Asianet Suvarna News Asianet Suvarna News

2 ಮದ್ಯ ಕಂಪನಿಗಳಿಂದ 700 ಕೋಟಿ ರೂ. ತೆರಿಗೆ ಗೋಲ್‌ಮಾಲ್‌!

ತ.ನಾಡಿನ 2 ಮದ್ಯ ಕಂಪನಿಗಳಿಂದ .700 ಕೋಟಿ ತೆರಿಗೆ ಗೋಲ್‌ಮಾಲ್‌!| ಆದಾಯ ತೆರಿಗೆ ದಾಳಿ ವೇಳೆ ಭಾರಿ ಅಕ್ರಮ ಪತ್ತೆ| ಕಡಿಮೆ ವೆಚ್ಚದ ಕಚ್ಚಾ ಸಾಮಗ್ರಿಗೆ ಹೆಚ್ಚು ಬಿಲ್‌ ಪಾವತಿ| ಬಳಿಕ ಸರಬರಾಜುದಾರರಿಂದ ನಗದು ರೂಪದಲ್ಲಿ ಹಣ ವಾಪಸ್‌

IT raids on two liquor manufacturers in Tamil Nadu unearths undisclosed income of Rs 700 crore
Author
Bangalore, First Published Aug 12, 2019, 7:58 AM IST
  • Facebook
  • Twitter
  • Whatsapp

ಚೆನ್ನೈ[ಆ.12]: ಬಿಯರ್‌ ಹಾಗೂ ಭಾರತ ನಿರ್ಮಿತ ವಿದೇಶಿ ಮದ್ಯ (ಐಎಂಎಫ್‌ಎಲ್‌) ತಯಾರಿಸುವ ತಮಿಳುನಾಡಿನ ಎರಡು ಪ್ರಮುಖ ಕಂಪನಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಬರೋಬ್ಬರಿ 700 ಕೋಟಿ ರು. ನಷ್ಟುಅಕ್ರಮ ಆದಾಯ ಪತ್ತೆಯಾಗಿದೆ.

ಮಂಗಳವಾರ ಬೆಳಗ್ಗೆಯಿಂದ ಚೆನ್ನೈ, ಕೊಯಮತ್ತೂರು, ತಂಜಾವೂರು ಹಾಗೂ ಕೇರಳ, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಯರ್‌ ಹಾಗೂ ಐಎಂಎಫ್‌ಎಲ್‌ನ ಪ್ರಮುಖ ಉತ್ಪಾದಕ ಸಂಸ್ಥೆಗಳಾಗಿರುವ ಈ ಎರಡೂ ಕಂಪನಿಗಳು ಭಾರಿ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಅಕ್ರಮ ಪತ್ತೆಯಾಗಿದೆ.

ಗೋಲ್‌ಮಾಲ್‌ ಹೇಗೆ?:

ಮದ್ಯ ಉತ್ಪಾದನೆಯಲ್ಲಿ ಪ್ರಮುಖವಾಗಿ ಆಗುವ ವೆಚ್ಚ ಕಚ್ಚಾ ವಸ್ತು ಹಾಗೂ ಬಾಟಲಿಗಳ ಖರೀದಿಗೆ ಪಾವತಿಸುವ ಹಣ. ಈ ವಸ್ತುಗಳ ಖರೀದಿಗೆ ಕಂಪನಿಗಳು ದುಬಾರಿ ಮೊತ್ತ ಪಾವತಿಸುತ್ತಿದ್ದವು. ಸರಬರಾಜು ಕಂಪನಿಗಳಿಂದ ದುಬಾರಿ ಮೊತ್ತದ ಬಿಲ್‌ ಪಡೆದು, ಅಷ್ಟೇ ಹಣವನ್ನು ಚೆಕ್‌ ಅಥವಾ ಆರ್‌ಟಿಜಿಎಸ್‌ ಮೂಲಕ ವರ್ಗಾಯಿಸುತ್ತಿದ್ದವು. ಹಣ ಪಡೆದ ಸರಬರಾಜುದಾರರು ಮದ್ಯ ಕಂಪನಿಗಳ ನಿಷ್ಠ ಅಧಿಕಾರಿಗಳಿಗೆ ನಗದು ರೂಪದಲ್ಲಿ ಹಣ ಮರಳಿಸುತ್ತಿದ್ದರು. ಇದೇ ರೀತಿ ಮಾಡಿ ಒಂದು ಕಂಪನಿ 400 ಕೋಟಿ ರು. ಅಕ್ರಮ ಆದಾಯ ಗಳಿಸಿದ್ದರೆ, ಮತ್ತೊಂದು ಕಂಪನಿ ಬಳಿ ಇದೇ ರೀತಿಯ 300 ಕೋಟಿ ರು.ನಷ್ಟುಅಕ್ರಮ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios