Asianet Suvarna News Asianet Suvarna News

Jet Airways:ಕಳೆದ ತ್ರೈಮಾಸಿಕದಲ್ಲಿ ಜೆಟ್ ಏರ್ ವೈಸ್ ಗೆ 233.63 ಕೋಟಿ ರೂ. ನಿವ್ವಳ ನಷ್ಟ

*ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿರುವ ಜೆಟ್ ಏರ್ ವೈಸ್
*ನಾಗರಿಕ ವಿಮಾನಯಾನ ಸಚಿವಾಲಯದಿಂದ ಈಗಾಗಲೇ ಸೆಕ್ಯುರಿಟಿ ಕ್ಲಿಯರೆನ್ಸ್ ಪಡೆದಿರುವ ಜೆಟ್ ಏರ್ ವೈಸ್
*ಭಾರತದ ವಿಮಾನಯಾನ ನಿಯಂತ್ರಕರ ಅನುಮತಿ ಬಾಕಿ
 

Jet Airways posts Rs 234 crore loss in March quarter
Author
Bangalore, First Published May 27, 2022, 6:04 PM IST

ನವದೆಹಲಿ (ಮೇ 27): ಕಳೆದೆರಡು ವರ್ಷಗಳಿಂದ ವಿಮಾನ ಹಾರಾಟ ನಿಲ್ಲಿಸಿರುವ ಜೆಟ್ ಏರ್ ವೈಸ್ (Jet Airways) ಕಳೆದ ತ್ರೈಮಾಸಿಕದಲ್ಲಿ (ಮಾರ್ಚ್ ಗೆ ಅಂತ್ಯವಾದ ಕಳೆದ ಮೂರು ತಿಂಗಳಲ್ಲಿ) 233.63 ಕೋಟಿ ರೂ. ನಿವ್ವಳ ನಷ್ಟ (Net loss) ಅನುಭವಿಸಿರುವುದಾಗಿ ಗುರುವಾರ ತಿಳಿಸಿದೆ. 

ನಿಯಂತ್ರಕರಿಗೆ (Regulator) ಸಲ್ಲಿಸಿದ ಮಾಹಿತಿಯಲ್ಲಿ ಕಳೆದ ವರ್ಷ 107.01ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿರುವುದಾಗಿ ಜೆಟ್ ಏರ್ ವೈಸ್ (Jet Airways) ತಿಳಿಸಿತ್ತು. ಕಳೆದ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಈ ಸಂಸ್ಥೆಯ ಒಟ್ಟು ಆದಾಯ 11.63 ಕೋಟಿ ರೂ. ಇತ್ತು. ಅದಕ್ಕೂ ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 17.73 ಕೋಟಿ ರೂ. ಆದಾಯ ತೋರಿಸಿತ್ತು. 

ಸ್ಟೈಸ್ ಜೆಟ್ ಹಾಗೂ ಇಂಡಿಗೋ ಮೇಲೆ ಕಳಪೆ ಸರ್ವೀಸ್ ನ ಗರಿಷ್ಠ ದೂರು!

ಪ್ರಸ್ತುತ ಮೇಲ್ವಿಚಾರಣಾ ಸಮಿತಿ (monitoring committee) ಜೆಟ್ ಏರ್ ವೈಸ್  ನಿರ್ವಹಣೆ ನೋಡಿಕೊಳ್ಳುತ್ತಿದೆ. 'ಜೆಟ್ ಏರ್ ವೈಸ್ ಸಂಸ್ಥೆಯ ಕ್ರೋಡೀಕೃತ ಹಣಕಾಸು ಫಲಿತಾಂಶಗಳನ್ನು ನೀಡುವ ಸ್ಥಿತಿಯಲ್ಲಿ ನಿರ್ವಹಣಾ ಸಮಿತಿ ಇಲ್ಲ. ಕಂಪನಿಯ ಅಂಗಸಂಸ್ಥೆಗಳು ಪ್ರತ್ಯೇಕ ಕಾನೂನು ಮಾನ್ಯತೆಗಳನ್ನು ಹೊಂದಿವೆ. ಅಲ್ಲದೆ, ಪ್ರಸ್ತುತ ಅವು ಕಾರ್ಯನಿರ್ವಹಿಸುತ್ತಿಲ್ಲ ಕೂಡ. ಅಲ್ಲದೆ, ಈ ಅಂಗಸಂಸ್ಥೆಗಳಿಂದ ಸಂಬಂಧಿತ ಮಾಹಿತಿ ಕಲೆಹಾಕುವಲ್ಲಿ ಈ ತಂಡ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ' ಎಂದು ವಾಯುಯಾನ ನಿಯಂತ್ರಕರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ದಿವಾಳಿತನದ ನಿರ್ಣಯ ಪ್ರಕ್ರಿಯೆ ಅಡಿಯಲ್ಲಿ ಜೆಟ್ ಏರ್ ವೈಸ್ ಖರೀದಿ ಬಿಡ್ (Bid) ಅನ್ನು ಜಲನ್ ಕಾಲ್ರಾಕ್ 2019ರ ಜೂನ್ ನಲ್ಲಿ ಜಲನ್ ಕಾಲ್ರಾಕ್ ಕಾನ್ಸೋರ್ಟಿಮ್  (Jalan-Kalrock consortium) ಜಯಿಸಿತ್ತು.ಆರ್ಥಿಕ ಮುಗ್ಗಟ್ಟಿನಿಂದ 2019ರ ಏಪ್ರಿಲ್ ನಲ್ಲಿ  ಜೆಟ್ ಏರ್ ವೈಸ್  ಸಂಸ್ಥೆ ಮುಚ್ಚಲ್ಪಟ್ಟಿತ್ತು. ಜೆಟ್‌ ಏರ್‌ವೇಸ್‌ ಸುಮಾರು 8 ಸಾವಿರ ಕೋಟಿ ರು. ಸಾಲವನ್ನು ಬ್ಯಾಂಕ್‌ಗಳಿಗೆ (Banks) ಕಟ್ಟಬೇಕಿತ್ತು. ಕಂಪನಿಗೆ ಮರುಜೀವ ನೀಡುವ ಮಹತ್ವದ ಸಾಲ ತೀರುವಳಿ ಕ್ರಮಗಳ ಯೋಜನೆಗೆ ಜೆಟ್‌ ಏರ್‌ವೇಸ್‌ ಸಾಲಗಾರರ ಸಮಿತಿ (ಸಿಇಸಿ), 2020ರ ಅಕ್ಟೋಬರ್ ನಲ್ಲಿ ಅಂಗೀಕಾರ ನೀಡಿತ್ತು. 

