ಕಾಂಗ್ರೆಸ್‌ ಸರ್ಕಾರ ಮನೆಗಳಿಗೆ ಗೃಏಹಜ್ಯೋತಿ ಯೋಜನೆ ಜೊತೆಗೆ, ನೇಕಾರರಿಗೆ ಅನುಕೂಲ ಆಗುವಂತೆ 250 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿದೆ.

ಬೆಂಗಳೂರು (ಜು.07)): ರಾಜ್ಯದಲ್ಲಿ ಈಗಾಗಲೇ ಎಲ್ಲ ಮನೆಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಿರುವ ಕಾಂಗ್ರೆಸ್‌ ಸರ್ಕಾರ ಈಗ ನೇಕಾರರಿಗೆ ಅನುಕೂಲ ಆಗುವಂತೆ 250 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿದೆ.

10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ, ಮಾಸಿಕ ಗರಿಷ್ಠ 250 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಒದಗಿಸುವ ಮೂಲಕ ನೇಕಾರರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಕ್ರಮಕೈಹೊಳ್ಳಲಾಗುವುದು. ಜವಳಿ ಮತ್ತು ಸಿದ್ದ ಉಡುಪು ನೀತಿಯಡಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. 

Karnataka Budget 2023: ಬೆಂಗಳೂರಲ್ಲಿ ಹೊಸ ಟೆಕ್ನಾಲಜಿ- ಏರೋಸ್ಪೇಸ್‌ ಪಾರ್ಕ್‌, ಕೈಗಾರಿಕಾ ಟೌನ್‌ಷಿಪ್‌ ಸ್ಥಾಪನೆ

ಗಾಂಧಿ ವಸ್ತ್ರೋದ್ಯಮ ಕೊಶ ಸ್ಥಾಪನೆ: ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ಕೈಮಗ್ಗದ ವಸ್ತ್ರಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಕೈಮಗ್ಗ ವಲಯದಲ್ಲಿ ಸುಸ್ಥಿರ ಉದ್ಯೋಗ ಒದಗಿಸಲು ಸಾಕಷ್ಟು ಅವಕಾಶವಿದೆ. ಈ ಅವಕಾಶದ ಸದ್ಬಳಕೆಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಹಾತ್ಮಾ ಗಾಂಧಿ ವಸ್ತ್ರೋದ್ಯಮ ಕೋಶವನ್ನು ಸ್ಥಾಪಿಸಲಾಗುವುದು. ಕೋಶವು ವಿನ್ಯಾಸಕಾರರು, ನೇಕಾರರು, ಬಿಚ್ಚಾಣಿಕೆದಾರರು, ಮತ್ತಿತರ ಭಾಗೀದಾರರನ್ನು ಒಂದೇ ವೇದಿಕೆಯಡಿ ತರುವುದರೊಂದಿಗೆ ಮಾರುಕಟ್ಟೆಯೊಂದಿಗೆ ಸಮನ್ವಯಗೊಳಿಸಲಿದೆ. ಅಲ್ಲದೇ, ಕುಸಿತ ಕಾಣುತ್ತಿರುವ ಕೈಮಗ್ಗ ಉದ್ಯಮದ ಪುನಃಶ್ವೇತನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ.

ಮಂಡ್ಯ ಮೈಶುಗರ್‌ ಕಾರ್ಖಾನೆಗೆ 50 ಕೋಟಿ ರೂ. ಬಂಡವಾಳ: ಮಂಡ್ಯದಲ್ಲಿರುವ ಮೈಸೂರು ಷುಗರ್ ಕಂಪನಿ ಲಿ., ನಮ್ಮ ರಾಜ್ಯದ ಪ್ರತಿಷ್ಠಿತ ಮತ್ತು ಪ್ರಮುಖ ಕಾರ್ಖಾನೆಯಾಗಿದ್ದು, ಇದು ಹಳೆ ಮೈಸೂರು ಭಾಗದ ಕೃಷಿಕರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಕಂಪನಿಯನ್ನು ಮನರುಜ್ಜಿವನಗೊಳಿಸಲು ಮತ್ತು 2023-24ನೇ ಸಾಲಿನಲ್ಲಿಯೇ ಕಬ್ಬು ಲಾಭದಾಯಕವಾಗಿ ನಡೆಸಲು ಅರೆಯುವಿಕೆಯನ್ನು ಪ್ರಾರಂಭಿಸಿ ಈಗಾಗಲೇ ನಮ್ಮ ಸರ್ಕಾರ 50 ಕೋಟಿ ರೂ. ಬಂಡವಾಳ ನೀಡಿದೆ. ದುಡಿಯುವ ಬಂಡವಾಳ ನೀಡುವ ಜೊತೆಗೆ ಕಾರ್ಖಾನೆಯ ಸುಸ್ಥಿರತೆ ಮತ್ತು ಉನ್ನತೀಕರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. 

