ಕೇರಳದಲ್ಲಿ ವ್ಯಾಪಾರಿಗಳ ನಡುವೆ ಭಿನ್ನಾಭಿಪ್ರಾಯ24 ಗಂಟೆಯಲ್ಲಿ ದೊಡ್ಡ ಪ್ರಮಾಣದಲ್ಲ ಕುಸಿದ ಚಿನ್ನದ ದರ1 ಗ್ರಾಂ 22 ಕ್ಯಾರಟ್ ಚಿನ್ನದ ದರದಲ್ಲಿ 130 ರೂಪಾಯಿ ಕುಸಿತ

ತಿರುವನಂತಪುರಂ (ಫೆ.16): ವ್ಯಾಪಾರಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ (Disaggrement among merchants) ಕೇರಳದ ಚಿನ್ನ ಮಾರುಕಟ್ಟೆಯಲ್ಲಿ (Kerala Gold Market) ದೊಡ್ಡ ಮಟ್ಟದ ಬದಲಾವಣೆಯಾಗಿದೆ. ಕಳೆದ 24 ಗಂಟೆಗಳಲ್ಲಿ 22 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 130 ರೂಪಾಯಿ ಇಳಿಕೆಯಾಗಿದ್ದು, ಒಂದು ಪವನ್ ನ (Pavan) ಮೇಲೆ 1040 ರೂಪಾಯಿ ಇಳಿಕೆ ಆದಂತಾಗಿದೆ. ಗ್ರಾಹಕರಿಂದ ಹಳೆಯ ಚಿನ್ನವನ್ನು ಖರೀದಿಸುವ ಬಗ್ಗೆ ಕೇರಳದ ಚಿನ್ನದ ವ್ಯಾಪಾರಿಗಳ ನಡುವೆ ಭಿನ್ನಾಭಿಪ್ರಾಯ ಉಲ್ಬಣಿಸಿದ್ದರಿಂದ ಕೆಲವು ವ್ಯಾಪಾರಿಗಳು ಇಂದು ಚಿನ್ನದ ಮಾರಾಟದ ಬೆಲೆಯನ್ನು ಕಡಿಮೆ ಮಾಡಿದ್ದಾರೆ.

22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 130 ರೂಪಾಯಿ ಕಡಿಮೆಯಾಗಿದ್ದರೆ, ಒಂದು ಪವನ್ ಅಂದರೆ 8 ಗ್ರಾಂ ಚಿನ್ನದ ಮೇಲೆ 1040 ರೂಪಾಯಿ ಕಡಿಮೆಯಾಗಿದೆ. "ಹಿಂದಿನ ದಿನ ರಾಜ್ಯದ ಪ್ರಮುಖ ಆಭರಣ ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚಿನ ಬೆಲೆಗೆ ಹಳೆಯ ಚಿನ್ನವನ್ನು ಖರೀದಿಸುವುದಾಗಿ ಘೋಷಿಸಿದರು. ಇದು ಆಭರಣ ವ್ಯಾಪಾರಿಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿತು ಮತ್ತು ಕೆಲವರು ಮಾರಾಟದ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದರು. ಏತನ್ಮಧ್ಯೆ, ಎಲ್ಲಾ ಕೇರಳ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳ ಸಂಘವು ( All Kerala Gold and Silver Merchants association) ನಿರ್ಧರಿಸಿದ ಬೆಲೆ ರೂ. ಒಂದು ಗ್ರಾಂಗೆ 4620 ಆಗಿದೆ" ಎಂದು ಸಂಘದ ಪದಾಧಿಕಾರಿ (office bearer of the association) ಅಬ್ದುಲ್ ನಾಸರ್ (Abdul Nasar) ತಿಳಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಪ್ರತಿಯೊಂದು ಆಭರಣ ಮಳಿಗೆಗಳೂ ಬೆಲೆ ಇಳಿಕೆ ಮಾಡಿಲ್ಲ. ಬೆಲೆಯಲ್ಲಿನ ಈ ಕುಸಿತವು ಕ್ಷೇತ್ರದ ಕೆಲವು ಪ್ರಮುಖ ಅಭರಣ ಮಳಿಗೆದಾರರ ನಡುವಿನ ತೀವ್ರ ಪೈಪೋಟಿಯ ಫಲಿತಾಂಶವೆಂದು ಪರಿಗಣಿಸಲಾಗಿದೆ. ಜೋಸ್ಕೋ (Josco ) ಮತ್ತು ಮಲಬಾರ್ ಜ್ಯುವೆಲರ್ಸ್‌ನಂತಹ (Malabar Jewellers ) ಕೆಲವು ಆಯ್ದ ಆಭರಣ ಮಳಿಗೆಗಳು ಕೇರಳ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳ ಅಸೋಸಿಯೇಷನ್ (Kerala Gold and Silver Merchants association)ನಿಗದಿಪಡಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ.

