Jio Platforms IPO Day 2 Highlights ರಿಲಯನ್ಸ್ ಸಂಸ್ಥೆಯ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಎರಡನೇ ದಿನವಾದ ಗುರುವಾರವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಲ್ಲರೆ ಹೂಡಿಕೆದಾರರ ಕೋಟಾವು ಬೆಳಗ್ಗೆ 10.45ರ ವೇಳೆಗೆ ಪೂರ್ಣ ಭರ್ತಿಯಾಗಿದೆ.
Jio Platforms IPO Day 2 Highlights: ರಿಲಯನ್ಸ್ ಕಂಪನಿಯ ಜಿಯೋ ಪ್ಲಾಟ್‌ಫಾರ್ಮ್ಸ್ ಲಿ.(JPL)ನ ಐಪಿಒ ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ 100 ನಿಮಿಷಗಳಲ್ಲೇ ಜಿಯೋಪ್ಲಾಟ್‌ಫಾರ್ಮ್ಸ್ ಲಿ. ಐಪಿಒ ಸಂಪೂರ್ಣಾಗಿ ಸಬ್‌ಸ್ಕೈಬ್ (ಚಂದಾದಾರಿಕೆ) ಆಗುವ ಮೂಲಕ ಹೊಸ ದಾಖಲೆ ಬರೆದಿದೆ.
ಜಿಯೋ ಐಪಿಒಗೆ ಯಾಕಿಷ್ಟು ಡಿಮ್ಯಾಂಡ್?
ರಿಲಯನ್ಸ್ ಸಂಸ್ಥೆಯ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಎರಡನೇ ದಿನವಾದ ಗುರುವಾರವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಲ್ಲರೆ ಹೂಡಿಕೆದಾರರ ಕೋಟಾವು ಬೆಳಗ್ಗೆ 10.45ರ ವೇಳೆಗೆ ಪೂರ್ಣ ಭರ್ತಿಯಾಗಿದೆ.
ಇಂದು ಬಿಡ್ಡಿಂಗ್ ಮುಕ್ತಾಯ?
ಒಟ್ಟಾರೆ ಈ ಐಪಿಒಗೆ ಸುಮಾರು 5 ಪಟ್ಟು ಬಿಡ್ ಸಲ್ಲಿಕೆಯಾಗಿದೆ. ಈ ಮೂಲಕ 30,213 ಕೋಟಿ ರು. ಮೌಲ್ಯದ ಈ ಐಪಿಒಗೆ 3.60 ಲಕ್ಷ ಕೋಟಿ ರು.ಗೂ ಹೆಚ್ಚಿನ ಬಿಡ್ ಬಂದಿದೆ. ಈ ಐಪಿಒ ಮೇಲಿನ ಬಿಡ್ಡಿಂಗ್ ಅವಧಿ ಶುಕ್ರವಾರ ಮುಕ್ತಾಯವಾಗಲಿದೆ. ಅ.28ಕ್ಕೆ ಷೇರು ಲಿಸ್ಟ್ ಆಗಲಿದೆ.


