ನವದೆಹಲಿ(ಜು.10): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಜನ್ ಧನ್ ಅಕೌಂಟ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಎಲ್ಲರಿಗೂ ಬ್ಯಾಂಕ್ ಅಕೌಂಟ್ ಎಂಬ ಸದುದ್ದೇಶದಿಂದ ಆರಂಭವಾದ ಈ ಯೋಜನೆ ಇದೀಗ ಬರೋಬ್ಬರಿ 1 ಲಕ್ಷ ಕೋಟಿ ರೂ. ಮೌಲ್ಯ ತೂಗುತ್ತಿದೆ.

ಹೌದು, ಜನ್ ಧನ್ ಅಕೌಂಟ್ ಅಟಡಿ ತೆರಯಲಾದ ಖಾತೆಗಳಲ್ಲಿ ಇದೀಗ ಬರೋಬ್ಬರಿ 1 ಲಕ್ಷ ಕೋಟಿ ರೂ. ಜಮಾವಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಒಟ್ಟು 36.06 ಕೋಟಿ ಅಕೌಂಟ್ ತೆರೆಯಲಾಗಿದ್ದು, 1,00,495.94 ರೂ. ಜಮಾವಣೆಗೊಂಡಿದೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಎಲ್ಲರಿಗೂ ಬ್ಯಾಂಕ್ ಅಕೌಂಟ್ ಎಂಬ ಸದುದ್ದೇಶದಿಂದ ಮೋದಿ 1.0 ಸರ್ಕಾರದ ಅವಧಿಯಲ್ಲಿ, ಕಳೆದ ಆಗಸ್ಟ್ 28, 2014ರಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.

ಇನ್ನು 2018ರ ಮಾರ್ಚ್‌ನಲ್ಲಿ 5,10 ಕೋಟಿ(ಶೇ.16.22)ರಷ್ಟು ಅಕೌಂಟ್'ಗಳು ಶೂನ್ಯ ಬ್ಯಾಲೆನ್ಸ್ ಹೊಂದಿದ್ದು, 2019ರ ಮಾರ್ಚ್‌ನಲ್ಲಿ 5.07 ಕೋಟಿ(ಶೇ.14.37)ರಷ್ಟು ಅಕೌಂಟ್'ಳು ಜಿರೋ ಬ್ಯಾಲೆನ್ಸ್ ಹೊಂದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.