*ಮೇನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದ್ರೂ ಸಗಟು ಹಣದುಬ್ಬರ ತಗ್ಗಿರಲಿಲ್ಲ*ಜೂನ್ ನಲ್ಲಿ ಮತ್ತಷ್ಟು ಇಳಿಕೆ ದಾಖಲಿಸಿದ್ದ ಚಿಲ್ಲರೆ ಹಣದುಬ್ಬರ*ಸತತ 15 ತಿಂಗಳಿಂದ ಶೇ.10ಕ್ಕಿಂತ ಮೇಲಿರುವ ಸಗಟು ಹಣದುಬ್ಬರ

ನವದೆಹಲಿ (ಜು.14): ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಮಾತ್ರವಲ್ಲ, ಸಗಟು ಹಣದುಬ್ಬರ ಕೂಡ ಕೊಂಚ ಮಟ್ಟಿನ ಇಳಿಕೆ ದಾಖಲಿಸಿದೆ. ಜೂನ್ ತಿಂಗಳಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.15.18ರಷ್ಟಿದ್ದು, ಮೇಗೆ ಹೋಲಿಸಿದರೆ ಇಳಿಕೆಯಾಗಿದೆ. ಮೇನಲ್ಲಿ ಸಗಟು ಹಣದುಬ್ಬರ ಶೇ.15.88ರಷ್ಟಿತ್ತು ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿ ಸಗಟು ಹಣದುಬ್ಬರ ಸತತ 15 ತಿಂಗಳಿಂದ ಎರಡಂಕಿಯಲ್ಲಿದೆ. ಅಂದರೆ ಶೇ.10ಕ್ಕಿಂತ ಮೇಲಿದೆ. ಖನಿಜ ತೈಲಗಳು, ಆಹಾರ ಪದಾರ್ಥಗಳು, ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ರಾಸಾಯನಿಕಗಳು ಹಾಗೂ ರಾಸಾಯನಿಕ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಜೂನ್ ನಲ್ಲಿ ಹಣದುಬ್ಬರ ಗರಿಷ್ಠ ಮಟ್ಟದಲ್ಲಿತ್ತು. ಇಂಧನ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಮೇನಲ್ಲಿ ಶೇ.40.62ರಷ್ಟಿದ್ದು, ಜೂನ್ ನಲ್ಲಿ ಶೇ.40.38ಕ್ಕೆ ಇಳಿಕೆಯಾಗಿತ್ತು. ಇನ್ನು ಜೂನ್ ನಲ್ಲಿ ಆಹಾರ ಹಣದುಬ್ಬರ ಶೇ. 12.41ಕ್ಕೆ ಏರಿಕೆಯಾಗಿತ್ತು. ಮೇನಲ್ಲಿ ಆಹಾರ ಹಣದುಬ್ಬರ ಶೇ.10.89ರಷ್ಟಿತ್ತು. ಆಹಾರ ಹಣದುಬ್ಬರದಲ್ಲಿ ತಿಂಗಳಿಂದ ತಿಂಗಳಿಗೆ ಶೇ.1.3ರಷ್ಟು ಏರಿಕೆ ಕಂಡುಬರುತ್ತಿದೆ. ತರಕಾರಿ ಹಣದುಬ್ಬರ ಮೇನಲ್ಲಿ ಶೇ. 56.36ರಷ್ಟಿದ್ದು, ಜೂನ್ ನಲ್ಲಿ ಶೇ.56.75ಕ್ಕೆ ಏರಿಕೆಯಾಗಿತ್ತು. ಇನ್ನು ಸರಕುಗಳ ಉತ್ಪಾದನ ವಲಯದಲ್ಲಿ ಹಣದುಬ್ಬರ ಮೇನಲ್ಲಿ ಶೇ.10.11ರಷ್ಟಿದ್ದು, ಜೂನ್ ನಲ್ಲಿ ಶೇ. 9.19ಕ್ಕೆ ಇಳಿಕೆಯಾಗಿತ್ತು. 

