Asianet Suvarna News Asianet Suvarna News

Jharkhand Petrol Price Cut : ದೆಹಲಿ ಬಳಿಕ ಜಾರ್ಖಂಡ್ ಸರದಿ; ಪೆಟ್ರೋಲ್ ಬೆಲೆಯಲ್ಲಿ 25ರೂ. ಇಳಿಕೆ

*ಪೆಟ್ರೋಲ್ ಇಳಿಕೆ ಲಾಭ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಲಭ್ಯ
*ಹೊಸ ದರ 2022ರ ಜನವರಿ 26ರಿಂದ ಅನುಷ್ಠಾನಕ್ಕೆ ಬರಲಿದೆ
*ಸೋರೆನ್ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಘೋಷಣೆ 

Jharkhand govt to slash petrol price by Rs 25 per liter anu
Author
Bangalore, First Published Dec 29, 2021, 6:41 PM IST

ರಾಂಚಿ(ಡಿ.29) : ಜಾರ್ಖಂಡ್ ನಲ್ಲಿ( Jharkhand) ಪೆಟ್ರೋಲ್(Petrol) ಬೆಲೆಯಲ್ಲಿ 25ರೂ. ಇಳಿಕೆ ಮಾಡಿರೋದಾಗಿ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಬುಧವಾರ (ಡಿ.29) ಘೋಷಿಸಿದ್ದಾರೆ. ಹೊಸ ದರವು 2022ರ ಜನವರಿ 26ರಿಂದ ಅನುಷ್ಠಾನಕ್ಕೆ ಬರಲಿದ್ದು, ದ್ವಿಚಕ್ರ ವಾಹನಗಳಿಗೆ(Two wheelers) ಮಾತ್ರ ಅನ್ವಯಿಸಲಿದೆ. ಅಲ್ಲದೆ, ಬಿಪಿಎಲ್ ಕಾರ್ಡ್(BPL card) ಹೊಂದಿರೋರು ಮಾತ್ರ ಪೆಟ್ರೋಲ್ ಇಳಿಕೆಯ ಲಾಭ ಪಡೆಯಲಿದ್ದಾರೆ.

ಸೋರೆನ್ ನೇತೃತ್ವದ ಸರ್ಕಾರ ಇಂದು (ಡಿ.29) ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಪೆಟ್ರೋಲ್ ಇಳಿಕೆಯ ಮಾಹಿತಿಯನ್ನು ಟ್ವಿಟ್ಟರ್ ನಲ್ಲಿ (Twitter) ಹೇಮಂತ್ ಸೋರೆನ್ ಪರವಾಗಿ ಮುಖ್ಯಮಂತ್ರಿ ಕಚೇರಿ ಹಂಚಿಕೊಂಡಿದೆ. ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ ಗಗನಕ್ಕೇರಿದ್ದು, ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರ ಜೇಬಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಡ ವಾಹನ ಸವಾರರ ಮೇಲಿನ ಪೆಟ್ರೋಲ್ ಬೆಲೆಯೇರಿಕೆ ಹೊರೆಯನ್ನು ತಗ್ಗಿಸೋ ಉದ್ದೇಶದಿಂದ ಜಾರ್ಖಂಡ ಸರ್ಕಾರ ಈ ಕ್ರಮ ಕೈಗೊಂಡಿದೆ. ಜಾರ್ಖಂಡ್ ದಲ್ಲಿ ಪ್ರಸ್ತುತ ಪೆಟ್ರೋಲ್ ಲೀಟರ್ ಗೆ 98.48ರೂ. ಇದ್ದು, 25ರೂ. ಇಳಿಕೆ ಬಳಿಕ 73ರೂ. ತಲುಪಲಿದೆ.  

ಒಂದಕ್ಕಿಂತ ಹೆಚ್ಚು PAN Card ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ!

ಡಿಸೆಂಬರ್ 1ರಂದು ದೆಹಲಿ (Delhi)ಸರ್ಕಾರ ಪೆಟ್ರೋಲ್ (Petrol)ಮೇಲಿನ ವ್ಯಾಟ್ (VAT) ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಕೆ ಮಾಡಿದೆ.  ಇದ್ರಿಂದ ರಾಷ್ಟ್ರ ರಾಜ್ಯಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ.ಇಳಿಕೆಯಾಗಿದೆ. ಪಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 95.41 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 86.67ರೂ. ಇದೆ. ದೇಶದಲ್ಲಿ ಇತರ ಮಹಾನಗರಗಳಿಗೆ ಹೋಲಿಸಿದ್ರೆ ಮುಂಬೈಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿದೆ. ಮುಂಬೈಯಲ್ಲಿ(Mumbai) ಪೆಟ್ರೋಲ್ ದರ ಲೀಟರ್ ಗೆ 109.98ರೂ. ಇದ್ರೆ, ಡೀಸೆಲ್ ದರ ಲೀಟರ್ ಗೆ 94.14ರೂ. ಇದೆ. 

ದೀಪಾವಳಿ ಸಂದರ್ಭದಲ್ಲಿ ಅಂದ್ರೆ ನವೆಂಬರ್ 4ರಂದು ಕೇಂದ್ರ ಸರ್ಕಾರ (Central Government) ಪೆಟ್ರೋಲ್ (Petrol) ಹಾಗೂ ಡೀಸೆಲ್  (Diesel) ಮೇಲಿನ ಅಬಕಾರಿ ಸುಂಕ(excise duty )ಕಡಿತಗೊಳಿಸಿದ ಕಾರಣ ದೇಶಾದ್ಯಂತ ಗಣನೀಯ ಏರಿಕೆ ದಾಖಲಿಸಿದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಆ ಬಳಿಕ ಅಂದ್ರೆ ಸುಮಾರು ಎರಡು ತಿಂಗಳಿಂದ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Income Tax Return:ಡಿ.31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ? ಎಷ್ಟು ದಂಡ ಬೀಳುತ್ತೆ?

ಪೆಟ್ರೋಲ್ ಹಾಗೂ ಡೀಸೆಲ್ ದರ ದೇಶಾದ್ಯಂತ ಒಂದೇ ಆಗಿರೋದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರಗಳು ಇಂಧನದ ಮೇಲೆ ವಿಧಿಸೋ ತೆರಿಗೆಗಳು ಹಾಗೂ ವ್ಯಾಟ್. ಎಷ್ಟು ಶೇಕಡ ವ್ಯಾಟ್ ವಿಧಿಸಲಾಗಿದೆ ಎಂಬುದರ ಆಧಾರದ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಜೊತೆಗೆ ಡೀಲರ್ ಗಳ ಕಮೀಷನ್ ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ಸರ್ಕಾರಗಳು ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕುತ್ತವೆ. ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿದಿನ ಪರಿಷ್ಕರಣೆಗೊಳಪಡುತ್ತದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್( Indian Oi), ಭಾರತ್ ಪೆಟ್ರೋಲಿಯಂ(Bharat Petroleum) ಹಾಗೂ ಹಿಂದೂಸ್ತಾನ ಪೆಟ್ರೋಲಿಯಂ( Hindustan Petroleum) ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡುತ್ತವೆ. 
 

Follow Us:
Download App:
  • android
  • ios