Gold Silver Price : ದೇಶಾದ್ಯಂತ ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ
22ಕ್ಯಾರೆಟ್ ಚಿನ್ನ ಬುಧವಾರ ಬೆಳಗ್ಗೆ 60 ರೂಪಾಯಿ ಇಳಿಕೆಯಾಗಿ ಒಂದು ಗ್ರಾಂಗೆ 4,620 ರೂಪಾಯಿಗಳಿಗೆ ತಲುಪಿದೆ. ಆದರೆ, ಮಧ್ಯಾಹ್ನದ ವೇಳೆಗೆ ಮಲಬಾರ್ ಗೋಲ್ಡ್ ಮತ್ತು ಜೋಸ್ಕೋ ಜ್ಯುವೆಲರ್ಸ್ ನಲ್ಲಿ ಚಿನ್ನ 4,550 ರೂಪಾಯಿ ಆಗಿದ್ದವು. ಇದರೊಂದಿಗೆ ಚಿನ್ನದ ಬೆಲೆ ಪ್ರತಿ ಗ್ರಾಂಗೆ 70 ರೂಪಾಯಿ ಇಳಿಕೆ ಆದಂತಾಗಿದೆ.

ಬೆಲೆ ಕಡಿತದ ಬಗ್ಗೆ ಆಭರಣ ವ್ಯಾಪಾರಿಗಳಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ. ಆದರೆ ಅವರು ತಮ್ಮ ಆಭರಣ ಮಳಿಗೆಗಳಲ್ಲಿ ಚಿನ್ನಕ್ಕೆ ಕಡಿಮೆ ಬೆಲೆಯನ್ನು ವಿಧಿಸಲಾಗುವುದು ಎಂದು ಹೇಳಿದೆ. 'ಬೆಳಿಗ್ಗೆ ಚಿನ್ನದ ಬೆಲೆ 4,620 ರೂಪಾಯಿ ಇದ್ದರೆ.. ನಂತರ ಬೆಲೆಯನ್ನು 4550ಕ್ಕೆ ಇಳಿಸಲು ಸೂಚಿಸಲಾಯಿತು. ಇದರಿಂದ ಬೆಲೆ ಇಳಿಕೆಯಾಗಿದೆ,'' ಎಂದು ತಿರುವನಂತಪುರಂನಲ್ಲಿರುವ ಜೋಸ್ಕೋ ಜ್ಯುವೆಲ್ಲರಿ ಉದ್ಯೋಗಿ (employee of Josco Jewelery) ತಿಳಿಸಿದ್ದಾರೆ.

Bappi Lahari Assets: ಏಳೆಂಟು ಚಿನ್ದದ ಸರ ಹಾಕ್ತಿದ್ದ ಸಂಗೀತಗಾರನ ಆಸ್ತಿಯೆಷ್ಟು?
ಸೋಮವಾರ ಸಾವರ್ಜಿನ್ ಚಿನ್ನದ ಬೆಲೆ 37, 440 ರೂಪಾಯಿ ಆಗಿದ್ದವು. ಬುಧವಾರ ಇದೇ 22 ಕ್ಯಾರಟ್ ಸಾವರ್ಜಿನ್ ಚಿನ್ನದ ಬೆಲೆ 36, 960 ರೂಪಾಯಿ ಆಗಿದೆ. ಇದರಿಂದಾಗಿ ಪ್ರತಿ ಗ್ರಾಂ ಚಿನ್ನ ಬೆಲೆ 4550 ರೂಪಾಯಿ ಆಗಿದೆ. ಇನ್ನು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಇಂದು 18 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಂಗೆ 3820 ರೂಪಾಯಿ ಆಗಿದೆ. ಮಂಗಳವಾರ ಇದರ ಬೆಲೆಗೆ 3865 ರೂಪಾಯಿ ಆಗಿತ್ತು.