ಚಿಲ್ಲರೆ ಹಣದುಬ್ಬರ ಇಳಿಕೆ
ದೇಶದಲ್ಲಿ ಜೂನ್ (June) ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ (retail inflation) ಕೂಡ ಇಳಿಕೆಯಾಗಿದೆ. ಜೂನ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.01ರಷ್ಟಿದ್ದು, ಹೆಚ್ಚುಕಡಿಮೆ ಮೇ (May) ತಿಂಗಳಷ್ಟೇ ಇದೆ. ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ರಷ್ಟಿತ್ತು. ಚಿಲ್ಲರೆ ಹಣದುಬ್ಬರ ದರ ಸತತ 6 ತಿಂಗಳಿಂದ ಆರ್ ಬಿಐ (RBI) ನಿಗದಿಪಡಿಸಿರುವ ಸಹನಾ ಮಟ್ಟ ಶೇ.6ಕ್ಕಿಂತ ಹೆಚ್ಚಿದೆ. ಹೀಗಾಗಿ ಆಗಸ್ಟ್ ನಲ್ಲಿ ಕೂಡ ಆರ್ ಬಿಐ ರೆಪೋ ದರ (Repo rate) ಹೆಚ್ಚಳ ಮಾಡುವ ಸಾಧ್ಯತೆಯಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಆರ್ ಬಿಐ ಹಣದುಬ್ಬರ ದರ ಶೇ.5.7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದ್ರೆ ಈಗ ಅದನ್ನು ಶೇ.6.7ಕ್ಕೆ ಹೆಚ್ಚಿಸಿದೆ.

Retail Inflation:ಜೂನ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.01ಕ್ಕೆ ಇಳಿಕೆ; ನಗರಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು

ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ಜೂನ್ ನಲ್ಲಿ ರೆಪೋ ದರವನ್ನು ( repo rate) 50 ಮೂಲ ಅಂಕಗಳಷ್ಟು (50 basis points) ಹೆಚ್ಚಿಸಿದೆ. ಇದ್ರಿಂದ ರೆಪೋ ದರ ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ಮೇನಲ್ಲಿ ಕೂಡ ಆರ್ ಬಿಐ ರೆಪೋ ದರದಲ್ಲಿ 40 ಮೂಲ ಅಂಕಗಳಷ್ಟು ಹೆಚ್ಚಳ ಮಾಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿತ್ತು. ಆದ್ರೆ, ಮೇ (May) ಹಾಗೂ ಜೂನ್ (June) ಪ್ರಾರಂಭದಲ್ಲಿ ರೆಪೋ ದರ ಏರಿಕೆ ಮಾಡಿದ್ದರೂ ಚಿಲ್ಲರೆ (Retail) ಹಾಗೂ ಸಗಟು (Wholesale) ಹಣದುಬ್ಬರಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ದಾಖಲಿಸಿಲ್ಲ. 

SBI Charges:ನೀವು ಎಸ್ ಬಿಐ ಗ್ರಾಹಕರೇ? ಹಾಗಿದ್ರೆ ಈ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ

ಜನಸಾಮಾನ್ಯರು ಇನ್ನೂ ಕೆಲವು ತಿಂಗಳ ಕಾಲ ಬೆಲೆಯೇರಿಕೆಯ ಬಿಸಿ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಆರ್ ಬಿಐ (RBI) ರೆಪೋ ದರವನ್ನು (Repo rate) ಇನ್ನೊಮ್ಮೆ ಹೆಚ್ಚಳ ಮಾಡುವ ನಿರೀಕ್ಷೆಯೂ ಹೆಚ್ಚಿದ್ದು. ಬ್ಯಾಂಕುಗಳಿಂದ (Banks) ಗೃಹ ಸಾಲ (Home loan) ಸೇರಿದಂತೆ ವಿವಿಧ ಸಾಲಗಳನ್ನು ಪಡೆದವರ ಮೇಲಿನ ಹೊರೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ.