Asianet Suvarna News Asianet Suvarna News

ಇಸ್ರೋ PSLV ರಾಕೆಟ್‌ ಉತ್ಪಾದನೆ ಈಗ ಖಾಸಗೀಕರಣ!

ಇಸ್ರೋ ಪಿಎಸ್‌ಎಲ್‌ವಿ ರಾಕೆಟ್‌ ಉತ್ಪಾದನೆ ಈಗ ಖಾಸಗೀಕರಣ| 5 ರಾಕೆಟ್‌ಗಾಗಿ ಖಾಸಗಿ ಕಂಪನಿಗಳಿಗೆ ಇಸ್ರೋ ಆಹ್ವಾನ| ತಂತ್ರಜ್ಞಾನ ವರ್ಗಾವಣೆ 1000 ಕೋಟಿ ರು. ಡೀಲ್‌

ISRO new commercial arm invites private sector to make PSLV rockets
Author
Bangalore, First Published Aug 18, 2019, 12:41 PM IST

ನವದೆಹಲಿ[ಆ.18]: ಆ.15ಕ್ಕೆ 50 ವಸಂತಗಳನ್ನು ಪೂರೈಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಯಶಸ್ವಿ ಪಿಎಸ್‌ಎಲ್‌ವಿ ರಾಕೆಟ್‌ ಉತ್ಪಾದನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈಗಾಗಲೇ 5 ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ಉತ್ಪಾದಿಸಿಕೊಡುವಂತೆ ಖಾಸಗಿ ಕಂಪನಿಗಳಿಗೆ ಆಹ್ವಾನವಿತ್ತಿದೆ.

ಸ್ವತಃ ಇಸ್ರೋ ಅಧ್ಯಕ್ಷ ಕೆ. ಶಿವನ್‌ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ದೇಶೀಯ ಖಾಸಗಿ ಕಂಪನಿಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿಯನ್ನು ಕರೆದಿದ್ದೇವೆ. ಆದರೆ ವಿದೇಶಿ ಕಂಪನಿಗಳಿಗೆ ಅವಕಾಶವಿಲ್ಲ. ಈ ಬಗ್ಗೆ ಇಸ್ರೋದಲ್ಲಿ ಬಹಳ ಹಿಂದಿನಿಂದ ಪರಿಶೀಲನೆ ನಡೆಯುತ್ತಿತ್ತು. ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಪ್ರಯತ್ನಕ್ಕೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದ್ದಾರೆ.

ಆಯ್ಕೆಯಾಗುವ ಖಾಸಗಿ ಕಂಪನಿಗಳಿಗೆ ಪಿಎಸ್‌ಎಲ್‌ವಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಇಸ್ರೋ ವರ್ಗಾಯಿಸಿಕೊಡಲಿದೆ. ಪ್ರತಿ ರಾಕೆಟ್‌ಗೆ 200 ಕೋಟಿ ರು. ಖರ್ಚಾಗುತ್ತದೆ. ಅದರಂತೆ 5 ರಾಕೆಟ್‌ಗೆ 1000 ಕೋಟಿ ರು. ವೆಚ್ಚವಾಗುತ್ತದೆ. ಹೀಗಾಗಿ 1 ಸಾವಿರ ಕೋಟಿ ರು. ಡೀಲ್‌ ಇದಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಶಿವನ್‌ ಅವರು ಖರ್ಚು- ವೆಚ್ಚದ ಮಾಹಿತಿಯನ್ನು ನೀಡಿಲ್ಲ.

Follow Us:
Download App:
  • android
  • ios