ಜೋರಾಗಿ ಸೌಂಡ್ ಮಾಡ್ತಾ ನೂಡಲ್ಸ್ ಹೀರುವ ವಿಡಿಯೋ ಮಾಡಿ: 5 ಲಕ್ಷ ರೂ. ಗೆಲ್ಲಿ! ಏನಿದು ಬಂಪರ್ ಅವಕಾಶ? ಡಿಟೇಲ್ಸ್ ಇಲ್ಲಿದೆ...
ಕೆಲವರು ತಮ್ಮ ಪ್ರಾಡಕ್ಟ್ಗಳ ಪ್ರಚಾರಕ್ಕಾಗಿ ವಿಭಿನ್ನ ರೀತಿಯಲ್ಲಿ ಜಾಹೀರಾತುಗಳನ್ನು ಕೊಡುವುದು ಇದೆ. ಜನರನ್ನು ತಮ್ಮ ಪದಾರ್ಥಗಳಿಗೆ ಆಕರ್ಷಿಸಲು ವಿವಿಧ ರೀತಿಯ ಆಫರ್ ಕೊಡುವುದು ಮಾಮೂಲು. ಇದೀಗ ಏಷ್ಯನ್ ಪಾಕಪದ್ಧತಿ ಬ್ರ್ಯಾಂಡ್ ಮಾಸ್ಟರ್‌ಚೌ ಅವರು ವಿಭಿನ್ನ ರೀತಿಯ ಸ್ಪರ್ಧೆ ಆಯೋಜಿಸಿದ್ದಾರೆ. ಇದರಲ್ಲಿ ಅವರು ಕೊಡುವ ನೂಡಲ್ಸ್ ರೀತಿಯ ಪದಾರ್ಥವನ್ನು ಜೋರಾಗಿ ಹೀರುತ್ತಾ ತಿನ್ನಬೇಕು. ಅಂದರೆ ಮ್ಯಾಗಿ ತಿನ್ನುವುದನ್ನು ನೆನಪಿಸಿಕೊಳ್ಳಿ. ಅದನ್ನು 'ಸೂ' ಎಂದು ಮೇಲಕ್ಕೆ ಎಳೆದುಕೊಳ್ಳುವಾಗ ಸೌಂಡ್ ಬರುತ್ತದಲ್ಲ, ಅಂಥ ಶಬ್ದ ಜೋರಾಗಿ ಬರಬೇಕು. ಯಾರು ಜೋರಾಗಿ ಸೌಂಡ್ ಮಾಡುತ್ತಾರೋ ಅವರಿಗೆ ಬಂಪರ್ ಬಹುಮಾನವನ್ನು ಘೋಷಣೆ ಮಾಡಲಾಗಿದೆ.
ಹೀಗೆ ಜೋರಾಗಿ ಸೌಂಡ್ ಮಾಡುತ್ತಾ ತಿಂದರೆ, ಅದು ಹಲವರಿಗೆ ಕಿರಿಕಿರಿ ತರುವುದು ಸಹಜ. ಫಂಕ್ಷನ್ಗಳಲ್ಲಿ ಇಲ್ಲವೇ ಹೋಟೆಲ್ಗಳಿಗೆ ಹೋದ ಸಂದರ್ಭದಲ್ಲಿ ಈ ರೀತಿ ಸೌಂಡ್ ಮಾಡುತ್ತಾ ಯಾರಾದರೂ ತಿಂದರೆ ಹೊಡೆದು ಬಿಡೋಣ ಎಂದೂ ಎನ್ನಿಸುವುದು ಉಂಟು. ಮನೆಯಲ್ಲಿ ಆದರೆ ಯಾರನ್ನಾದರೂ ಬೈದು ಸುಮ್ಮನೆ ಇರಿಸಬಹುದು, ಇಲ್ಲವೇ ಸ್ಥಳ ಬಿಟ್ಟು ಹೋಗಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ಅದು ಕಷ್ಟಸಾಧ್ಯವಾಗುತ್ತದೆ. ಆದರೆ ಅವರಿಗೇ ಈಗ ದೊಡ್ಡ ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ಸೌಂಡ್ ಮಾಡಿದರೆ ಲಕ್ಷ ಲಕ್ಷ ದುಡ್ಡು ಎನ್ನಲಾಗಿದೆ.
