Asianet Suvarna News Asianet Suvarna News

ಮಾರುಕಟ್ಟೆಯಲ್ಲಿ ಕೇವಲ ಷೇರು ಖರೀದಿ ಮೂರ್ಖತನ, ಸತ್ಯ ಬಿಚ್ಚಿಟ್ಟ ಝೆರೋಧಾ ಸಂಸ್ಥಾಪಕ

* ಷೇರು ಮಾರುಕಟ್ಟೆಯಲ್ಲಿ ತಲ್ಲಣ

* Zerodha ಸಂಸ್ಥಾಪಕ ನಿತಿನ್ ಕಾಮತ್ ಮಹತ್ವದ ಹೇಳಿಕೆ

* ಬೆಳೆಯುತ್ತಿರೋ ಮಾರುಕಟ್ಟೆಯಲ್ಲಿ ಕೇವಲ ಷೇರು ಖರೀದಿ ಮೂರ್ಖತನ

It is stupid to buy only stocks Zerodha founder Nithin Kamath pod
Author
Bangalore, First Published Apr 5, 2022, 4:40 PM IST

ನವದೆಹಲಿ(ಏ.05): ಕಳೆದ 2-3 ತಿಂಗಳುಗಳಲ್ಲಿ, ಷೇರು ಮಾರುಕಟ್ಟೆಯ ದೃಷ್ಟಿಯಿಂದ ಸೂಕ್ತವಲ್ಲದ ಅನೇಕ ಬೆಳವಣಿಗೆಗಳು ನಡೆದಿವೆ, ಹೀಗಿದ್ದರೂ ಈಗ ಷೇರುಪೇಟೆಯಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬಂದಿದೆ. ಅತ್ತ Zerodha ಸಂಸ್ಥಾಪಕ ನಿತಿನ್ ಕಾಮತ್ ಕೂಡ ಈ ಏರಿಳಿತದ ಮೇಲೆ ಕಣ್ಣಿಟ್ಟಿದ್ದಾರೆ, ಆದರೆ ಹೂಡಿಕೆದಾರರು ಷೇರುಗಳನ್ನು ಮಾತ್ರ ಖರೀದಿಸುವುದು ಮೂರ್ಖತನ ಎಂದು ಅವರು ಕರೆದಿದ್ದಾರೆ.

ಈಕ್ವಿಟಿಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಡಿ ಎಂದು ಹೂಡಿಕೆದಾರರನ್ನು ಕೋರಿದ ನಿತಿನ್ ಕಾಮತ್, “ಕೇವಲ ಷೇರುಗಳನ್ನು ಖರೀದಿಸುವುದು ಮೂರ್ಖತನ. ಇದು ಬುಲ್ ಮಾರ್ಕೆಟ್‌ ಜನರಿಗೆ ಅರ್ಥವಾಗದ ವಿಷಯ. ಸ್ಥಿರ ಆದಾಯ ಅಥವಾ ಸಾಲ ಮತ್ತು ಈಕ್ವಿಟಿಯ ಉತ್ತಮ ಮಿಶ್ರಣವನ್ನು ಹೊಂದುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ, ಇದರಿಂದ ಮಾರುಕಟ್ಟೆ ಕುಸಿದರೂ ಸಹ, ನೀವು ಹೆಚ್ಚು ತೊಂದರೆಗೆ ಒಳಗಾಗುವುದಿಲ್ಲ ಎಂದಿದ್ದಾರೆ.

ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಒಂದು ತಿಂಗಳಲ್ಲಿ ದೇಶೀಯ ಹೂಡಿಕೆದಾರರ ಭಾರೀ ಖರೀದಿಯಿಂದಾಗಿ ಶೇಕಡಾ 13 ರಷ್ಟು ಲಾಭ ಗಳಿಸಿವೆ, ಆದರೆ ವಿದೇಶಿ ಹೂಡಿಕೆದಾರರು ಮಾರ್ಚ್‌ನಲ್ಲಿ ಮಾರುಕಟ್ಟೆಯಿಂದ 41,000 ಕೋಟಿ ರೂ ಪಡೆದಿದೆ.

ಮುಂದೆ ಅನೇಕ ಸಮಸ್ಯೆಗಳು

ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿತಿನ್ ಕಾಮತ್, “ಕೋವಿಡ್ ಮಾಯವಾಗಿದೆಯೇ ಎಂದು ನಮಗೆ ತಿಳಿದಿಲ್ಲ. ಇದು ಚೀನಾದಲ್ಲಿ ಮತ್ತೆ ಕಾಣಿಸಿಕೊಂಡಿದೆ, ಅತ್ತ ಹಣದುಬ್ಬರವೂ ಇದೆ. ಹಣದುಬ್ಬರದ ಹೊರತಾಗಿ, ಲಿಕ್ವಿಡಿಟಿಯ ಹಲವಾರು ಎರಡನೇ ಮತ್ತು ಮೂರನೇ ಕ್ರಮಾಂಕದ ಪರಿಣಾಮಗಳು ಇರಬಹುದು. ಅಲ್ಲದೇ ನಾವು ಇನ್ನೂ ದೇಶಕ್ಕೆ ವಿದೇಶಿ ಒಳಹರಿವಿನ ಮೇಲೆ ಅವಲಂಬಿತರಾಗಿದ್ದೇವೆ. ವಿದೇಶಿ ಹೂಡಿಕೆದಾರರಿಂದ ದೊಡ್ಡ ಪ್ರಮಾಣದ ಹಿಂಪಡೆಯುವಿಕೆ ಕೂಡ ಅಪಾಯ ಎಂಬುವುದು ಗಮನಾರ್ಹ. ಇದಲ್ಲದೆ, ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಸಹ ಹಾಗೇ ಉಳಿದಿವೆ. ಯುದ್ಧವು ಉಲ್ಬಣಗೊಂಡರೆ, ಅದು ದೊಡ್ಡ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ಕಳೆದ 2 ವರ್ಷಗಳಲ್ಲಿ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ದ್ವಿಗುಣಗೊಂಡಿದೆ. ಈ ವರ್ಷದ ಜನವರಿಯಲ್ಲಿಯೇ ದಾಖಲೆಯ 34 ಲಕ್ಷ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಅರೆಕಾಲಿಕ ವ್ಯಾಪಾರವೂ ಹೆಚ್ಚುತ್ತಿದೆ ಎಂದಿದ್ದಾರೆ ನಿತಿನ್ ಕಾಮತ್.

Follow Us:
Download App:
  • android
  • ios