದುವರಿಸುವ ಪ್ರಸ್ತಾಪ ಮಾಡಲಾಗಿಲ್ಲ. ಅದರೊಂದಿಗೆ ವಿದ್ಯಾಸಿರಿ ಹಾಗೂ ವಿವೇಕ ಯೋಜನೆಯಡಿ ನಿರ್ಮಾಣವಾಗಲಿರುವ ಶಾಲಾ ಕೊಠಡಿಗಳ ಯೋಜನೆಯನ್ನು ಪ್ರಸ್ತಾಪ ಮಾಡಲಾಗಿಲ್ಲ. ಇನ್ನು ಬಜೆಟ್‌ ವೇಳೆ ಕೇಂದ್ರ ಸರ್ಕಾರ ಮೇಲೆ ಸಿದ್ಧರಾಮಯ್ಯ  ಬೇಸರ ಹೊರಹಾಕಿದರು. 15ನೇ ಹಣಕಾಸು ಆಯೋಗದ ಶಿಫಾರಸ್ಸು ಇದ್ದರೂ ಹೆಚ್ಚು ಅನುದಾನ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಜಿಎಸ್‌ಟಿ ಅನುದಾನ 2022ರ ಜುಲೈನಿಂದ ಸ್ಥಗಿತವಾಗಿದೆ. ಇದರಿಂದ 2022-23ನೇ ಸಾಲಿನಲ್ಲಿ 26954 ಕೋಟಿ ರೂಪಾಯಿ ರಾಜ್ಯಕ್ಕೆ ನಷ್ಟವಾಗಿದೆ.

ಇನ್ನು ಬಜೆಟ್‌ನ ಬಗ್ಗೆ ಟೀಕೆ ಮಾಡಿದ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ್‌ ಪೂಜಾರಿ.  ಇದು ಕೇವಲ ವಿಪಕ್ಷಗಳನ್ನು ಟೀಕೆ ಮಾಡುವ ಬಜೆಟ್‌. ನಿರುದ್ಯೋಗಿ ಯುವಕರಿಗೆ ಭತ್ಯೆಯಲ್ಲೂ ಕಂಡಿಶನ್ ಹಾಕಿದ್ದಾರೆ‌. ಸಂಪನ್ಮೂಲ ಕ್ರೂಢಿಕರಣ ಹೇಗೆ ಎಂಬ ಬಗ್ಗೆ ಉತ್ತರವಿಲ್ಲ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ ಮಾಡ್ತೇವೆ ಎಂದಿದ್ದರು ಮಾಡಿಲ್ಲ. ಅನ್ನು ಭಾಗ್ಯ ಕೇಂದ್ರ ನೀಡುತ್ತದೆ ಎಂದು ಸಿದ್ದರಾಮಯ್ಯ ಕೊನೆಗೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಬಜೆಟ್‌ ಬಗ್ಗೆ ಅಭಿಪ್ರಾಯ ತಿಳಿಸಿದ ಆರ್‌.ಅಶೋಕ್‌, ಇದೊಂದು ನಾಲಾಯಕ್‌ ಬಜೆಟ್‌.  ಐದು ಗ್ಯಾರಂಟಿ ಗಳನ್ನು ಈಡೇರಿಸುವ ಸಲುವಾಗಿ ಆದಾಯವನ್ನು ಹೆಚ್ಚು ತೋರಿಸಿದ್ದಾರೆ. ಅದರ ಮುಖಾಂತರ ನಮ್ಮ ಗ್ಯಾರಂಟಿ ಈಡೇರಿಸುತ್ತೇವೆ ಅಂತಾ ಹೇಳ್ತಿದಾರೆ. ಇವರು ಗ್ಯಾರಂಟಿಗಳನ್ನು ಇನ್ನೂ ಲೇಟ್ ಮಾಡ್ತಾರೆ ಎಂದು ಹೇಳಿದ್ದಾರೆ.  ಅದರೊಂದಿಗೆ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದತಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಾಗಿ ಸರ್ಕಾರ ತಿಳಿಸಿದೆ.