Karnataka Budget 2023: ಸ್ವಿಗ್ಗಿ, ಜೊಮೊಟೊ ಡೆಲಿವರಿ ಬಾಯ್‌ಗಳಿಗೆ ಭರ್ಜರಿ ಕೊಡುಗೆ: 4 ಲಕ್ಷ ರೂ. ವಿಮೆ ಸೌಲಭ್ಯ

ಲೀಥಿಯಂ ಖನಿಜ ಅನ್ವೇಷಣೆಗೆ ಆದ್ಯತೆ: ರಾಜ್ಯದಲ್ಲಿ ಅತ್ಯಂತ ವಿರಳ ಭೂ ನಿಕ್ಷೇಪ (Rare Earth Elements)ಗಳಲ್ಲಿ ಒಂದಾದ ಲೀಥಿಯಂ (Lithium) ಖನಿಜಾನ್ವೇಷಣೆಯನ್ನು ಕೈಗೊಂಡು ಹೊಸ ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕ್ರಮವಹಿಸಲಾಗುವುದು. ರಾಜ್ಯದಲ್ಲಿ ಸುಸ್ಥಿರ, ಸುರಕ್ಷಿತ ಮತ್ತು ವೈಜ್ಞಾನಿಕ ಗಣಿಗಾರಿಕೆಯನ್ನು ಉತ್ತೇಜಿಸಿ, ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವಶ್ಯಕ ಸುಧಾರಣೆಗಳನ್ನು ಜಾರಿಗೊಳಿಸಲಾಗುವುದು.

  • ಸಿದ್ದರಾಮಯ್ಯ ಬಜೆಟ್‌ನ ಪ್ರಮುಖ ಅಂಶಗಳು: 
  • 3.27 ಲಕ್ಷ ಕೋಟಿ ಬಜೆಟ್​ ಮಂಡಿಸಿದ ಸಿದ್ದರಾಮಯ್ಯ
  • ಪಂಚ​ ಗ್ಯಾರಂಟಿ ಯೋಜನೆಗಳಿಗೆ 57,910 ಕೋಟಿ ಮೀಸಲು 
  • ಇಂದಿರಾ ಕ್ಯಾಂಟೀನ್​ ಯೋಜನೆಗೆ 100 ಕೋಟಿ ಅನುದಾನ 
  • ಎಲ್ಲಾ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರ ನಿರ್ಮಾಣ
  • ಬೆಂಗಳೂರು ನಗರಾಭಿವೃದ್ಧಿಗೆ 45 ಸಾವಿರ ಕೋಟಿ ರೂ. ಅನುದಾನ
  • ನಮ್ಮ ಮೆಟ್ರೋ ಹಾಗೂ ಉಪನಗರ ರೈಲು ಯೋಜನೆಗೆ 30 ಸಾವಿರ ಕೋಟಿ 
  • ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ
  • ಕಾಫಿ ಟೂರಿಸಂ, ವೀಳ್ಯದೆಲೆ, ಮೈಸೂರು ಮಲ್ಲಿಗೆಗೆ ಬ್ರಾಂಡಿಂಗ್
  • ‘ಕೃಷಿ ಭಾಗ್ಯ ಯೋಜನೆ’ಗೆ ನರೇಗಾ ಅಡಿಯಲ್ಲಿ 100 ಕೋಟಿ ರೂ.
  • ಮೈಸೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
  • ಕಲಬುರಗಿಯಲ್ಲಿ ತಾಯಿ - ಮಗು ಆಸ್ಪತ್ರೆ ನಿರ್ಮಾಣ - 70 ಕೋಟಿ ರೂ. ವೆಚ್ಚ
  • 1ರಿಂದ 10ನೇ ತರಗತಿವರೆಗೆ ವಾರಕ್ಕೆ 2 ಬಾರಿ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣು 
  • ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
  • ಮಧ್ಯಮ,ದೀರ್ಘಾವಧಿ ರೈತರ ಸಾಲ ಮಿತಿ 10ರಿಂದ 15 ಲಕ್ಷಕ್ಕೆ ಏರಿಕೆ