Asianet Suvarna News Asianet Suvarna News

ಪ್ರವಾಹ: ಆದಾಯ ತೆರಿಗೆ ಅವಧಿ ವಿಸ್ತರಣೆ!

ಕೇರಳ ಪ್ರವಾಹ ಹಿನ್ನೆಲೆಯಲ್ಲಿ ಐಟಿಆರ್ ಅವಧಿ ವಿಸ್ತರಣೆ! ಆಗಸ್ಟ್ 31 ರ ಬದಲಾಗಿ ಸೆಪಸ್ಟೆಂಬರ್ 15 ಕೊನೆ ದಿನಾಂಕ! ಪ್ರವಾಹದಿಂದ ನಲುಗಿರುವ ಕೇರಳಕ್ಕೆ ಕೇಂದ್ರದ ನೆರವು! ಅವಧಿ ವಿಸ್ತರಣೆ ಕೇವಲ ಕೇರಳ ಜನರಿಗೆ ಮಾತ್ರ

ITR filing deadline extended to 15th September for Kerala assessees
Author
Bengaluru, First Published Aug 28, 2018, 7:43 PM IST

ನವದೆಹಲಿ(ಆ.28): ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಐಟಿಆರ್ ಸಲ್ಲಿಸಲು ಇದೇ ಆಗಸ್ಟ್ 31 ಕೊನೆ ದಿನಾಂಕವಾಗಿತ್ತು. ಆದರೆ ಪ್ರವಾಹದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈ ಅವಧಿಯನ್ನು ಸೆಪ್ಟೆಂಬರ್ 15 ರ ವರೆಗೆ ವಿಸ್ತರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್, ವಿವಿಧ ವಿಭಾಗಗಳ ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ. ಪ್ರಸಕ್ತ ಸಾಲಿನಿಂದ ಆದಾಯ ತೆರಿಗೆ ಸಲ್ಲಿಕೆ ಗಡುವು ಮೀರಿದರೆ ತೆರಿಗೆದಾರರು ದಂಡ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಹದಿಂದ ನಲುಗಿರುವ ಕೇರಳ ಜನರಿಗೆ ಆಗಸ್ಟ್ 31ರ ಅವಧಿ ಸಾಕಾಗದು ಎಂದು ಅಭಿಪ್ರಾಯಪಡಲಾಗಿದೆ.

ತೆರಿಗೆದಾರರ ಮನವಿ ಪುರಸ್ಕರಿಸಿರುವ ಕೇಂದ್ರ ಹಣಕಾಸು ಇಲಾಖೆ, ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ಸೆಪ್ಟೆಂಬರ್ 15 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಹಣಕಾಸು ಇಲಾಖೆ, ತೆರಿಗೆದಾರರ ಮನವಿ ಪುರಸ್ಕರಿಸಿದ್ದು, ಆದಾಯ ತೆರಿಗೆ ಸಲ್ಲಿಕೆಯ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15 ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.  
 

Follow Us:
Download App:
  • android
  • ios