ಮುಂಬೈ[ಜೂ.27]: ಜಪಾನ್‌ ಮೂಲದ ಬಹುರಾಷ್ಟ್ರೀಯ ಕಂಪನಿ ಸುಮಿಟಾಮೊ ಕಾರ್ಪೊರೇಷನ್‌, ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 3 ಎಕರೆ ಭೂಮಿಗೆ ಖರೀದಿಗೆ ನಿರ್ಧರಿಸಿದೆ. ಇದಕ್ಕಾಗಿ ಅದು ಭರ್ಜರಿ 2238 ಕೋಟಿ ರು. ಬಿಡ್‌ ಮಾಡಿದೆ.

ಸೆಂಟ್ರಲ್‌ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಜಾಗವಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈ ಮೆಟ್ರೋಪಾಲಿಟನ್‌ ಪ್ರಾಂತ್ಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕಾರಿ ದಿಲೀಪ್‌ ಕವತ್ಕಾರ್‌ ಅವರು, ‘ಜಮೀನು ಖರೀದಿಗೆ ಜಪಾನ್‌ ಕಂಪನಿ ಬಿಡ್‌ ಸಲ್ಲಿಕೆ ಮಾಡಿದೆ.

ಆದಾಗ್ಯೂ, ಈ ಬಗ್ಗೆ ಪರಿಶೀಲನೆ ಕೈಗೊಂಡು, ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತೇವೆ. ಇದಕ್ಕೆ ನಿರ್ದಿಷ್ಟಕಾಲಮಿತಿ ಇರುವುದಿಲ್ಲ’ ಎಂದು ತಿಳಿಸಿದ್ದಾರೆ. ಈ ಪ್ರಕಾರ ಒಂದು ವೇಳೆ ಜಪಾನ್‌ ಕಂಪನಿ ಈ ಜಮೀನನ್ನು ಖರೀದಿಸಿದ್ದೆ ಆದಲ್ಲಿ, ಪ್ರತೀ ಎಕರೆ ಭೂಮಿಗೆ ಕನಿಷ್ಠ 745 ಕೋಟಿ ರು. ನೀಡಿ ಖರೀದಿಸಿದಂತಾಗಲಿದೆ.