Karnataka 7th pay commission:ನಿವೃತ್ತಿ, ಪಿಂಚಣಿಗೆ ಸಂಬಂಧಿಸಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳೇನು?

ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ನೂತನ ವೇತನ ರಚನೆ ಕುರಿತು ವರದಿ ಸಲ್ಲಿಕೆ ಅವಧಿಯನ್ನು ಈಗಾಗಲೇ ಮತ್ತೆ 6 ತಿಂಗಳ ಕಾಲ ವಿಸ್ತರಿಸಿದೆ. ಈ ನಡುವೆ ಆಯೋಗ ನೌಕರರಿಗೆ ನೀಡಿರುವ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರಿಸಿದೆ. ಇದರಲ್ಲಿ ಪಿಂಚಣಿ, ನಿವೃತ್ತಿಗೆ ಸೇರಿ ಏನೆಲ್ಲ ಬೇಡಿಕೆಗಳಿವೆ? ಇಲ್ಲಿದೆ ಮಾಹಿತಿ. 

karnataka 7th pay commission questionnaire government employees answer on pension benefits anu

ಬೆಂಗಳೂರು (ಜು.20): ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ನೂತನ ವೇತನ ರಚನೆ ಕುರಿತು ವರದಿ ಸಲ್ಲಿಕೆ ಅವಧಿಯನ್ನು ಮೇ ತಿಂಗಳಲ್ಲಿ 6 ತಿಂಗಳ ಕಾಲ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರದ 7ನೇ ರಾಜ್ಯ ವೇತನ ಆಯೋಗಕ್ಕೆ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅಧ್ಯಕ್ಷರಾಗಿದ್ದಾರೆ. ಈ  ಆಯೋಗವನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ  ಈ ಹಿಂದಿನ ಸರ್ಕಾರ 2022ರ ನವೆಂಬರ್ ನಲ್ಲಿ ರಚಿಸಿತ್ತು. ಸರ್ಕಾರಿ ನೌಕರರ ವೇತನಗಳನ್ನು ಪರಿಷ್ಕರಿಸಿ 6 ತಿಂಗಳೊಳಗೆ ವರದಿ ನೀಡುವಂತೆ ಈ ಆಯೋಗಕ್ಕೆ ಸರ್ಕಾರ ಸೂಚಿಸಿತ್ತು. ಈ ಗಡುವು ಮೇ 19ಕ್ಕೆ ಮುಕ್ತಾಯವಾಗಿದ್ದು, ಮತ್ತೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ. ಸುಮಾರು 6ಲಕ್ಷ ಉದ್ಯೋಗಿಗಳ ವೇತನವನ್ನು ಆಯೋಗ ಪರಿಷ್ಕರಣೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಆಯೋಗ ರಾಜ್ಯ ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳನ್ನು ಬಿಡುಗಡೆಗೊಳಿಸಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರಗಳನ್ನು ಸಲ್ಲಿಕೆ ಮಾಡಿದೆ. ಪ್ರಶ್ನಾವಳಿಗಳಲ್ಲಿ ಪಿಂಚಣಿ ಯೋಜನೆಗಳು, ಪೂರ್ಣ ನಿವೃತ್ತಿ ವೇತನ, ಕನಿಷ್ಠ ಪಿಂಚಣಿ ಹಾಗೂ ಕುಟುಂಬ ವಿಶ್ರಾಂತಿ ವೇತನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಶ್ನೆಗಳಿವೆ. 

ಇನ್ನು ಈ ಪ್ರಶ್ನಾವಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರಗಳನ್ನು ಕೂಡ ನೀಡಿದೆ. ಅದರಲ್ಲಿ ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿ ನೌಕರರ ಸಂಘ ನೀಡಿರುವ ಉತ್ತರಗಳ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ 30 ವರ್ಷಗಳ ಅರ್ಹತಾ ಸೇವೆ ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಮಾತ್ರ ಪೂರ್ಣ ನಿವೃತ್ತಿ ವೇತನ ನೀಡಲಾಗುತ್ತಿದೆ. ನಿವೃತ್ತಿ ಮೊತ್ತ ಲೆಕ್ಕ ಹಾಕುವಾಗ ಮೂಲ ವೇತನವನ್ನಷ್ಟೇ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದರ ಬಲಾವಣೆಗೆ ಸಲಹೆ ನೀಡುವಂತೆ ಆಯೋಗ ಕೇಳಿತ್ತು. ಇದಕ್ಕೆ ನೌಕರರ ಸಂಘ ಉತ್ತರಿಸಿದ್ದು, ಪೂರ್ಣ ಪಿಂಚಣಿಗೆ ನೌಕರ ಸಲ್ಲಿಕೆ ಮಾಡುವ 25 ವರ್ಷಗಳ ಅರ್ಹತ ಸೇವಾವಧಿಯನ್ನು ಪರಿಗಣಿಸಬೇಕು. ಹಾಗೆಯೇ ಕಳೆದ 10 ತಿಂಗಳಲ್ಲಿ ಪಡೆಯುತ್ತಿರುವ ಸರಾಸರಿ ವೇತನ ಅಥವಾ ಕೊನೆಯದಾಗಿ ಪಡೆದ ವೇತನದ ಶೇ.50 ಇದರಲ್ಲಿ ಯಾವುದು ಪ್ರಯೋಜನಕಾರಿಯೋ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. 

