Asianet Suvarna News Asianet Suvarna News

ಚಂದ್ರನತ್ತ ಪ್ರವಾಸ: ಈ ರಾಕೆಟ್‌ನಲ್ಲಿ ನಿಮಗಾಗದು ಆಯಾಸ!

ಚಂದ್ರನ ಸುತ್ತ ಪ್ರವಾಸ ಕೈಗೊಳ್ಳಲು ಯೋಜನೆ! ಸ್ಪೇಸ್ ಎಕ್ಸ್ ಕಂಪನಿಯಿಂದ ಹೊಸ ಯೋಜನೆ ಘೋಷಣೆ! ಬೃಹತ್ ಉಡ್ಡಯನ ವಾಹಕವಾದ ಬಿಗ್ ಫಾಲ್ಕನ್ ರಾಕೆಟ್! ಹೊಸ ಯೋಜನೆ ಘೋಷಿಸಿದ ಸಿಇಒ ಎಲೊನ್ ಮಸ್ಕ್ 

SpaceX Announces New Plan To Send Tourist Around Moon
Author
Bengaluru, First Published Sep 14, 2018, 1:36 PM IST

ಲಾಸ್ ಎಂಜಲೀಸ್(ಸೆ.14): ಖಗೋಳ ಇತಿಹಾಸದಲ್ಲಿ ಚಂದ್ರನ ಮೇಲೆ ಕಾಲಿಟ್ಟವರು ಇದುವರೆಗೆ 24 ಮಂದಿ ಮಾತ್ರ. ಆದರೆ ಇದೀಗ ಬಾಹ್ಯಾಕಾಶದ ಆಳವಾದ ಜಾಗಕ್ಕೆ ಹೋಗುವ ಕನಸು ಕಾಣುತ್ತಿರುವವರನ್ನು ಹೊತ್ತೊಯ್ಯಲು ವೇದಿಕೆ ಸಿದ್ದವಾಗುತ್ತಿದೆ.

ಬೃಹತ್ ಉಡ್ಡಯನ ವಾಹಕವಾದ ಬಿಗ್ ಫಾಲ್ಕನ್ ರಾಕೆಟ್(ಬಿಎಫ್ಆರ್) ಮೂಲಕ ಪ್ರವಾಸಿಗರನ್ನು ಚಂದ್ರನ ಸುತ್ತ ಕರೆದೊಯ್ಯಲು ಸ್ಪೇಸ್ ಎಕ್ಸ್ ಕಂಪನಿ ಯೋಜನೆ ಸಿದ್ದಪಡಿಸಿದೆ. ಚಂದ್ರನ ಸುತ್ತ ಕರೆದೊಯ್ಯುವ ಖಾಸಗಿ ಅಂತರಿಕ್ಷ ಪ್ರಯಾಣಕ್ಕೆ ವಿಶ್ವದಲ್ಲಿ ಮೊದಲ ಬಾರಿಗೆ ಬಿಎಫ್ಆರ್ ವಾಹಕದ ಮೂಲಕ ಕರೆದೊಯ್ಯಲು ಸಿದ್ಧತೆ ನಡೆದಿದೆ ಎಂದು ಕಂಪನಿ ಟ್ವೀಟ್ ಮಾಡಿದೆ.

ಅಂತರ್ಜಾಲ ಉದ್ಯಮಿ ಮತ್ತು ಟೆಸ್ಲಾ ಎಲೆಕ್ಟ್ರಿಕ್ ಕಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲೊನ್ ಮಸ್ಕ್ ನೇತೃತ್ವದ ಕ್ಯಾಲಿಫೋರ್ನಿಯಾ ಮೂಲದ ಕಂಪನಿಯಾಗಿರುವ ಸ್ಪೇಸ್ ಎಕ್ಸ್, ಚಂದ್ರನ ಸುತ್ತ ಪ್ರವಾಸಿಗರನ್ನು ಕರೆದೊಯ್ಯಲು ಯೋಜನೆ ರೂಪಿಸುತ್ತಿದೆ. 2018ರ ಅಂತ್ಯದಲ್ಲಿ ವಿಶ್ವದ ಮೊದಲ ಇಬ್ಬರು ಅಂತರಿಕ್ಷ ಪ್ರವಾಸಿಗರನ್ನು ಚಂದ್ರನೆಡೆಗೆ ಕಳುಹಿಸಲಾಗುವುದು ಎಂದು ಸಂಸ್ಥೆ ಈ ಹಿಂದೆಯೂ ಪ್ರಕಟಿಸಿತ್ತು.

ಸ್ಪೇಸ್ ಎಕ್ಸ್  ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ ಮೊದಲ ಅಂತರಿಕ್ಷ ಮೂಲಕ ಪ್ರವಾಸಿಗರನ್ನು ಮತ್ತು ವಸ್ತುಗಳನ್ನು ಫಾಲ್ಕನ್ ಭಾರೀ ರಾಕೆಟ್ ಮೂಲಕ ಕಳುಹಿಸಿಕೊಡುವ ಯೋಜನೆಯಲ್ಲಿತ್ತು. ಆದರೆ ಆ ಯೋಜನೆ ಅರ್ಧಕ್ಕೆ ಮೊಟಕುಗೊಂಡಿದ್ದು ಯಾಕೆ ಎಂಬುದು ಕಂಪನಿ ಸ್ಪಷ್ಟಪಡಿಸಿಲ್ಲ. ಇದೀಗ ಬಿಗ್ ಫಾಲ್ಕನ್ ರಾಕೆಟ್ ಮೂಲಕ ಚಂದ್ರನ ಪ್ರವಾಸಕ್ಕೆ ಕಂಪನಿ ಸಜ್ಜಾಗಿದೆ.

Follow Us:
Download App:
  • android
  • ios