ಬೆಂಗಳೂರು(ಮಾ.08): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ 8ನೇ ರಾಜ್ಯ ಬಜೆಟ್‌ ಮಂಡಿಸಿದ್ದು, ಎಲ್ಲಾ ಕ್ಷೇತ್ರಗಳಿಗೂ ಸಾಕಷ್ಟು ಅಳೆದು ತೂಗಿ ಬಂಪರ್ ಯೋಜನೆಗಳನ್ನು ಘೋಷಿಸಿದ್ದಾರೆ. ಅದೇ ರೀತಿ ಕ್ರೀಡಾ ಕ್ಷೇತ್ರಕ್ಕೂ ಸಿಎಂ ಬಿಎಸ್‌ವೈ ಅನುದಾನ ಮೀಸಲಿಟ್ಟಿದ್ದಾರೆ.

ಹೌದು, ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಮಹತ್ವದ ಘೋಷಣೆಗಳಿರಲಿಲ್ಲ. ಆದರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕ್ರೀಡಾ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಾಗಿ ಬೇಕಾಗಿದ್ದಂತಹ ಮಹತ್ವದ ಯೋಜನೆಗಳಿಗೆ ಮಣೆಹಾಕಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾಸಚಿವರು ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ, ಮುಂಬರುವ ದಿನಗಳಲ್ಲಿ ಕರ್ನಾಟಕ ದೇಶದ ಕ್ರೀಡಾ ಹಬ್‌ ಆಗಿ ಬೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದರು. ಮುಂದುವರೆದು ಕರ್ನಾಟಕದಲ್ಲಿ ಹೆಚ್ಚಿನ ವಿಶ್ವದರ್ಜೆಯ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ ಎಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕ್ರೀಡಾ ಕ್ಷೇತ್ರಕ್ಕೆ ಕೆಲವು ವಿಶೇಷ ಅನುಧಾನವನ್ನು ಒದಗಿಸಿದ್ದಾರೆ. 

Live| Karnataka Budget 2021: ನಾರಿ ಸುರಕ್ಷತೆಗೆ ಯಡಿಯೂರಪ್ಪ ಹೆಚ್ಚಿನ ಒತ್ತು

ರಾಜ್ಯ ಬಜೆಟ್‌ನಲ್ಲಿ ಕ್ರೀಡಾಕ್ಷೇತ್ರಕ್ಕೆ ಸಿಕ್ಕಿದ್ದು ಇದು:

* ದೇವನಹಳ್ಳಿಯಲ್ಲಿ ಒಲಿಂಪಿಕ್‌ ಸಿದ್ದತಾ ಕೇಂದ್ರ ಸ್ಥಾಪನೆಗೆ ಹಸಿರು ನಿಶಾನೆ

* ಕ್ರೀಡಾ ವಿಜ್ಞಾನ ಕೇಂದ್ರಕ್ಕೆ 2 ಕೋಟಿ ರುಪಾಯಿ ಅನುದಾನ ಮೀಸಲು

* ಮಂಡ್ಯ ನಗರ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ ರುಪಾಯಿ ಮೀಸಲು

* ಮುಂದಿನ ವರ್ಷ ಅಂದರೆ 2022ರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಯೂನಿವರ್ಸಿಟಿ ಕ್ರೀಡಾಕೂಟ ಆಯೋಜನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.