ಷೇರು ಮಾರ್ಕೆಟ್ನಲ್ಲಿ ಧೂಳೆಬ್ಬಿಸಲು ಜಿಯೋ ಮುಂದಾಗಿದೆ. ಶೀಘ್ರವೇ ಜಿಯೋ ಪ್ಲಾಟ್‌ ಫಾರ್ಮ್ಸ್‌ ತನ್ನ ಐಪಿಒ ಲಾಂಚ್‌ ಮಾಡಲು ಸಿದ್ಧವಾಗಿದೆ. ದಿನಾಂಕ ಸೇರಿದಂತೆ ಉಳಿದ ಮಾಹಿತಿ ಇಲ್ಲಿದೆ.

ಷೇರು ಮಾರ್ಕೆಟ್ನಲ್ಲಿ ಐಪಿಒ ಮೂಲಕ ಹಣ ಹೂಡಿಕೆ ಮಾಡಲು ಬಹಳ ದಿನಗಳಿಂದ ಕಾಯ್ತಿರುವ ಹೂಡಿಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಮುಖೇಶ್ ಅಂಬಾನಿ ನೇತೃತ್ವದ ಟೆಲಿಕಾಂ ಕಂಪನಿ ಜಿಯೋ ಪ್ಲಾಟ್ಫಾರ್ಮ್ಸ್ (Jio Platforms) ಶೀಘ್ರದಲ್ಲೇ ತನ್ನ ಐಪಿಒ ಲಾಂಚ್‌ ಗೆ ಸಿದ್ಧವಾಗಿದೆ. ಈ ಐಪಿಒ ಬಂದ್ರೆ ಭಾರತೀಯ ಶೇರ್ ಮಾರ್ಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಪಬ್ಲಿಕ್ ಆಫರಿಂಗ್ ಆಗುವ ಸಾಧ್ಯತೆ ಇದೆ.

ಅಕ್ಟೋಬರ್ 21ಕ್ಕೆ ಜಿಯೋ ಐಪಿಒ ಲಾಂಚ್?

ಪಿಟಿಐ ವರದಿ ಪ್ರಕಾರ, ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ ಅಕ್ಟೋಬರ್ 21ರಂದು ಲಾಂಚ್ ಆಗುವ ಸಾಧ್ಯತೆ ಇದೆ. ಈ ಐಪಿಒ ಮೂಲಕ ಕಂಪನಿ ಸುಮಾರು 3.8 ಬಿಲಿಯನ್ ಡಾಲರ್, ಅಂದರೆ ಈಗಿನ ಎಕ್ಸ್ಚೇಂಜ್ ರೇಟ್ ಪ್ರಕಾರ ಸುಮಾರು 37,000 ರಿಂ 38,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ ಎನ್ನಲಾಗಿದೆ.

ಹೀಗೆ ನಡೆದರೆ, 2024ರಲ್ಲಿ ಹುಂಡೈ ಮೋಟಾರ್ ಇಂಡಿಯಾ ಸೃಷ್ಟಿಸಿದ್ದ ಸುಮಾರು 2.9 ಬಿಲಿಯನ್ ಡಾಲರ್ ಐಪಿಒ ದಾಖಲೆಯನ್ನು ಜಿಯೋ ಸುಲಭವಾಗಿ ಹಿಂದಿಕ್ಕಬಹುದು. ಇತ್ತೀಚೆಗೆ ಎನ್ಎಸ್ಇಯ ಲಿಸ್ಟಿಂಗ್ ಕೂಡ ಸುಮಾರು 2.3 ಬಿಲಿಯನ್ ಡಾಲರ್ ಮೌಲ್ಯದ ಐಪಿಒ ಮೂಲಕ ನಡೆದಿತ್ತು.

ಅಕ್ಟೋಬರ್ 23ರವರೆಗೆ ಬಿಡ್ ಮಾಡಬಹುದೇ?

ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ ಅಕ್ಟೋಬರ್ 21ರಿಂದ ಅಕ್ಟೋಬರ್ 23ರವರೆಗೆ ತೆರೆದಿರುವ ಸಾಧ್ಯತೆ ಇದೆ. ಅಕ್ಟೋಬರ್ 28ರಂದು ಶೇರ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಬಹುದು ಎನ್ನಲಾಗಿದೆ. ಆದರೆ ಈ ದಿನಾಂಕಗಳ ಬಗ್ಗೆ ಕಂಪನಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಪಿಟಿಐ ವರದಿ ಪ್ರಕಾರ, ಜಿಯೋ ಪ್ಲಾಟ್ಫಾರ್ಮ್ಸ್ ಸುಮಾರು 143–146 ಬಿಲಿಯನ್ ಡಾಲರ್, ಅಂದರೆ ಸುಮಾರು ₹12–15 ಲಕ್ಷ ಕೋಟಿ ಮೌಲ್ಯಮಾಪನದಲ್ಲಿ ಲಿಸ್ಟ್ ಆಗುವ ಸಾಧ್ಯತೆ ಇದೆ. ಐಪಿಒ ಮೂಲಕ ಸಂಗ್ರಹವಾಗುವ ಹಣದ ಬಹುಪಾಲನ್ನು ಸಾಲ ತೀರಿಸಲು ಬಳಸುವ ಸಾಧ್ಯತೆ ಇದೆ. ವಿಶೇಷವಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ನ ಸುಮಾರು ₹27,500 ಕೋಟಿ ಬಾಕಿ ಸಾಲವನ್ನು ತೀರಿಸಲು ಈ ಹಣವನ್ನು ಬಳಸುವ ಉದ್ದೇಶವಿದೆ ಎನ್ನಲಾಗಿದೆ. ಅಂದರೆ, ಈ ಐಪಿಒ ಮೂಲಕ ಹೊಸ ಗ್ರೋತ್ ಯೋಜನೆಗಳಿಗೆ ಹಣ ಸಂಗ್ರಹಿಸುವುದಕ್ಕಿಂತ ಕಂಪನಿಯ ಬ್ಯಾಲೆನ್ಸ್ ಶೀಟ್ ಬಲಪಡಿಸುವುದಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

ಜಿಯೋ ಐಪಿಒ ಬಗ್ಗೆ ಹೂಡಿಕೆದಾರರಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿದೆ. ಇನ್ನೂ ಕಂಪನಿ ತನ್ನ ಪ್ರೈಸ್ ಬ್ಯಾಂಡ್ ಘೋಷಿಸಿಲ್ಲ. ಆದರೂ ಗ್ರೇ ಮಾರ್ಕೆಟ್ನಲ್ಲಿ ಜಿಯೋ ಐಪಿಒ ಬಗ್ಗೆ ಚಟುವಟಿಕೆ ಹೆಚ್ಚಾಗಿದೆ. ಇನ್ವೆಸ್ಟರ್ಗೇನ್ ಪ್ರಕಾರ, ಅಕ್ಟೋಬರ್ 6ರ ಬೆಳಗ್ಗೆ ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದ ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ) ₹156ರಷ್ಟಿತ್ತು. ಇದಕ್ಕೂ ಹಿಂದಿನ ದಿನ ₹147 ಮತ್ತು ಅಕ್ಟೋಬರ್ 4ರಂದು ₹148ರಷ್ಟಿತ್ತು ಎನ್ನಲಾಗಿದೆ. ಸಾಮಾನ್ಯವಾಗಿ ಕಂಪನಿ ಶೇರ್ನ ಪ್ರೈಸ್ ಬ್ಯಾಂಡ್ ಘೋಷಿಸಿದ ನಂತರವೇ ಐಪಿಒದ ಜಿಎಂಪಿ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಗಲಿದೆ. ಆದರೆ ಪ್ರೈಸ್ ಬ್ಯಾಂಡ್ ಘೋಷಣೆಯಾಗುವ ಮೊದಲೇ ₹147–₹156ರಷ್ಟು ಜಿಎಂಪಿ ಕಾಣಿಸಿಕೊಳ್ಳುತ್ತಿರುವುದು, ಅನ್ಲಿಸ್ಟೆಡ್ ಮಾರ್ಕೆಟ್ನಲ್ಲಿ ಈ ಶೇರ್ಗೆ ಹೂಡಿಕೆದಾರರು ಮತ್ತು ಬ್ರೋಕರ್ಗಳ ನಡುವೆ ಸಾಕಷ್ಟು ಬೇಡಿಕೆ ಇರುವುದನ್ನು ಸೂಚಿಸುತ್ತದೆ.