7th pay commission ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವರದಿ ಸಲ್ಲಿಕೆ ಅವಧಿ ವಿಸ್ತರಣೆ!

ಇನ್ನು ಮತ್ತೊಂದು ಪ್ರಶ್ನೆಯಲ್ಲಿ ಪ್ರಸ್ತುತ ತಿಂಗಳಿಗೆ ಕನಿಷ್ಠ ಪಿಂಚಣಿ 8,500ರೂ. ಆಗಿದ್ದು, ಇದಕ್ಕೆ ತುಟ್ಟಿ ಭತ್ಯೆ ಕೂಡ ಸೇರಿಸಲಾಗಿದೆ. ಇನ್ನು ನಿವೃತ್ತಿ ವೇತನದ ಗರಿಷ್ಠ ಮೊತ್ತ 75,300 ರೂ. ಆಗಿದೆ.  ಇದು ಸಮರ್ಪಕವಾಗಿದೆಯೇ? ಇಲ್ಲವಾದಲ್ಲಿ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಎಷ್ಟಿರಬೇಕು? ಎಂದು ಆಯೋಗ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕನಿಷ್ಠ ಮತ್ತು ಗರಿಷ್ಠ ಕುಟುಂಬ ಪಿಂಚಣಿಗೆ ಪ್ರಸ್ತುತ ಇರುವ ಶೇ.31ರಷ್ಟು ತುಟ್ಟಿ ಭತ್ಯೆಯನ್ನು ಪೂರ್ಣವಾಗಿ ವಿಲೀನಗೊಳಿಸಬೇಕು. ಆ ಬಳಿಕ ಶೇ.40ರಷ್ಟು ಫಿಟ್ ಮೆಂಟ್ ಬೆನಿಫಿಟ್ ನೀಡಬೇಕು. ಹಾಗೆಯೇ ಪರಿಷ್ಕೃತ ಮೂಲ ವೇತನದ ಶೇ.50ರಷ್ಟನ್ನು ಕನಿಷ್ಠ ಪಿಂಚಣಿ ಅಥವಾ ಕುಟುಂಬ ಪಿಂಚಣಿ ಮೊತ್ತವನ್ನು 16,500 ರೂ. + ತುಟ್ಟಿ ಭತ್ಯೆ ನಿಗದಿಪಡಿಸಬೇಕು. ಹಾಗೆಯೇ ಪರಿಷ್ಕೃತ ಗರಿಷ್ಠ ವೇತನದ ಶೇ.50ರಷ್ಟು ಗರಿಷ್ಠ ಮೊತ್ತಕ್ಕೆ 1,5o,oooರೂ.+ತುಟ್ಟಿ ಭತ್ಯೆ ನಿರ್ಧಾರ ಮಾಡುವಂತೆ ನೌಕರರ ಸಂಘ ತಿಳಿಸಿದೆ.

7th Pay Commission:ಈ ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ

ಇನ್ನು ಕನಿಷ್ಠ ಕುಟುಂಬ ಪಿಂಚಣಿ ಕನಿಷ್ಠ 16,500ರೂ. + ತುಟ್ಟಿಭತ್ಯೆ ಹಾಗೂ ಗರಿಷ್ಠ ಕುಟುಂಬ ಪಿಂಚಣಿ  1,50,000ರೂ. + ತುಟ್ಟಿಭತ್ಯೆ ಎಂದು ಶಿಫಾರಸ್ಸು ಮಾಡಿರೋದನ್ನು ಮುಂದುವರಿಸಬೇಕು. ಅವಲಂಬಿತ ಪೋಷಕರು ಕೂಡ ಕುಟುಂಬ ಪಿಂಚಣಿಗೆ ಅರ್ಹರೆಂದು ಶಿಫಾರಸ್ಸು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಉತ್ತರದಲ್ಲಿ ತಿಳಿಸಿದೆ. 

Latest Videos
Follow Us:
Download App:
  • android
  • ios