ಜೆಟ್ ಏರ್ ವೇಸ್ ಸಂಪೂರ್ಣ ದಿವಾಳಿ
ಸಾಲದಲ್ಲಿರುವ ಜೆಟ್ ಏರ್‌ವೇಸ್ ಅನ್ನು ದಿವಾಳಿ ಪ್ರಕ್ರಿಯೆಗೆ ಗುರಿಪಡಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ ಸಮ್ಮತಿ ನೀಡಿದೆ.
ಮುಂಬೈ [ಜೂ.21]: ಸಾವಿರಾರು ಕೋಟಿ ರು. ಸಾಲದಲ್ಲಿರುವ ಜೆಟ್ ಏರ್‌ವೇಸ್ ಅನ್ನು ದಿವಾಳಿ ಪ್ರಕ್ರಿಯೆಗೆ ಗುರಿಪಡಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ ಗುರುವಾರ ಸಮ್ಮತಿ ನೀಡಿದೆ.
ಈ ಕುರಿತು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಮಾಡಿದ್ದ ಮನವಿಯನ್ನು ಪುರಸ್ಕರಿಸಿದೆ. ಅಲ್ಲದೆ ಇದನ್ನು ರಾಷ್ಟ್ರೀಯ ಮಹತ್ವದ ಪ್ರಕರಣ ಎಂದು ಪರಿಗಣಿಸಿರುವ ಎನ್‌ಸಿಎಲ್‌ಟಿ, ದಿವಾಳಿ ಪ್ರಕ್ರಿಯೆ ಪೂರ್ಣಕ್ಕೆ 90 ದಿನಗಳ ಗಡುವು ನೀಡಿದೆ.
ಜೆಟ್ ಷೇರು ಖರೀದಿಗೆ ಯಾವುದೇ ಕಂಪನಿಗಳ ಮುಂದೆ ಬರದ ಹಿನ್ನೆಲೆಯಲ್ಲಿ ತಾವು ಹೊಂದಿರುವ 8000 ಕೋಟಿ ರು. ಸಾಲ ವಸೂಲಿಗೆ ಬ್ಯಾಂಕ್‌ಗಳು ಈ ಕ್ರಮ ಕೈಗೊಂಡಿವೆ.