Asianet Suvarna News Asianet Suvarna News

Karnataka Budget 2022: ಕೃಷಿ ಕ್ಷೇತ್ರಕ್ಕೆ ಬಂಪರ್, 33,700 ಕೋಟಿ ಘೋಷಣೆ, ರೈತರಿಗೆ ಏನೆಲ್ಲಾ ಸಿಕ್ಕಿದೆ?

* ಕರ್ನಾಟಕ ಬಜೆಟ್ 2022-23
* ಕೃಷಿ ಕ್ಷೇತ್ರಕ್ಕೆ ಬಂಪರ್, 33,700 ಕೋಟಿ ಘೋಷಣೆ
*  'ರೈತ ಶಕ್ತಿ' ಯೋಜನೆ, 'ಯಶಸ್ವಿನಿ' ಮರು ಜಾರಿ

Karnataka budget 2022 rs 33700 crore for Agriculture Sector rbj
Author
Bengaluru, First Published Mar 4, 2022, 2:11 PM IST

ಬೆಂಗಳೂರು, (ಮಾ. 04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು, ಬಜೆಟ್ ಮಂಡನೆಯಲ್ಲಿ ಮೊದಲಿಗೆ ಕೃಷಿ ಕ್ಷೇತ್ರದ ಅನುದಾನವನ್ನು ಘೋಷಿಸಿದರು.  2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರುಪಾಯಿ ನೀಡಿದ್ದಾರೆ.

ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂಪಾಯಿ ಘೋಷಣೆ ಮಾಡಿದ ಸಿಎಂ ಬಿಎಸ್ ಬಸವರಾಜ ಬೊಮ್ಮಾಯಿ ಅವರು, ರೈತ ಶಕ್ತಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.

Karnataka Budget 2022 Live: ದೇವಾಲಯಗಳಿಗೆ ಸ್ವಾಯತ್ತತೆ ನೀಡಿದ ಬೊಮ್ಮಾಯಿ ಸರ್ಕಾರ

ರಾಜ್ಯದಲ್ಲಿ ರೈತ ಶಕ್ತಿ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು,ಈ ಯೋಜನೆ ಮೂಲಕ ರೈತರಿಗೆ ಯಂತ್ರೋಪಕರಣ ಉಪಯೋಗಕ್ಕೆ ಸಹಾಯಧನ, 250 ರೂ. ಡೀಸೆಲ್ ಸಹಾಯಧನ ನೀಡಲಾಗುವುದು. 500 ಕೋಟಿ ರೂ. ಯೋಜನೆಗೆ ಒದಗಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

* ರೈತ ಶಕ್ತಿ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ. ಇದಕ್ಕಾಗಿ 600 ಕೋಟಿ ರೂ. ಅನುದಾನ.
* ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ. ಹಂಚಿಕೆ,
* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ.
* ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣಿಕೆಗೆ ವಿಜಯಪುರ ಜಿಲ್ಲೆ, ತೊರವಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ವ್ಯವಸ್ಥೆ ಸ್ಥಾಪನೆ ಹಾಗೂ ಶೀತಲೀಕೃತ ಸರಕು ಸಾಗಣೆ ವಾಹನ ಪೂರೈಕೆ.
* ಬಡ್ಡಿ ರಿಯಾಯಿತಿ ಯೋಜನೆಯಡಿ 3 ಲಕ್ಷ ಹೊಸ ರೈತರೂ ಸೇರಿದಂತೆ ಒಟ್ಟು 33 ಲಕ್ಷ ರೈತರಿಗೆ 24,000 ಕೋಟಿ ಸಾಲ ವಿತರಣೆ ಗುರಿ.