ಜೆಟ್ ಏರ್ ವೇಸ್ ಹೊಸ ರೂಪದಲ್ಲಿ ಮತ್ತೆ ಅಗಸಕ್ಕೆ ಜಿಗಿಯಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಜಲನ್ ಕಾಲ್ರಾಕ್ ಈಗಾಗಲೇ ಪ್ರಕ್ರಿಯೆಗಳನ್ನು ಆರಂಭಿಸಿದೆ. ಕಳೆದ ವರ್ಷದ ಡಿಸೆಂಬರ್ 13ರಂದು ಹಾರಾಟಕ್ಕಾಗಿ ಸೆಕ್ಯುರಿಟಿ ಕ್ಲಿಯರೆನ್ಸ್ (Security clearance) ಕೋರಿ ಜೆಟ್ ಏರ್ ವೈಸ್ ಅರ್ಜಿ ಸಲ್ಲಿಸಿತ್ತು. ಈ ತಿಂಗಳ ಆರಂಭದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ಗೃಹ ಸಚಿವಾಲಯದ (Home Ministry) ಒಪ್ಪಿಗೆ ಮೇರೆಗೆ ಜೆಟ್ ಏರ್ ವೈಸ್ ಗೆ ಸೆಕ್ಯುರಿಟಿ ಕ್ಲಿಯರೆನ್ಸ್ (Security clearance) ನೀಡಿದೆ. ಇನ್ನು ಜೆಟ್ ಏರ್‌ ವೈಸ್ ಹಾರಾಟ ಪ್ರಾರಂಭಿಸಲು ಭಾರತದ ವಿಮಾನಯಾನ ನಿಯಂತ್ರಕರಿಂದ ಅನುಮತಿ ಪಡೆಯಬೇಕಿದೆ. 

Privatization OF Banks:ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಚುರುಕು; ಆ ಎರಡು ಬ್ಯಾಂಕುಗಳು ಯಾವುವು?

ಈ ತಿಂಗಳ ಮೊದಲ ವಾರ ಜೆಟ್ ಏರ್ ವೈಸ್ 2.0 ಹೈದರಾಬಾದ್ ನಲ್ಲಿ (Hyderabad) ತನ್ನ ಮೊದಲ ಪರೀಕ್ಷಾರ್ಥ ವಿಮಾನ ಹಾರಾಟ ನಡೆಸಿತ್ತು. ಇನ್ನು ಕಳೆದ ತಿಂಗಳು  ಜೆಟ್ ಏರ್ ವೈಸ್ ವಿಸ್ತಾರ (Vistara) ಸಂಸ್ಥೆಯ ಮಾಜಿ ಮುಖ್ಯ ಯೋಜನೆ ಹಾಗೂ ವಾಣಿಜ್ಯ ಅಧಿಕಾರಿ ಸಂಜೀವ್ ಕಪೂರ್ (Sanjeev Kapoor) ಅವರನ್ನು ತನ್ನ ಸಿಇಒ (CEO) ಆಗಿ ನೇಮಕ ಮಾಡಿತ್ತು. ಪ್ರಸ್ತುತ ಜೆಟ್ ಏರ್ ವೈಸ್ ನಲ್ಲಿ 150ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸೆಕ್ಯುರಿಟಿ ಕ್ಲಿಯರೆನ್ಸ್ ಸಿಕ್ಕ ಬೆನ್ನಲ್ಲೇ ಜೆಟ್ ಏರ್ ವೈಸ್ 4 ಹಿರಿಯ ಅಧಿಕಾರಿಗಳನ್ನು ನೇಮಿಸಿಕೊಂಡಿದೆ. 
 

Latest Videos
Follow Us:
Download App:
  • android
  • ios