Karnataka Budget 2023 Live Updates |ಅಬಕಾರಿ ಸುಂಕ ಹೆಚ್ಚಳ, ಮದ್ಯ ಪ್ರಿಯರಿಗೆ ಶಾಕ್ 

ಬಜೆಟ್‌ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, 'ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಶೇಕಡಾ 10ರಷ್ಟು ತೆರಿಗೆ ಹೆಚ್ಚಿಸಿದ್ದಾರೆ. ಮತ್ತೆ ಯಾವ್ಯಾವ ತೆರಿಗೆ ಹೆಚ್ಚಿಸುತ್ತಾರೋ ನೋಡೋಣ. ಸರಿಯಾದ ಯೋಜನೆ ಇಲ್ಲದ ಬಜೆಟ್‌ ಇದು. ಈ ಬಜೆಟ್‌ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿದೆ. ಪದೇ ಪದೇ ಭಾರತ ಸರ್ಕಾರದ ಮೇಲೆ ಮುಖ್ಯಮಂತ್ರಿಗಳು, ಸಚಿವರು ಆರೋಪ ಮಾಡುತ್ತಿದ್ದಾರೆ. ಆದರೆ ಜುಲೈ 1ಕ್ಕೆ ನೀಡಿರೋ ಅಕ್ಕಿಯೂ ಕೇಂದ್ರ ಸರ್ಕಾರದ್ದು. ಕರ್ನಾಟಕ ಸೇರಿ 80 ಕೋಟಿ ಜನರಿಗೆ ಅಕ್ಕಿ ವಿತರಿಸಲಾಗಿದೆ.ಈ ಅಕ್ಕಿಯನ್ನು ಕೇಂದ್ರ ಸರ್ಕಾರವೇ ಕೊಟ್ಟಿದೆ. ನೀವು ಅಕ್ಕಿಯನ್ನ ಕೊಟ್ಟಿಲ್ಲ. ಅದನ್ನ ನೀವು ಒಪ್ಪುಕೊಳ್ಳಲೇಬೇಕು' ಎಂದು ಹೇಳಿದರು.

Karnataka Budget 2023: ವಕ್ಫ್‌ ಆಸ್ತಿ ರಕ್ಷಣೆಗೆ 50 ಕೋಟಿ, ಶಾದಿ ಮಹಲ್‌ ನಿರ್ಮಾಣಕ್ಕೆ 54 ಕೋಟಿ!

ಎಲ್ಲ ಯೋಜನೆಗೆ ಅನಗತ್ಯ ಷರತ್ತು ಹಾಕಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಲಾಗಿದೆ. ಆ ಮೂಲಕ ನೀವು ಜನರಿಗೆ ಮೋಸ ಮಾಡಿದ್ದೀರಿ. ಜನರಿಗೆ ಮೋಸ ಮಾಡುವ ಕೆಲಸ ಮುಂದುವರೆಸಿದ್ದೀರಿ. ವರ್ಗಾವಣೆಯಲ್ಲಿ‌ ಅನೇಕ ಕಡೆ ವಸೂಲಿ ನಡೆದಿದೆ. ಒಂದೊಂದು ಪೋಸ್ಟಿಗೆ ನಾಲ್ಕಾಲ್ಕು ಶಿಫಾರಸ್ಸು  ಪತ್ರ ಕೊಡುತ್ತಿದ್ದಾರೆ. ಅದರೊಂದಿಗೆ ವಸೂಲಿ ಕೂಡ ಶುರುವಾಗಿದೆ. ಭ್ರಷ್ಟಾಚಾರ ಅಂತಾ ಮಾತನಾಡಿ ಬಂದಿರಿ. ಈಗ ವಸೂಲಿ ಕೆಲಸ ಆರಂಭ ಮಾಡಿದ್ದಾರೆ. ನೀವು ಮಾಧ್ಯಮದವರು ಕೂಡ ಆಂತರಿಕ ತನಿಖೆ ಮಾಡಿ. ಯಾವ ರೀತಿ ವಸೂಲಿ ಆಗುತ್ತೆ ಅನ್ನೋದು ಗೊತ್ತಾಗುತ್ತೆ. ಕನಿಷ್ಠ ಆರು ತಿಂಗಳಾದರೂ ಕೆಲಸ ಸರಿಯಾಗಿ ಮಾಡಿ ಅಂತಾ ನಾನು ಸಲಹೆ ಕೊಡುತ್ತೇನೆ ಎಂದಿದ್ದಾರೆ.

 

 

Follow Us:
Download App:
  • android
  • ios