ಒಂದು ಮಿಲಿಯನ್ ಮಂದಿಗೆ ಉದ್ಯೋಗ ನೀಡ್ತಿರೋ ಸೋಮಾರಿಗಳು! ಇವರಿಂದ್ಲೇ 35 ಸಾವಿರ ಕೋಟಿ ಲಾಭ
"ಭಾರತದ ಮೊದಲ ಹೀರುವ (Slurp) ಚಾಂಪಿಯನ್ ಆಗಿ ಮತ್ತು 5 ನಿಮಿಷಗಳಲ್ಲಿ 5 ಲಕ್ಷ ರೂಪಾಯಿ ಗೆಲ್ಲಿರಿ' ಎಂದು ಜಾಹೀರಾತನ್ನು ಮಾಸ್ಟರ್‌ಚೌ ನೀಡಿದೆ. ಈ ಸವಾಲನ್ನು ಯಾರು ಬೇಕಾದರೂ ಸ್ವೀಕರಿಸಬಹುದಾಗಿದೆ. ಎಲ್ಲರಿಗೂ ತಮ್ಮನ್ನು ತಾವು ಸ್ಲರ್ಪ್ ಮಾಡುವುದನ್ನು ರೆಕಾರ್ಡ್ ಮಾಡಿ ಮಾಸ್ಟರ್‌ಚೌಗೆ ಸಲ್ಲಿಸಬಹುದಾಗಿದೆ. ಇವರ ಪೈಕಿ ಜೋರಾಗಿ ಹೀರಿದರೆ ಅವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಒಂದು ವಿಷಯ ಗಮನದಲ್ಲಿ ಇಟ್ಟುಕೊಳ್ಳಿ. ಇದು ಕೆ-ಚೌ (K Chow) ಎನ್ನುವ ನೂಡಲ್ಸ್ ಪ್ರಚಾರಕ್ಕಾಗಿ ಮಾಡಿರುವುದು ಸ್ಪರ್ಧೆ ಅಷ್ಟೇ. ಅದರ ವಿಡಿಯೋ ಲಿಂಕ್ ಕೆಳಗೆ ಇದೆ. ಅದರಲ್ಲಿ ಭಾಗವಹಿಸುವುದು ಹೇಗೆ ಎನ್ನುವುದನ್ನು ತಿಳಿಸಲಾಗಿದೆ.
ಭಾಗವಹಿಸುವುದು ಹೇಗೆ?
ಸವಾಲಿನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿ. ಮಾಸ್ಟರ್‌ಚೌ ಒದಗಿಸಿದ ಸೂಚನೆಗಳನ್ನು ಅನುಸರಿಸಿ. ನಿಮ್ಮ ಸ್ಲರ್ಪ್ ಅನ್ನು ರೆಕಾರ್ಡ್ ಮಾಡಿ. ವೀಡಿಯೊವನ್ನು ಮಾಸ್ಟರ್‌ಚೌಗೆ ಸಲ್ಲಿಸಿ. ಹೀಗೆ ಮಾಡಿದರೆ, ವಿಜೇತರು 5 ಲಕ್ಷ ರೂಪಾಯಿ ಪಡೆಯುತ್ತಾರೆ ಜೊತೆಗೆ, ವಿಜೇತರು ಇತರ ಅತ್ಯಾಕರ್ಷಕ ಉಡುಗೊರೆಗಳೂ ಇವೆ ಎಂದು ಈ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಒಂದು ನಿಮಿಷಗಳ ಅವಕಾಶ ಇದೆ. ಹೇಗೆ ತಿನ್ನಬೇಕು ಎನ್ನುವ ವಿಡಿಯೋ ಕೂಡ ಇದರ ಜೊತೆ ಶೇರ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡುವಂತೆ ತಿಳಿಸಲಾಗಿದೆ.
ಲಿಂಕ್- ಡಿಟೇಲ್ಸ್ ಇಲ್ಲಿದೆ:
