ನವದೆಹಲಿ(ಸೆ.2): ಫಾರ್ಚೂನ್ ನಿಯತಕಾಲಿಕೆಯಿಂದ ಜಾಗತಿಕ ಮಟ್ಟದಲ್ಲಿ ಪ್ರಭಾವಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದೆ. ಇದರ ವಿಶೇಷ ಏನೆಂದರೆ, ಇವರೆಲ್ಲ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಹಾಗೂ ಆರಿಸಿರುವುದು 40 ಮಂದಿಯನ್ನು ಮಾತ್ರ. ಆದ್ದರಿಂದಲೇ ಈ ಆಯ್ಕೆಯನ್ನು 40ರ ಕೆಳಗಿನ 40 (40 Under 40) ಎಂದು ಕರೆಯಲಾಗಿದೆ.

ಬಿಗ್‌ ಬಜಾರನ್ನೇ ಶಾಪಿಂಗ್‌ ಮಾಡಿದ ಮುಕೇಶ್‌ ಅಂಬಾನಿ!

ಹಣಕಾಸು, ತಂತ್ರಜ್ಞಾನ, ಹೆಲ್ತ್ ಕೇರ್, ಸರ್ಕಾರ ಮತ್ತು ರಾಜಕೀಯ ಹಾಗೂ ಮಾಧ್ಯಮ ಮತ್ತು ಮನರಂಜನೆ- ಈ ಐದು ವಿಭಾಗಗಳಲ್ಲಿ ಜಾಗತಿಕ ಮಟ್ಟದ ಪ್ರಭಾವಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ತಂತ್ರಜ್ಞಾನ ವಿಭಾಗದಿಂದ ಇಶಾ ಹಾಗೂ ಆಕಾಶ್ ಅಂಬಾನಿ ಆಯ್ಕೆಯಾಗಿದ್ದಾರೆ. ಭಾರತದ ಅತಿ ದೊಡ್ಡ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ ಅವರ ಮಕ್ಕಳು ಇವರಿಬ್ಬರು.

ರಿಲಯನ್ಸ್ ಒಂದು ಕೌಟುಂಬಿಕ ಉದ್ಯಮವಾಗಿ ನಡೆದುಕೊಂಡು ಬರುತ್ತಿದೆ. ಆಕಾಶ್ ಕಂಪೆನಿಗೆ ಸೇರಿದ್ದು 2014ರಲ್ಲಿ. ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿ ಪಡೆದ ನಂತರ ಕಂಪೆನಿಗೆ ಸೇರ್ಪಡೆಯಾದರು. ಇನ್ನು ಇಶಾ ಅವರು ಸೇರ್ಪಡೆ ಆಗಿದ್ದು ಒಂದು ವರ್ಷದ ನಂತರ. ಅದಕ್ಕೂ ಮುನ್ನ ಯೇಲ್, ಸ್ಟ್ಯಾನ್ ಫೋರ್ಡ್ ಮತ್ತು ಮೆಕ್ ಕಿನ್ಸಿಯಲ್ಲಿ ವ್ಯಾಸಂಗ ಮಾಡಿದ್ದರು.

ಫೇಸ್ ಬುಕ್ ನಿಂದ ಜಿಯೋ ಇನ್ಫೋಕಾಮ್ ನಲ್ಲಿ 9.99% ಷೇರಿನ ಪಾಲನ್ನು 5.7 ಬಿಲಿಯನ್ USDಗೆ ಖರೀದಿ ಮಾಡುವಲ್ಲಿ ಜಿಯೋ ಮಂಡಳಿ ಸದಸ್ಯರಾಗಿರುವ ಇಶಾ ಹಾಗೂ ಆಕಾಶ್ ಮುಖ್ಯ ಪಾತ್ರ ವಹಿಸಿದರು. ಅಷ್ಟೇ ಅಲ್ಲ, ಆ ನಂತರ ಗೂಗಲ್, ಕ್ವಾಲ್ ಕಾಮ್ ಮತ್ತು ಇಂಟೆಲ್ ನಿಂದ ಜಿಯೋ ಇನ್ಫೋಕಾಮ್ ನಲ್ಲಿ ಹೂಡಿಕೆ ಆಗುವಂತೆ ಮಾಡುವಲ್ಲಿಯೂ ಇವರಿಬ್ಬರ ಪರಿಶ್ರಮವೂ ಇದೆ. ಈ ಎಲ್ಲದರಿಂದ ಸೇರಿ 65 ಬಿಲಿಯನ್ USD ಖಾಸಗಿ ಹೂಡಿಕೆ ಹರಿದುಬಂದಿದೆ. ಜಿಯೋಮಾರ್ಟ್ ಈಚೆಗೆ ಆರಂಭ ಮಾಡುವುದರಲ್ಲಿ ಆಕಾಶ್ ಮತ್ತು ಇಶಾ ನೆರವು ಇದೆ.

ಸದ್ಯಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಮುನ್ನಡೆಸುವಲ್ಲಿ ಇಶಾ ಅಂಬಾನಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಈಚೆಗೆ ನೆಟ್ ಮೆಡ್ಸ್ ಮತ್ತು ಫ್ಯೂಚರ್ ಸಮೂಹ ಖರೀದಿಯ ವ್ಯವಹಾರ ಒಪ್ಪಂದ ಯಶಸ್ವಿಯಾಗಿ ಆಗಿದೆ.