2.4 ಲಕ್ಷ ಸಿಬ್ಬಂದಿಗೆ ಇನ್ಫೋಸಿಸ್ ಗುಡ್ ನ್ಯೂಸ್, ಕೊರೋನಾ ನಡುವೆಯೂ ಬಡ್ತಿ
ಸಿಬ್ಬಂದಿಗೆ ಬಡ್ತಿ ನೀಡಲು ಮುಂದಾದ ಐಟಿ ದಿಗ್ಗಜ/ ಇನ್ಫೋಸಿಸ್ ದಿಟ್ಟ ಹೆಜ್ಜೆ/ ತಡೆಹಿಡಿದಿದ್ದ ಬಡ್ತಿ ಪ್ರಕ್ರಿಯೆಗೆ ಚಾಲನೆ/ ಜ್ಯೂನಿಯರ್ ಹಾಗೂ ಮಧ್ಯಮ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಬಡ್ತಿ
ಬೆಂಗಳೂರು( ಆ. 20) ಕೊರೋನಾ ಆತಂಕದ ನಡುವೆ ಇನ್ಫೋಸಿಸ್ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ಕೊವಿಡ್19 ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟದಿಂದ ತಡೆ ಹಿಡಿದಿದ್ದ ಬಡ್ತಿ ಪ್ರಕ್ರಿಯೆಗೆ ಪುನರ್ ಚಾಲನೆ ನೀಡಲು ಇನ್ಫೋಸಿಸ್ ಮುಂದಾಗಿದೆ. ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ತನ್ನ2.4 ಲಕ್ಷ ಉದ್ಯೋಗಿಗಳಿಗೆ ಸೆಪ್ಟೆಂಬರ್ ತಿಂಗಳ ವೇಳೆಗೆ ಪ್ರಮೋಶನ್ ನೀಡಲಿದೆ.
10 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವ ಹೊಂದಿರುವವರು, ಜ್ಯೂನಿಯರ್ ಹಾಗೂ ಮಧ್ಯಮ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡಲಾಗುತ್ತದೆ ಎಂದು ಇನ್ಫೋಸಿಸ್ ನ ಮಾನವ ಸಂಪನ್ಮೂಲ ಗುಂಪಿನ ಮುಖ್ಯಸ್ಥ ಕೃಷ್ಣ ಶಂಕರ್ ಮಾಹಿತಿ ನೀಡಿದ್ದಾರೆ.
ಎಸ್‌ಬಿಐ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್
ಕಾಗ್ನಿಜಂಟ್, ಕ್ಯಾಪ್ ಜೆಮಿನಿ ಸಂಸ್ಥೆಗಳ ನಂತರ ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಬಡ್ತಿ ಘೋಷಿಸಿದ ಮೊದಲ ಕಂಪನಿ ಸಾಲಿಗೆ ಇನ್ಫೋಸಿಸ್ ಸೇರಿದೆ.
ಇದು ಸಂಬಳ ಹೆಚ್ಚಳ ಪ್ರಕ್ರಿಯೆ ಅಲ್ಲ, ಬದಲಾಗಿ ಉತ್ತಮ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಕಂಪನಿ ಇಂಥ ಕ್ರಮಕ್ಕೆ ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ಲಾಕ್ ಡೌನ್, ಕೊರೋನಾ ನಡುವೆಯೂ ತನ್ನ ಸಿಬ್ಬಂದಿಗೆ ಒಂದು ಸುದ್ದಿಯನ್ನು ಸಂಸ್ಥೆ ನೀಡಿದೆ.