* 2 ಲಕ್ಷ ಹೆಕ್ಟೇರ್ ಗಳಲ್ಲಿ ಸಾವಯವ ಕೃಷಿ ಆರಂಭ. 
* ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ವಿವಿ ಸ್ಥಾಪನೆ. 
*ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ.
* 1 ಸಾವಿರ ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ. 
* ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಥಾಪಿಸಲು 50 ಕೋಟಿ
* ಕುರಿಗಾರರಿಗೆ ಕುರಿದೊಡ್ಡಿ ನಿರ್ಮಿಸಲು ಸಹಾಯಧನ. ಕುರಿಗಾಯಿಗಳಿಗೆ 5 ಲಕ್ಷ ರೂಪಾಯಿ ವಿಮೆ
* ರೈತರ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ.
* ಕೃಷಿ ಇಲಾಖೆಗೆ 8,457 ಕೋಟಿ ರೂಪಾಯಿ
* ರೈತರಿಗೆ 2 ಸಾವಿರ ಗೋತಳಿಗಳ ವಿತರಣೆ. ಗೋವು ಉತ್ಪನ್ನಗಳ ವಿತರಣೆಗೆ ಗೋವು ಸಹಕಾರ ಸಂಘ ಸ್ಥಾಪನೆ

* ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪರಿಷ್ಕೃತ ರೂಪದಲ್ಲಿ ಯಶಸ್ವಿನಿ ಯೋಜನೆ ಮರು ಜಾರಿ. ಈ ಸಂಬಂಧ ಸರ್ಕಾರದಿಂದ 300 ಕೋಟಿ ರೂ. ಅನುದಾನ.
* 57 ತಾಲ್ಲೂಕುಗಳಲ್ಲಿ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ - ಜಲಾನಯನ ಅಭಿವೃದ್ಧಿ ಘಟಕ - 2.0 ಜಾರಿ.
* ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆ, ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.

ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ
* ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ. ಪ್ರೋತ್ಸಾಹ ಧನ
* ದ್ವಿತಳಿ ಮೊಟ್ಟೆ ಉತ್ಪಾದಿಸಿ ಶೈತೀಕರಿಸಲು ಮದ್ದೂರು, ರಾಣೆಬೆನ್ನೂರು ಮತ್ತು ದೇವನಹಳ್ಳಿಯಲ್ಲಿ 15 ಕೋಟಿ ರೂ.ಗಳ ವೆಚ್ಚದಲ್ಲಿ ಶೈತ್ಯಾಗಾರ ನಿರ್ಮಾಣ.
* ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
*  ದ್ವಿತಳಿ ಬಿತ್ತನೆ ಗೂಡಿಗೆ ಪ್ರತಿ ಕೆಜಿಗೆ 50 ರೂ. ಪ್ರೋತ್ಸಾಹಧನ ಹೆಚ್ಚಳ. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಪ್ರೋತ್ಸಾಹಧನ.
* ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ

ಪಶು ಸಂಗೋಪನೆ, ಹೈನುಗಾರಿಕೆಗೆ ಉತ್ತೇಜನ
* ನೂತನ 100 ಪಶುಚಿಕಿತ್ಸಾಲಯಗಳ ಪ್ರಾರಂಭ.
* ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ, ರಾಜ್ಯ * ಸರ್ಕಾರದಿಂದ 100 ಕೋಟಿ ರೂ. ಷೇರು ಬಂಡವಾಳ,
* ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆ 100ಕ್ಕೆ ಹೆಚ್ಚಳ, 50 ಕೋಟಿ ರೂ. ಅನುದಾನ.
* ಗೋಶಾಲೆಗಳಲ್ಲಿನ ಗೋವುಗಳ ದತ್ತು ಪ್ರೋತ್ಸಾಹಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ.
* ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ.
* ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.
* ಆಕಸ್ಮಿಕ ಮರಣ ಹೊಂದುವ ಕುರಿ/ ಮೇಕೆ ಸಾಕಾಣಿಕೆದಾರರು/ ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯ
* ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು 'ಮತ್ಸಸಿರಿ’ ಯೋಜನೆ ಜಾರಿ.
 

Follow Us:
Download App:
  • android
  • ios