ಸಿಎಂ ಯಡಿಯೂರಪ್ಪ ಎಂಟನೇ ಬಜೆಟ್ ಮಂಡಿಸಿದ್ದಾರೆ. ಯಾವುದೇ ನಿರ್ಧಿಷ್ಟ ಗುರಿ, ಕಾರಣ ಇಲ್ಲದಿರೋ ಬಜೆಟ್.
ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್. 71ಸಾವಿರ ಕೋಟಿ ಸಾಲ ಮಾಡಿರೋದಾಗಿ ಘೋಷಣೆ ಮಾಡಿದ್ದಾರೆ.
2002 ರಲ್ಲಿ ಫಿಸಿಕಲ್ ಆಕ್ಟ್ ತಂದಿದ್ದರು. ಅವರ ಪ್ರಕಾರ 25ರಷ್ಟು ಮೇಲೆ ಹೋಗದಂತೆ ಸೂಚಿಸಲಾಗಿತ್ತು.
ಅದನ್ನು ಮೀರಿ 26% ಸಾಲ ಪಡೆದಿದ್ದಾರೆ. ಮುಂದಿನ ದಿನದಲ್ಲಿ ಕರ್ನಾಟಕದ ಆಯವ್ಯಯ ಕೆಟ್ಟ ಪರಿಸ್ಥಿತಿ ಬರಲಿದೆ.
ಅಮೆಂಡ್ ಮಾಡಿ ಸರಿಸಮ ಮಾಡೋದಾಗಿ ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ ಇನ್ ಡಿಸಿಪ್ಲೀನ್ ಮಾಡಲು ಹೊರಟಿದ್ದಾರೆ.
ಹಸಿರು ಶಾಲು ಹಾಕಿ ಬಜೆಟ್ ಮಂಡಿಸ್ತಿದ್ದಾರೆ. ಆದ್ರೆ ರೈತರಿಗೆ ಅನುಕೂಲವಾಗೋ ಯಾವುದೇ ಯೋಜನೆ ಕಾಣ್ತಿಲ್ಲ.
ಇಡೀ ದೇಶದಲ್ಲಿ ಕೃಷಿ ಅಮೇಂಡ್‌ಮೆಂಟ್ ವಿರೋಧಿಸ್ತಿದ್ದಾರೆ. ಕೃಷಿ, ನಿರಾವರಿಗೆ ಯಾವುದೇ ಯೋಜನೆ ಕಾಣ್ತಿಲ್ಲ.
ಎರಡು ಇದಾಯಕ್ಕೆ 500ಕೋಟಿ ಕೊಡೋದಾಗಿ ಘೋಷಿಸಿದ್ದಾರೆ. ಅಂಬೇಡ್ಕರ್, ಜಗಜೀವನ್ ಸೇರಿದಂತೆ ಕೆಲ ಕಾರ್ಪೊರೇಷನ್‌ಗಳಿಗೆ 500 ಕೋಟಿ ನೀಡಿದ್ದಾರೆ.
ಇದು ಯಾವ ಪುರುಷಾರ್ಥಕ್ಕೆ ಇದು ಘೋಷಿಸಬೇಕು. ಕಳೆದ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಬಿಡುಗಡೆ ಮಾಡೋದಾಗಿ ಹೇಳಿ, ಒಂದು ರೂಪಾಯಿ ಬಿಡುಗಡೆಯಾಗಿಲ್ಲ.
ದಾವೋಸ್‌ಗೆ ತೆರಳಿ ಹೂಡಿಕೆದಾರರನ್ನ ಕರೆದುಕೊಂಡು ಬರೋದಾಗಿ ಹೇಳಿದ್ರು. ಯಾರನ್ನೂ ಸಹ ಕರೆತಂದಿಲ್ಲ.
ಮಾಜಿ ಸಚಿವ ಪರಮೇಶ್ವರ್ ಹೇಳಿಕೆ