ಎಲ್ಲರ ಮೇಲೆ ಕೇಸ್ ಹಾಕೋದೇ ಈತನ ಕೋಟಿ ಗಳಿಕೆಗೆೊಂದು ಮಾರ್ಗ!
ಜಗತ್ತಿನ ಜನರು ತಮ್ಮ ಬುದ್ಧಿವಂತಿಕೆಯನ್ನು ಗಳಿಕೆಗೆ ಬಳಸಿಕೊಳ್ತಾರೆ. ಕೆಲವರ ಮಾರ್ಗ ಸೌಮ್ಯವಾಗಿದ್ದರೆ ಮತ್ತೆ ಕೆಲವರ ದಾರಿ ವಿಚಿತ್ರವಾಗಿರುತ್ತದೆ. ಎಲ್ಲರನ್ನು ಬೆರಗುಗೊಳಿಸುವ ಈ ವ್ಯಕ್ತಿ ಕೋರ್ಟ್ ಗೆ ಹೋಗಿಯೇ ಕೋಟಿ ಗಳಿಸಿದ್ದಾನೆ.
ಜನರು ಹಣ ಗಳಿಸಲು ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಲ್ಲರ ಮೊದಲ ಆಯ್ಕೆ. ಮತ್ತೆ ಕೆಲವರು ಚಿತ್ರವಿಚಿತ್ರ ಹವ್ಯಾಸದ ಮೂಲಕ ಹಣ ಗಳಿಸ್ತಾರೆ. ಕೆಲವರು ತಮ್ಮ ಬಳಸಿದ ಒಳ ಉಡುಪು ಮಾರಾಟ ಮಾಡಿದ್ರೆ ಇನ್ನು ಕೆಲವರು ತಮ್ಮ ಮೂತ್ರ, ಹಳೆ ಸಾಕ್ಸ್, ಪಾದದ ಫೋಟೋ ಹೀಗೆ ಏನೇನೋ ಮಾರಾಟ ಮಾಡಿ ಹಣ ಸಂಪಾದನೆ ಮಾಡ್ತಾರೆ. ಆದ್ರೆ ನಾವು ಈಗ ಹೇಳಲಿರುವ ವ್ಯಕ್ತಿ ಮತ್ತಷ್ಟು ಭಿನ್ನವಾಗಿದ್ದಾನೆ. ಬೇರೆಯವರ ಮೇಲೆ ಕೇಸ್ ಹಾಕಿ ಗೆಲ್ಲೋದೆ ಈತನ ಮುಖ್ಯ ಕೆಲಸ. ಇದ್ರಿಂದ ಎಷ್ಟು ಹಣ ಬರುತ್ತೆ ಅಂತಾ ನೀವು ಆಲೋಚನೆ ಮಾಡ್ತಿರಬಹುದು. ಆದ್ರೆ ಈ ವ್ಯಕ್ತಿ ಬೇರೆಯವರ ಮೇಲೆ ಪ್ರಕರಣ ದಾಖಲಿಸಿಯೇ ಕೋಟ್ಯಾಂತರ ರೂಪಾಯಿ ಗಳಿಸಿದ್ದಾನೆ. ಈತನನ್ನು ವಿಶ್ವದ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎಂದೇ ಕರೆಯಲಾಗುತ್ತದೆ.
ಜನರ ಮೇಲೆ ಕೇಸ್ (Case) ಹಾಕಿ ಹಣ ಗಳಿಸುವ ವ್ಯಕ್ತಿ ಯಾರು? : ಈತನ ಹೆಸರು ಜೊನಾಥನ್ ಲೀ (Jonathan Lee) . ಈತ ಅಮೆರಿಕದ ನಿವಾಸಿ. ಈ ವ್ಯಕ್ತಿಯ ಕೆಲಸ ಜಗತ್ತಿನ ಯಾರ ಮೇಲಾದರೂ ಕೇಸು ದಾಖಲಿಸುವುದು. ಈ ಪ್ರಕರಣಗಳಲ್ಲಿ ಅವನು ತನಗೆ ಉಂಟಾದ ತೊಂದರೆಗೆ ಪರಿಹಾರವನ್ನು ಕೋರುತ್ತಾನೆ. ಅವನ ಮುಂದೆ ಯಾವ ಕೆಲಸ ಮಾಡಲೂ ಭಯ. ಯಾಕೆಂದ್ರೆ ನೀವು ಮಾಡಿದ ಕೆಲಸವನ್ನೇ ಆತ ತನ್ನ ಬಂಡವಾಳ (Capital) ಮಾಡಿಕೊಂಡು ನಿಮ್ಮ ವಿರುದ್ಧ ಕೇಸ್ ದಾಖಲಿಸ್ತಾನೆ. ತನ್ನ ತಾಯಿಯನ್ನೂ ಈತ ಬಿಟ್ಟಿಲ್ಲ.
ಅಂಬಾನಿ ಮಗಳನ್ನು ಕೊಟ್ಟಿರೋದು ಅಂತಿಂಥಾ ಮನೆಗಲ್ಲ, ಖ್ಯಾತ ಲಗೇಜ್ ಬ್ರ್ಯಾಂಡ್ ಮುನ್ನಡೆಸುತ್ತೆ ಪಿರಾಮಲ್
ಈತ ಹಾಕಿದ ಕೇಸ್ ಎಷ್ಟು? ಗಳಿಕೆ ಎಷ್ಟು? : ಜೊನಾಥನ್ ಲೀ ನೀವು ಅಂದುಕೊಂಡಷ್ಟು ಸಾಮಾನ್ಯ ವ್ಯಕ್ತಿಯಲ್ಲ. ಕೇಸ್ ಹಾಕೋಕೆ ಎಲ್ಲಿ ಅವಕಾಶ ಸಿಗುತ್ತೆ ಅಂತಾ ಕಾಯ್ತಿರುತ್ತಾನೆ. ಜೊನಾಥನ್ ಲೀ ಈವರೆಗೆ 26೦೦ಕ್ಕೂ ಹೆಚ್ಚು ದೂರು ದಾಖಲಿಸಿದ್ದಾನೆ. ಇದ್ರಲ್ಲೇ ಕೋಟ್ಯಾಂತರ ರೂಪಾಯಿ ಗಳಿಸಿದ್ದಾನೆ. ಪ್ರತಿಯೊಂದು ಕೇಸ್ ನಲ್ಲೂ ಈತ ಸುಮಾರು 55,000 ಡಾಲರ್ ಪಡೆಯುತ್ತಾನೆ. ವಿಕಿಪೀಡಿಯಾ ವಿಶ್ವದ ಅತಿದೊಡ್ಡ ವಂಚಕ ಎಂದು ಈತನನ್ನು ಕರೆದಿದೆ.
ಮೊದಲು ಯಾರ ಮೇಲೆ ಕೇಸ್ ದಾಖಲಿಸಿದ್ದ ಜೊನಾಥನ್ ? : ಜೊನಾಥನ್ ಕೆಲಸ ಶುರುವಾಗಿದ್ದೇ ತಾಯಿ ಮೇಲೆ ಕೇಸ್ ಹಾಕುವ ಮೂಲಕ. ಈತ ಮೊದಲ ಬಾರಿ ತನ್ನ ತಾಯಿ ಮೇಲೆ ಕೇಸ್ ದಾಖಲಿಸಿದ್ದ. ತಾಯಿ ತನ್ನನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂದು ದೂರಿದ್ದ. ಇದ್ರಲ್ಲಿ ಜೊನಾಥನ್ ಲಿ 20 ಸಾವಿರ ಡಾಲರ್ ಹಣವನ್ನು ಗಳಿಸಿದ್ದ. ನಂತ್ರ ತನ್ನ ಸ್ನೇಹಿತರ ಮೇಲೆ ಕೇಸ್ ಹಾಕಿದ್ದ ಜೊನಾಥನ್ ಇದನ್ನೇ ಮುಂದುವರೆಸಿದ. ತನ್ನ ಸಂಬಂಧಿಕರು, ನೆರೆಯವರು, ಪ್ರೇಮಿ, ಪೊಲೀಸ್ ಆಫೀಸರ್, ಕೋರ್ಟ್ ಜಡ್ಜ್ ಅಲ್ಲದೆ ಜಾರ್ಜ್ ಬುಶ್ ವಿರುದ್ಧವೂ ಜೊನಾಥನ್ ಲೀ ಕೇಸ್ ದಾಖಲಿಸಿದ್ದ. ಎಲ್ಲ ಕೇಸ್ ನಲ್ಲಿ 8 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣವನ್ನು ಜೊನಾಥನ್ ಲೀ ಗಳಿಸಿದ್ದಾನೆ. ಕೋರ್ಟ್ ನಲ್ಲಿ ಜಡ್ಜ್ ಸರಿಯಾಗಿ ತೀರ್ಪು ನೀಡಿಲ್ಲವೆಂದ್ರೆ ಅವರ ಮೇಲೂ ಕೇಸ್ ದಾಖಲಿಸುತ್ತಾನೆ ಈತ.
ಈ ಗುರುವಿನ ಅಪ್ಪಣೆ ಇಲ್ಲದೇ ಅಂಬಾನಿ ತನ್ನ ವ್ಯವಹಾರದಲ್ಲಿ ಹುಲ್ಲು ಕಡ್ಡಿಯೂ ಅಲ್ಲಾಡಿಸಲ್ಲ!
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ವಿರುದ್ಧವೂ ಕೇಸ್ (guinness book of world record) : ಜೊನಾಥನ್, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಜಾಗ ಪಡೆದಿದ್ದಾನೆ. ವಿಶ್ವದ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ ವ್ಯಕ್ತಿಯಾಗಿ ಜೊನಾಥನ್ ಹೆಸರನ್ನು ಗಿನ್ನಿಸ್ ಬುಕ್ ನಲ್ಲಿ ಸೇರಿಸಲಾಗಿದೆ. ಆದರೆ ಈ ದಾಖಲೆಗೂ ಜೊನಾಥನ್ ಕೇಸ್ ಹಾಕಿದ್ದಾನೆ. ತನ್ನ ಅನುಮತಿಯಿಲ್ಲದೆ ತನ್ನ ವೈಯಕ್ತಿಕ ಜೀವನದ ಬಗ್ಗೆ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಆರೋಪಿಸಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ವಿರುದ್ಧ ಕೇಸ್ ದಾಖಲಿಸಿದ್ದಾನೆ.